ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಸ್ಕೋಸಿನ್ ಗೆದ್ದ ಬೈಡನ್, ಶೇ 50 ದಾಟಿದ ಮತ ಗಳಿಕೆ

|
Google Oneindia Kannada News

ವಾಷಿಂಗ್ಟನ್, ನ .5: ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್‌ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಇದರಲ್ಲಿ ಇಬ್ಬರೂ ನಾಯಕರ ನಡುವೆ ನಿಕಟ ಪೈಪೋಟಿ ನಡೆಯುತ್ತಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ವಿಸ್ಕೋಸಿನ್, ನೆವಡಾ, ಅರಿಜೋನಾ, ಮಿಚಿಗನ್, ಪೆನ್ಸೆಲ್ವೇನಿಯಾ, ಜಾರ್ಜಿಯಾ ಹಾಗೂ ನಾರ್ಥ್ ಕರೋಲಿನಾ ರಾಜ್ಯಗಳ ಫಲಿತಾಂಶ ಅಂತಿಮ ಫಲಿತಾಂಶ ನೀಡಬಲ್ಲದು. ವಿಸ್ಕೋಸಿನ್ ನಲ್ಲಿ ಬೈಡನ್ ಗೆಲುವು ದಾಖಲಿಸುವ ಮೂಲಕ 10 ಎಲೆಕ್ಟೋರಲ್ ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಅಸೋಸಿಯೇಷನ್ ಪ್ರೆಸ್ ಹಾಗೂ ಸಿಎನ್ಎನ್ ವರದಿ ಮಾಡಿದೆ. ಅಧಿಕೃತ ಫಲಿತಾಂಶ ಇನ್ನೂ ಹೊರ ಬಂದಿಲ್ಲ.ಈ ರಾಜ್ಯ ಗೆದ್ದರೆ ಬೈಡನ್ ಪರ ಎಲೆಕ್ಟೊರಲ್ ಮತಗಳು 248ಕ್ಕೆ ಏರಿಕೆಯಾಗಿವೆ. ಟ್ರಂಪ್ 214 ಮತಗಳನ್ನು ಪಡೆದಿದ್ದಾರೆ.

US Election ಯಾವಾಗ ಫಲಿತಾಂಶ?, ರಿಸಲ್ಟ್ ವಿಳಂಬದ ಬಗ್ಗೆ ಟ್ರಂಪ್ ಗರಂUS Election ಯಾವಾಗ ಫಲಿತಾಂಶ?, ರಿಸಲ್ಟ್ ವಿಳಂಬದ ಬಗ್ಗೆ ಟ್ರಂಪ್ ಗರಂ

ಆದರೆ, ವಿಸ್ಕೋಸಿನ್ ಹಾಗೂ ಮಿಚಿಗನ್ ರಾಜ್ಯಗಳಲ್ಲಿ ಮತಗಳ ಮರು ಎಣಿಕೆಗೆ ಕೋರಿ ಟ್ರಂಪ್ ಪರ ಪ್ರಚಾರಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ನಡುವೆ ಟೆಕ್ಸಾಸ್ ನಲ್ಲಿ ಅಂಚೆ ಮತಗಳನ್ನು ಎಣಿಕೆಗೆ ಒದಗಿಸುವಂತೆ ಕೋರ್ಟ್ ಸೂಚಿಸಿದೆ

US Election results: Joe Biden wins Wisconsin

ನವೆಂಬರ್ 05 ಸಮಯ 00: 50 IST ಕ್ಕೆ ಎಲೆಕ್ಟೊರಲ್ ಮತದಾನದಲ್ಲಿ ಜೋ ಬೈಡೆನ್ ಶೇ 50.15ರಷ್ಟು (70,343, 018 ಮತ)ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್(67,660,501 ಮತಗಳು) ಶೇ 48.23 ಮತಗಳನ್ನು ಪಡೆದಿದ್ದಾರೆ

ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್‌ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಅರಿಜೋನಾ, ಮಿನ್ನೆಸೊಟಾ ಮುಂತಾದ ಪ್ರಮುಖ ಎಲೆಕ್ಟೊರಲ್ ಮತಗಳ ರಾಜ್ಯಗಳಲ್ಲಿ ಜೋ ಬೈಡೆನ್ ಜಯಗಳಿಸಿದ್ದಾರೆ. ಫ್ಲೋರಿಡಾ, ಲೋವಾ, ಓಹಿಯೊ, ಟೆಕ್ಸಾಸ್‌ನಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಎಪಿ ಎಕ್ಸಿಟ್ ಪೋಲ್: ಟ್ರಂಪ್ ಆಡಳಿತದ ಬಗ್ಗೆ ಮತದಾರ ಗರಂ ಎಪಿ ಎಕ್ಸಿಟ್ ಪೋಲ್: ಟ್ರಂಪ್ ಆಡಳಿತದ ಬಗ್ಗೆ ಮತದಾರ ಗರಂ

ಯಾವಾಗ ಫಲಿತಾಂಶ ನಿರೀಕ್ಷಿಸಬಹುದು
ಬುಧವಾರ (ನವೆಂಬರ್ 4) : ವಿಸ್ಕೋಸಿನ್, ಮಿಚಿಗನ್, ಜಾರ್ಜಿಯಾ ಹಾಗೂ ಅರಿಜೋನಾ
ಶುಕ್ರವಾರ (ನವೆಂಬರ್ 6) : ಪೆನ್ಸೆಲ್ವೇನಿಯಾ
ಮಂಗಳವಾರ (ನವೆಂಬರ್ 10): ನೆವಾಡಾ, ಅಲಾಸ್ಕಾ (ಅಂಚೆ ಮತಗಳ ಎಣಿಕೆ)
ಗುರುವಾರ (ನವೆಂಬರ್ 12): ನಾರ್ಥ್ ಕರೋಲಿನಾ (ಅಂಚೆ ಮತಗಳ ಎಣಿಕೆ)

English summary
Joe Biden has won the key state and its 10 Electoral votes reported The Associated Press. It takes 270 electoral votes to win the 2020 presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X