• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಗೆಲ್ಲುತ್ತಾರಾ ಟ್ರಂಪ್..? ಸೋಲುತ್ತಾರಾ ಬಿಡೆನ್..?

|

ಟ್ರಂಪ್ ಹಾಗೂ ಬಿಡೆನ್ ನಡುವಿನ 3ನೇ ಮತ್ತು ಕೊನೆಯ ಡಿಬೆಟ್ ಇಂದು ನಡೆಯಲಿದ್ದು, ಇಡೀ ಜಗತ್ತಿನ ದೃಷ್ಟಿ ಅತ್ತ ನೆಟ್ಟಿದೆ. ಸುಮಾರು 6 ದಶಕಗಳ ಇತಿಹಾಸ ಹೊಂದಿರುವ ಅಮೆರಿಕ ಎಲೆಕ್ಷನ್ ಡಿಬೆಟ್ 2020ರಲ್ಲಿ ಬಹುದೊಡ್ಡ ಬದಲಾವಣೆಗಳನ್ನ ಕಾಣುತ್ತಿದೆ. ಸೆಪ್ಟೆಂಬರ್ 29ರಂದು ನಡೆದಿದ್ದ ಮೊದಲ ಡಿಬೆಟ್‌ ಅವಾಂತರಕ್ಕೆ ಸಾಕ್ಷಿಯಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಬಿಡೆನ್ ಮಾತನಾಡುವಾಗ ಮಧ್ಯಪ್ರವೇಶ ಮಾಡಿದ್ದರು. ಇದು ಚರ್ಚೆಯನ್ನೇ ಹಳ್ಳ ಹಿಡಿಸಿ, ನಗೆಪಾಟಲಿಗೆ ಈಡಾಯಿತು.

ಹೀಗೆ ಅಕ್ಟೋಬರ್ 15ರಂದು ನಿರ್ಧರಿತವಾಗಿದ್ದ ಡಿಬೆಟ್ ರದ್ದಾಗಿತ್ತು. ಟ್ರಂಪ್‌ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಡಿಬೆಟ್ ಕ್ಯಾನ್ಸಲ್ ಆಗಿತ್ತು. ಇಂದು 3ನೇ ಹಾಗೂ ಕೊನೆಯ ಡಿಬೆಟ್ ನಡೆಯಲಿದ್ದು, ಚರ್ಚೆ ಅಖಾಡದಲ್ಲಿ ಕಾದಾಡಲು ಬಿಡೆನ್ ಹಾಗೂ ಟ್ರಂಪ್ ಸಿದ್ಧರಾಗಿದ್ದಾರೆ. ಆದರೆ ಮೊದಲ ಡಿಬೆಟ್‌ನಲ್ಲಿ ಉಂಟಾದ ಗೊಂದಲ ಬಗೆಹರಿಸಲು ಇಂದಿನ ಚರ್ಚೆ ವೇಳೆ ಅಭ್ಯರ್ಥಿಗಳ ಮೈಕ್ ಮ್ಯೂಟ್‌ಗೆ ನಿರ್ಧರಿಸಲಾಗಿದೆ.

ಬಿಡೆನ್ ಗೆಲುವಿಗೆ ಪಣತೊಟ್ಟ ಒಬಾಮಾ, ಇಂದಿನಿಂದ ಕ್ಯಾಂಪೇನ್ ಅಖಾಡಕ್ಕೆ ಎಂಟ್ರಿ

ಒಬ್ಬ ಅಭ್ಯರ್ಥಿ 2 ನಿಮಿಷಗಳ ಕಾಲ ಮಾತನಾಡಿದ ನಂತರ, ಇನ್ನೊಬ್ಬ ಅಭ್ಯರ್ಥಿಗೆ 2 ನಿಮಿಷ ಕಾಲಾವಕಾಶ ಸಿಗಲಿದೆ. ಈ ಸಂದರ್ಭದಲ್ಲಿ ಮಾತನಾಡುವ ಅಭ್ಯರ್ಥಿಯ ಮೈಕ್ ಮಾತ್ರ ಆನ್ ಆಗಿರುತ್ತದೆ ಹಾಗೂ ಮತ್ತೊಬ್ಬ ಅಭ್ಯರ್ಥಿಯ ಮೈಕ್ ಮ್ಯೂಟ್ ಆಗಿರುತ್ತದೆ. ಈ ಮೂಲಕ ಡಿಬೆಟ್ ಕಮಿಷನ್ ಅಭ್ಯರ್ಥಿಗಳಿಗೆ ಹೊಸ ಮೂಗುದಾರ ಹಾಕಿದೆ.

