ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಮತ ಸೆಳೆಯಲು ಟ್ರಂಪ್ ಮಾಸ್ಟರ್ ಪ್ಲ್ಯಾನ್..!

|
Google Oneindia Kannada News

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕಮಲಾ ದೇವಿ ಹ್ಯಾರಿಸ್ ಅಖಾಡ ಪ್ರವೇಶ ಬಿರುಗಾಳಿಯನ್ನೇ ಎಬ್ಬಿಸಿದೆ. ಕಮಲಾ ಆಯ್ಕೆಯಾದ ಹಿನ್ನೆಲೆ ಈ ಬಾರಿ ಭಾರತ ಮೂಲದ ಅಮೆರಿಕನ್ ಮತದಾರರ ಬೆಂಬಲ ಗಿಟ್ಟಿಸಲು ಟ್ರಂಪ್ ಪರದಾಡುತ್ತಿದ್ದಾರೆ. ನವೆಂಬರ್ 3ರ ಚುನಾವಣೆಯಲ್ಲಿ ಸುಮಾರು 1.3 ಕೋಟಿ ಭಾರತ ಮೂಲದ ಅಮೆರಿಕನ್ನರು ಹಕ್ಕು ಚಲಾಯಿಸಲಿದ್ದಾರೆ. ಹೀಗಾಗಿ ಭಾರತೀಯರ ವಿಶ್ವಾಸ ಗಿಟ್ಟಿಸಲು ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಪಡೆ 4 ಮೈತ್ರಿಕೂಟಗಳನ್ನು ರಚಿಸಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಡೆಮಾಕ್ರಟ್ಸ್ ಪರ ಕಮಲಾ ಹ್ಯಾರಿಸ್ ಆಯ್ಕೆ ನಂತರ ಟ್ರಂಪ್‌ಗೆ ತಳಮಳ ಶುರುವಾಗಿದೆ. ಏಕೆಂದರೆ ಕಮಲಾ ತಾಯಿ ಭಾರತದ ತಮಿಳುನಾಡು ಮೂಲದವರು ಹಾಗೂ ತಂದೆ ಜಮೈಕಾ ಮೂಲದವರು. ಹೀಗೆ ಭಾರತದ ನಂಟು ಹೊಂದಿರುವ ಕಮಲಾ ಪರ ಬರೋಬ್ಬರಿ 1.3 ಕೋಟಿ ಭಾರತೀಯರ ಮತಗಳು ವಾಲುವ ಸಂಭವ ಹೆಚ್ಚಾಗಿದೆ.

ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!ಟ್ರಂಪ್ ವಿರುದ್ಧ ಮತ್ತೊಂದು ದಾಳ ಉರುಳಿಸಿದ ಜೋ ಬಿಡೆನ್..!

ಇದರಲ್ಲಿ ಬಹುಪಾಲು ಮತದಾರರು ಕಮಲಾ ಅವರ ವರ್ಚಸ್ಸು ನೋಡಿ ಬಿಡೆನ್‌ಗೆ ಸಪೋರ್ಟ್ ಮಾಡುವ ಸಂಭವ ಹೆಚ್ಚಾಗಿದೆ. ಇದು ನಡೆದಿದ್ದೇ ಆದರೆ ಟ್ರಂಪ್‌ ಅವರಿಗೆ ಅಪಾಯ ಕಟ್ಟಿಟ್ಟಬುತ್ತಿ. ಇದರಿಂದ ಎಚ್ಚೆತ್ತು ಹೊಸ ಸ್ಟ್ರಾಟಜಿ ರೂಪಿಸಿರುವ ಟ್ರಂಪ್ ಪ್ರಚಾರ ಪಡೆ, ಒಟ್ಟು 4 ಮೈತ್ರಿಕೂಟಗಳ ಮೂಲಕ ಭಾರತೀಯರ ಮತಗಳನ್ನು ಸೆಳೆಯಲು ಮುಂದಾಗಿದೆ.

ಅಮೆರಿಕದಲ್ಲೂ ಧರ್ಮವಾರು ಮೈತ್ರಿಕೂಟ ರಚನೆ..!

ಅಮೆರಿಕದಲ್ಲೂ ಧರ್ಮವಾರು ಮೈತ್ರಿಕೂಟ ರಚನೆ..!

