ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗೆ 8 ಕೋಟಿ ಮತ!

|
Google Oneindia Kannada News

ವಾಶಿಂಗ್ಟನ್, ನವೆಂಬರ್.19: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ-2020ರಲ್ಲಿ ಮೊದಲ ಬಾರಿಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಐತಿಹಾಸಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ಭದ್ರಕೋಟೆ ಎನಿಸಿರುವ ಕ್ಷೇತ್ರಗಳಲ್ಲಿ ಮತಎಣಿಕೆ ನಡೆಸುತ್ತಿರುವುದರಿಂದ ಬಿಡೆನ್ ಅವರು ಪಡೆದ ಮತಗಳ ಸಂಖ್ಯೆ 8 ಕೋಟಿ ದಾಟಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಈಗಾಗಲೇ ಅತಿಹೆಚ್ಚು ಮತಗಳನ್ನು ಪಡೆದ ದಾಖಲೆ ಬರೆದಿದ್ದಾರೆ. ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅತಿಕಡಿಮೆ ಮತಗಳಿಂದ ಸೋತ ಅಭ್ಯರ್ಥಿ ಎಂಬ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ವಿಸ್ಕೋಸಿನ್ ಗೆದ್ದ ಬೈಡನ್, ಶೇ 50 ದಾಟಿದ ಮತ ಗಳಿಕೆ ವಿಸ್ಕೋಸಿನ್ ಗೆದ್ದ ಬೈಡನ್, ಶೇ 50 ದಾಟಿದ ಮತ ಗಳಿಕೆ

ಯುಎಸ್ಎನಲ್ಲಿ ಈಗಾಗಲೇ 15 ಕೋಟಿ 50 ಲಕ್ಷ ಮತಗಳ ಎಣಿಕೆ ಮಾಡಲಾಗಿದ್ದು, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ನಲ್ಲಿ ಮತಎಣಿಕೆ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ. 1908ರಿಂದ ಈಚೆಗೆ ಶೇ.65ರಷ್ಟು ಮತಗಳು ಸಿಂಧುವಾಗಿದ್ದು ಕೂಡಾ ದಾಖಲೆಯಾಗಿದೆ ಎಂದು ಅಸೋಸಿಯೇಟ್ ಪ್ರೆಸ್ ಮತ್ತು ಯುಎಸ್ ಎಲೆಕ್ಷನ್ ಪ್ರಾಜೆಕ್ಟ್ ಅಂಕಿ-ಅಂಶಗಳು ತಿಳಿಸಿವೆ.

6 ಕೋಟಿಗೂ ಅಧಿಕ ಮತಗಳನ್ನು ಗಳಿಸಿರುವ ಬಿಡೆನ್

6 ಕೋಟಿಗೂ ಅಧಿಕ ಮತಗಳನ್ನು ಗಳಿಸಿರುವ ಬಿಡೆನ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ತಾವೇ ಗೆದ್ದಿರುವುದಾಗಿ ಒಂದು ಕಡೆ ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ ಜೋ ಬಿಡೆನ್ ಗೆಲುವಿನ ಮತಗಳ ಅಂತರ ಹೆಚ್ಚುತ್ತಿದೆ. ಈಗಾಗಲೇ 6 ಕೋಟಿಗೂ ಅಧಿಕ ಮತಗಳು ಜೋ ಬಿಡೆನ್ ಖಾತೆಯಲ್ಲಿ ಜಮೆಯಾಗಿವೆ. ಡೊನಾಲ್ಡ್ ಟ್ರಂಪ್ ಕೇವಲ ಸದ್ದು-ಗದ್ದಲದಲ್ಲೇ ನಿರತರಾಗಿದ್ದಾರೆ, ತಮ್ಮ ಚೀನಾ ಅಂಗಡಿಯನ್ನು ಅವರೊಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ. ಎಲ್ಲವೂ ಶಾಂತವಾದ ನಂತರದಲ್ಲಿ ಜೋ ಬಿಡೆನ್ ದಾಖಲೆ ಗೆಲುವು ಸಾಧಿಸಲಿದ್ದಾರೆ ಎಂದು ಖ್ಯಾತ ಇತಿಹಾಸ ತಜ್ಞ ಡೌಗ್ಲಾಸ್ ಬ್ರಿಂಕ್ಲೆ ಹೇಳಿದ್ದಾರೆ.