ಗೆಲ್ಲಲೇಬೇಕಾದ ಒತ್ತಡದಲ್ಲಿ ಡೊನಾಲ್ಡ್ ಟ್ರಂಪ್..!

ಗೆಲ್ಲಲೇಬೇಕಾದ ಒತ್ತಡದಲ್ಲಿ ಡೊನಾಲ್ಡ್ ಟ್ರಂಪ್..!

ಸೆಪ್ಟೆಂಬರ್ 29ರಂದು ನಡೆದಿದ್ದ ಮೊದಲ ಡಿಬೆಟ್‌ ಅಧ್ವಾನ ಎದ್ದೋಗಿತ್ತು. ಟ್ರಂಪ್ ಪದೇಪದೆ ಬಾಯಿಹಾಕಿ ಚರ್ಚೆ ಕೆಡಿಸುವುದಕ್ಕೂ, ಬಿಡೆನ್ ರೊಚ್ಚಿಗೇಳುವುದಕ್ಕೂ. ಇನ್ನೊಂದು ಬದಿಯಲ್ಲಿ ಡಿಬೆಟ್ ನಡೆಸಿಕೊಡುತ್ತಿದ್ದ ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೆ ದೊಡ್ಡ ಗೊಂದಲ ಉಂಟಾಗಿತ್ತು. ಡಿಬೆಟ್ ನೋಡುತ್ತಿದ್ದ ಪ್ರೇಕ್ಷಕರಿಗೆ ಇದರಿಂದ ಭರ್ಜರಿ ಮನರಂಜನೆಯೇನೋ ಸಿಕ್ಕಿತ್ತು. ಹೀಗೆ ಟ್ರಂಪ್ ಮೊದಲನೇ ಡಿಬೆಟ್‌ನಲ್ಲಿ ಸೋತಿದ್ದಾರೆ ಎಂಬುದು ಅವರ ವಿರೋಧಿ ಪಾಳಯದ ತೀರ್ಮಾನ. ಹೀಗಾಗಿ 3ನೇ ಹಾಗೂ ಕೊನೆಯ ಡಿಬೆಟ್‌ನಲ್ಲಿ ಟ್ರಂಪ್ ಗೆಲವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ಡೊನಾಲ್ಡ್ ಟ್ರಂಪ್ ಮನೆಗೆ.. ಜೋ ಬಿಡೆನ್ ವೈಟ್ ಹೌಸ್‌ಗೆ..?

ಕ್ಯಾಂಪೇನ್ ಮರೆತು ಡಿಬೆಟ್‌ಗೆ ಬಿಡೆನ್ ಸಿದ್ಧತೆ

ಕ್ಯಾಂಪೇನ್ ಮರೆತು ಡಿಬೆಟ್‌ಗೆ ಬಿಡೆನ್ ಸಿದ್ಧತೆ

ಅತ್ತ ಮೈಕ್ ಮ್ಯೂಟ್ ಮಾಡಿದ್ದಾರೆ ಅಂತಾ ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೊಣಗಾಡುತ್ತಿದ್ದರೆ, ಇತ್ತ ಬಿಡೆನ್ ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಡಿಬೆಟ್‌ಗೆ ಸಿದ್ಧರಾಗುತ್ತಿದ್ದಾರೆ. ನಿನ್ನೆಯೇ ಬಿಡೆನ್ ತಮ್ಮ ಕ್ಯಾಂಪೇನ್ ಯೋಜನೆಗಳನ್ನ ಕೈಬಿಟ್ಟು, ಡಿಬೆಟ್‌ಗಾಗಿ ವಿಶೇಷ ತಯಾರಿ ತೆಗೆದುಕೊಂಡಿದ್ದಾರೆ. ಡಿಬೆಟ್‌ನಲ್ಲಿ ಪ್ರಮುಖವಾಗಿ 5 ವಿಷಯಗಳ ಬಗ್ಗೆ ಚರ್ಚೆ ಏರ್ಪಡಲಿದ್ದು, ಇದರಲ್ಲಿ ಕೊರೊನಾ ಪರಿಣಾಮ ಹೆಚ್ಚು ಮಹತ್ವ ಪಡೆಯಲಿದೆ. ಏಕೆಂದರೆ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಈವರೆಗೂ 2 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುತ್ತಲೇ ಸಾಗಿದೆ.

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ಅಧ್ಯಕ್ಷೀಯ ಚುನಾವಣೆ ಎದುರಾದಾಗ ಸಾಂಪ್ರದಾಯಿಕವಾಗಿಯೇ ಡಿಬೆಟ್ ನಡೆಸಲಾಗುತ್ತದೆ. ಅಷ್ಟಕ್ಕೂ ಈ ಸಂಪ್ರದಾಯ ಬೆಳೆದು ಬಂದಿದ್ದು 1954ರಲ್ಲಿ, ಅದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಯತ್ನದಿಂದ. ಇದಾದ ಬಳಿಕ 1960ರಲ್ಲಿ ನಡೆದಿದ್ದ ಕೆನಡಿ ಹಾಗೂ ನಿಕ್ಸನ್ ನಡುವಿನ ಚುನಾವಣಾ ಚರ್ಚೆ (Election Debate) ವಿಶ್ವದ ಗಮನ ಸೆಳೆದಿತ್ತು. ಹೀಗೆ ಸುಮಾರು 66 ವರ್ಷಗಳಿಂದಲೂ ಈ ರೀತಿ ಎಲೆಕ್ಷನ್ ಡಿಬೆಟ್ ಸಂಪ್ರದಾಯ ಮುಂದುವರಿದಿದೆ. ಆದರೆ ಕಳೆದ 6 ದಶಕಗಳಲ್ಲೇ ಹೆಚ್ಚು ವಿವಾದ ಸೃಷ್ಟಿಸಿದ್ದು 2020ರ 1ನೇ ಡಿಬೆಟ್. ಒಬ್ಬರು ಮಾತನಾಡುವಾಗ ಮತ್ತೊಬ್ಬ ಅಭ್ಯರ್ಥಿ ಮಧ್ಯಪ್ರವೇಶ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಡಿಬೆಟ್ ನಗೆಪಾಟಲಿಗೆ ಈಡಾಗಿತ್ತು.

H1B ವೀಸಾ ವಿವಾದ, ಟ್ರಂಪ್ ವಿರುದ್ಧ ಕೋರ್ಟ್ ಮೊರೆ

ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು..!

ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು..!

ಕಳೆದ ತಿಂಗಳು, ಅಂದರೆ ಸೆಪ್ಟೆಂಬರ್ 29ರ ಗುರುವಾರ ನಡೆದಿದ್ದ ಮೊದಲನೆಯ ಡಿಬೆಟ್ ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು ತರಿಸಿತ್ತು. ಕಳೆದ ಹಲವು ವರ್ಷಗಳಿಂದ ಅಮೆರಿಕದಲ್ಲಿ ಡಿಬೆಟ್ ನಡೆಸಿಕೊಟ್ಟಿರುವ ಅನುಭವ ಕ್ರಿಸ್ ವ್ಯಾಲೆಸ್‌ಗೆ ಇದೆ. ಆದರೆ ಇಬ್ಬರು ಅಭ್ಯರ್ಥಿಗಳ ನಡುವೆ ನೇರ ವಾಗ್ವಾದ ಏರ್ಪಟ್ಟಾಗ ಸ್ವತಃ ಕ್ರಿಸ್ ವ್ಯಾಲೆಸ್‌ ಕೂಡ ಕಕ್ಕಾಬಿಕ್ಕಿಯಾಗಿದ್ದರು. ಒಂದು ಕಡೆ ಅಮೆರಿಕದ ಪವರ್‌ಫುಲ್ ಮ್ಯಾನ್ ಟ್ರಂಪ್, ಮತ್ತೊಂದು ಕಡೆ ಮಾಜಿ ಉಪಾಧ್ಯಕ್ಷ ಬಿಡೆನ್. ಇಬ್ಬರ ನಡುವೆ ಸಿಲುಕಿ ಕ್ರಿಸ್ ವ್ಯಾಲೆಸ್ ಕೂಡ ಗೊಂದಲಕ್ಕೆ ಸಿಲುಕಿದ್ದರು. ಬಿಡೆನ್ ಮಾತನಾಡುವ ಸಂದರ್ಭದಲ್ಲಿ ಪದೇಪದೆ ಟ್ರಂಪ್ ಅಡ್ಡಿ ಮಾಡುತ್ತಿದ್ದರು. ಕಡೆಗೆ ತಾಳ್ಮೆ ಕಳೆದುಕೊಂಡ ಕ್ರಿಸ್ ವ್ಯಾಲೆಸ್ ನನಗೆ ಡಿಬೆಟ್ ನಿರ್ವಹಿಸುವ ಹಕ್ಕಿದೆ ಎಂದು ಗದರಿಬಿಟ್ಟಿದ್ದರು.