ಜೋ ಬಿಡೆನ್ ಮತ್ತು ಟ್ರಂಪ್ ನಡುವೆ ಅಂತರ

ಜೋ ಬಿಡೆನ್ ಮತ್ತು ಟ್ರಂಪ್ ನಡುವೆ ಅಂತರ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 290 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 232 ಮತಗಳೊಂದಿಗೆ ಸೋಲು ಕಂಡಿದ್ದಾರೆ. ಇಷ್ಟಲ್ಲದೇ ಒಟ್ಟು 306 ಕ್ಷೇತ್ರಗಳಲ್ಲಿ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ.

ಆರಂಭದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಟ್ರಂಪ್

ಆರಂಭದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಟ್ರಂಪ್

ಅಮೆರಿಕಾ ಚುನಾವಣೆಯ ಆರಂಭಿಕ ಮತಎಣಿಕೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ 70,000 ಮತಗಳನ್ನು ಪಡೆದುಕೊಂಡು ಗೆಲುವಿನ ಭರವಸೆ ಮೂಡಿಸಿದ್ದರು. ಅರಿಜೋನಾ, ಜಾರ್ಜಿಯಾ ಮತ್ತು ವಿಸ್ಕೋನ್ಸಿನ್ ದಲ್ಲಿ ಜೋ ಬಿಡೆನ್ ಟ್ರಂಪ್ ನಡುವೆ ಮತಗಳ ಅಂತರವು 45,000ರಷ್ಟಿತ್ತು. ಅರಿಜೋನಾದಲ್ಲಿ 12,000 ಮತ್ತು ವಿಸ್ಕೋನ್ಸಿನ್ ನಲ್ಲಿ 20,000 ಮತಗಳ ಅಂತರವಿದೆ. ಗೆಲುವಿನ ಅಂತರವು ಕಡಿಮೆಯಾಗಿದ್ದು, ಚುನಾವಣೆಯ ಕಾನೂನು ಮಾನದಂಡಗಳಿಂದ ಇನ್ನೂ ನಿರ್ಣಾಯಕವಾಗಿದೆ ಎಂದು ಇರ್ವಿನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಮತದಾನದ ಪರಿಣಿತ ರಿಕ್ ಹಸೆನ್ ಹೇಳಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಗೆಲುವು

ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಗೆಲುವು

ಕಳೆದ 1960ರಿಂದ ಈಚೆಗೆ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳಲ್ಲೇ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಏಕೈಕ ಅಭ್ಯರ್ಥಿ ಎಂಬ ಖ್ಯಾತಿಗೆ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಪಾತ್ರರಾಗಿದ್ದಾರೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಇತಿಹಾಸ ತಜ್ಞ ತಿಮೋಥಿ ನಫ್ತಾಲಿ ತಿಳಿಸಿದ್ದಾರೆ. ಬಿಡೆನ್ ಗೆಲುವು ಇನ್ನೂ ಮಧ್ಯಮ ಕ್ರಮಾಂಕದಲ್ಲಿದೆ. 2008ರಲ್ಲಿ ಬರಾಕ್ ಒಬಾಮಾ ಮತ್ತು 1984ರಲ್ಲಿ ರೊನಾಲ್ಡೋ ರಿಗಾನ್ಸ್ ಕಾಲದಲ್ಲಿನ ಪೈಪೋಟಿಯಿಲ್ಲ. 2016ರಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಜಾರ್ಜ್ ಡಬ್ಲ್ಯೂ ಬುಷ್ ಗೆಲುವಿನ ಅಂತರಕ್ಕಿಂತ ಬಿಡೆನ್ ಗೆಲುವಿನ ಅಂತರವು ಬಹಳಷ್ಟು ವಿಶಾಲವಾಗಿದೆ.

English summary
US Election Result: Joe Biden Reaches 80 Million Votes In Historic Victory. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X