ಚರ್ಚೆಗೂ, ವಾದಕ್ಕೂ ವ್ಯತ್ಯಾಸವಿದೆ..!

ಚರ್ಚೆಗೂ, ವಾದಕ್ಕೂ ವ್ಯತ್ಯಾಸವಿದೆ..!

ಅದೊಂದು ಕಾಲ ಇತ್ತು. ಅಮೆರಿಕದಲ್ಲಿ ಎಲೆಕ್ಷನ್ ಡಿಬೆಟ್ ನಡೆಯುತ್ತಿದೆ ಎಂದರೆ ಹಲವು ದೇಶಗಳ ಪಿಎಂ, ಪ್ರೆಸಿಡೆಂಟ್‌ಗಳು ಸಹ ನೇರಪ್ರಸಾರ ವೀಕ್ಷಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹದಗೆಟ್ಟಿದ್ದು, ಟ್ರಂಪ್ ಚರ್ಚೆಯ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಡೆಮಾಕ್ರಟಿಕ್ ನಾಯಕರದ್ದು. ಪ್ರತಿಬಾರಿಯೂ ಎಲೆಕ್ಷನ್ ಡಿಬೆಟ್ ನಡೆಯುವಾಗ ಆಯ್ದ ವಿಷಗಳ ಮೇಲೆ ಚರ್ಚೆ ನಡೆಯುತ್ತದೆ. ಪ್ರತಿಯೊಬ್ಬರೂ 2 ನಿಮಿಷಗಳ ಕಾಲಾವಕಾಶ ಪಡೆಯುತ್ತಾರೆ. ಉದಾಹರಣೆಗೆ ಟ್ರಂಪ್‌ ಮೊದಲು ಮಾತನಾಡಲು 2 ನಿಮಿಷ ಸಮಯ ತೆಗೆದುಕೊಂಡರೆ, ಇನ್ನುಳಿದ 2 ನಿಮಿಷ ಬಿಡೆನ್ ಮಾತನಾಡುತ್ತಾರೆ. ಆಗ ಟ್ರಂಪ್ ಸೈಲೆಂಟ್ ಆಗಿ ಇರಬೇಕಾಗುತ್ತದೆ. ಆದರೆ ಕಳೆದ ಡಿಬೆಟ್‌ನಲ್ಲಿ ಟ್ರಂಪ್ ಪದೇಪದೆ ಬಿಡೆನ್ ಮಾತಿಗೆ ಅಡ್ಡಿಮಾಡಿದ್ದರು.

ಆಯೋಜಕರ ವಿರುದ್ಧ ಸಿಟ್ಟಿಗೆದ್ದ ಟ್ರಂಪ್

ಆಯೋಜಕರ ವಿರುದ್ಧ ಸಿಟ್ಟಿಗೆದ್ದ ಟ್ರಂಪ್

ಈಗಾಗಲೇ ಅಕ್ಟೋಬರ್ 15ರ 2ನೇ ಡಿಬೆಟ್ ಕ್ಯಾನ್ಸಲ್ ಆಗಿದೆ. ಈ ನಡುವೆ 3ನೇ ಮತ್ತು ಕೊನೆಯ ಡಿಬೆಟ್ ನಡೆಸಲು ತಯಾರಿ ನಡೆಸಲಾಗಿದೆ. ಮೊದಲಿಗೆ ಟ್ರಂಪ್ ಹಾಗೂ ಬಿಡೆನ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಕೂಡ ಮುಗಿದಿದ್ದು, ಇಬ್ಬರೂ ನಾಯಕರು ಚರ್ಚೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ. 3ನೇ ಹಾಗೂ ಕೊನೇ ಡಿಬೆಟ್ ಇಂದು ನಡೆಯಲಿದೆ. ಅದಕ್ಕೂ ಮೊದಲು ಡಿಬೆಟ್ ಕಮಿಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಾರಿ ಚರ್ಚೆ ವೇಳೆ ಅಭ್ಯರ್ಥಿಗಳ ಮೈಕ್ ಮ್ಯೂಟ್ ಮಾಡೋದಕ್ಕೆ ನಿರ್ಧರಿಸಲಾಗಿದೆ. ಆದರೆ ಇದರ ವಿರುದ್ಧ ಟ್ರಂಪ್ ರೊಚ್ಚಿಗೆದ್ದಿದ್ದು, ಆಯೋಜಕರ ವಿರುದ್ಧ ಅಮೆರಿಕದ ಹಾಲಿ ಅಧ್ಯಕ್ಷರು ಗರಂ ಆಗಿದ್ದಾರೆ. ಟ್ರಂಪ್ ಆಪ್ತ ಸಹಾಯಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಬಿಡೆನ್‌ಗೆ ಸಹಾಯ ಮಾಡಲು ಈ ಕ್ರಮ..?

ಬಿಡೆನ್‌ಗೆ ಸಹಾಯ ಮಾಡಲು ಈ ಕ್ರಮ..?

ಇಂತಹ ಗಂಭೀರ ಆರೋಪ ಮಾಡುತ್ತಿರುವುದು ಟ್ರಂಪ್ ಆಪ್ತ ಸಹಾಯಕರು ಹಾಗೂ ಟ್ರಂಪ್ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿಕೊಂಡವರು. ಡಿಬೆಟ್ ಸಂದರ್ಭದಲ್ಲಿ ಮೈಕ್ ಮ್ಯೂಟ್ ಮಾಡುತ್ತಿರುವುದರ ಹಿಂದೆ ಬಿಡೆನ್‌ಗೆ ಸಹಾಯ ಮಾಡುವ ಉದ್ದೇಶ ಇದೆ ಎಂದು ಆರೋಪಿಸಲಾಗಿದೆ. ಡಿಬೆಟ್ ಕಮಿಷನ್ ಬಗ್ಗೆ ಟ್ರಂಪ್ ಚುನಾವಣಾ ಪ್ರಚಾರದ ಉಸ್ತುವಾರಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಬಿಡೆನ್ ಪಡೆ ಇದಕ್ಕೆ ತಾಳ್ಮೆಯಿಂದಲೇ ಉತ್ತರ ನೀಡಿದ್ದು, ಚರ್ಚೆ ವೇಳೆ ಪದೇಪದೆ ಅಡ್ಡ ಬಾಯಿ ಹಾಕುವುದನ್ನು ಸಹಿಸಲು ಅಸಾಧ್ಯ ಎಂದು ಟ್ರಂಪ್ ಕಾಲೆಳೆದಿದೆ. ಒಟ್ಟಾರೆ ಅಮೆರಿಕದಲ್ಲಿ ಈ ಬಾರಿ ಚುನಾವಣೆಗಿಂತಲೂ, ಚುನಾವಣೆ ಮೇಲಿನ ಚರ್ಚೆಯೇ ಜಗತ್ತಿನ ಗಮನ ಸೆಳೆದಿದೆ. 3ನೇ ಡಿಬೆಟ್ ಹೇಗೆ ನಡೆಯಲಿದೆ, ಟ್ರಂಪ್ ಹಾಗೂ ಬಿಡೆನ್ ನಡುವೆ ಮತ್ತೆ ಮಾತಿನ ಸಮರ ಏರ್ಪಡುತ್ತಾ ಅನ್ನೋದು ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
The 3rd and last debate between Trump and Biden will take place today. Trump supporters are hoping to bounce back in today's election debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X