ಅಷ್ಟಕ್ಕೂ ಭಾರತದ ರಾಜಕೀಯದಲ್ಲಿ ಧರ್ಮವಾರು ಮೈತ್ರಿಕೂಟಗಳನ್ನು ಕಂಡಿದ್ದೇವೆ. ಭಾರತದಲ್ಲಿ ಬಹುಪಾಲು ಪಕ್ಷಗಳು ಧರ್ಮದ ಆಧಾರದಲ್ಲಿ ಒಕ್ಕೂಟಗಳನ್ನು ರಚಿಸಿ ಮತಬೇಟೆಗೆ ಇಳೀಯುತ್ತವೆ. ಆದರೆ ಈ ಬಾರಿ ಅಮೆರಿಕದಲ್ಲೂ ಈ ಸ್ಟ್ರಾಟೆಜಿ ಅಪ್ಲೈ ಆಗುತ್ತಿದೆ. ಇದು ಕಮಲಾ ಹ್ಯಾರಿಸ್ ಆಯ್ಕೆಯ ಎಫೆಕ್ಟ್ ಅಂದರೂ ತಪ್ಪಾಗಲಾದರು. ಈಗ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಪಡೆ ರಚಿಸಿರುವ 4 ಮೈತ್ರಿಕೂಟಗಳೂ ಇದೇ ರೀತಿಯಾಗಿವೆ. ‘ಇಂಡಿಯನ್ ವಾಯ್ಸ್ ಫಾರ್ ಟ್ರಂಪ್' ಹೊರತುಪಡಿಸಿ ‘ಹಿಂದೂ ವಾಯ್ಸ್ ಫಾರ್ ಟ್ರಂಪ್', ‘ಸಿಖ್ಸ್ ಫಾರ್ ಟ್ರಂಪ್' ಹಾಗೂ ‘ಮುಸ್ಲಿಂ ವಾಯ್ಸ್ ಫಾರ್ ಟ್ರಂಪ್' ಹೆಸರಲ್ಲಿ ರಚಿತವಾಗಿರುವ ಮೈತ್ರಿಕೂಟಗಳು ಧರ್ಮವಾರು ವಿಂಗಡಣೆಯನ್ನೇ ಹೋಲುತ್ತಿವೆ. ಈ ಮೂಲಕ ಆಯಾ ಧರ್ಮ ಹಾಗೂ ವರ್ಗಗಳ ಮತಗಳನ್ನು ಒಂದುಗೂಡಿಸುವ ಗುರಿ ಟ್ರಂಪ್ ಪಡೆಯದ್ದು.

ಭಾರತಕ್ಕೆ ಸ್ಪೆಷಲ್ ವಿಶ್..!

ಭಾರತಕ್ಕೆ ಸ್ಪೆಷಲ್ ವಿಶ್..!

ಒಂದು ದೇಶದ ಸ್ವಾತಂತ್ರ್ಯೋತ್ಸವ ಅಥವಾ ಇನ್ನಾವುದೇ ಶುಭ ಸಂದರ್ಭ ಇದ್ದಾಗ ಶುಭಾಶಯ ಕೋರುವುದು ಮಾಮೂಲಿ. ಆದರೆ ಈ ಬಾರಿ ಅದು ಮತ್ತಷ್ಟು ಪರಿಣಾಮಕಾರಿಯಾಗಿದೆ. ಅಮೆರಿಕ ಪ್ರತಿಬಾರಿಯಂತೆ ಈ ಬಾರಿ ಕೂಡ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದೆ. ಆದರೆ ಈ ಬಾರಿಯ ವಿಶ್ ತುಂಬಾ ವಿಶಿಷ್ಟವಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಖುದ್ದು ಶುಭಾಶಯ ಕೋರಿದ್ದಾರೆ. ಭಾರತ ಮತ್ತು ಅಮೆರಿಕ ಪ್ರಜಾಪ್ರಭುತ್ವ ಸಂಪ್ರದಾಯ ಹಾಗೂ ನಿಕಟ ಸ್ನೇಹ ಸಂಬಂಧ ಹೊಂದಿವೆ ಎಂದು ಪಾಂಪಿಯೊ ಹೇಳಿದ್ದಾರೆ. ಅಲ್ಲದೆ ಉಭಯ ದೇಶಗಳು 21ನೇ ಶತಮಾನದಲ್ಲಿ ಜಾಗತಿಕ ಭದ್ರತೆ ಮತ್ತು ಸಮೃದ್ಧಿಗೆ ಜಂಟಿಯಾಗಿ ಶ್ರಮಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಷ್ಟೇ ಅಲ್ಲ ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ವೇಳೆ ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀರಾಮನ ಚಿತ್ರ ರಾರಾಜಿಸಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.

ಫಲಿತಾಂಶದ ದಿಕ್ಕು ಬದಲಿಸುತ್ತಾರಾ ಕಮಲಾ..?

ಫಲಿತಾಂಶದ ದಿಕ್ಕು ಬದಲಿಸುತ್ತಾರಾ ಕಮಲಾ..?

ಅಮೆರಿಕ ರಾಜಕಾರಣದಲ್ಲಿ ಮುಖ್ಯ ಪಾತ್ರವಹಿಸುವ ಕ್ಯಾಲಿಫೋರ್ನಿಯಾ ರಾಜ್ಯವನ್ನು ಸೆನೆಟ್‌ನಲ್ಲಿ ಪ್ರತಿನಿಧಿಸುವ ಕಮಲಾ ಹ್ಯಾರಿಸ್ ಪರ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಹೀಗೆ ಕಮಲಾ ಹ್ಯಾರಿಸ್ ಮತಬೇಟೆಯಲ್ಲಿ ಮತ್ತಷ್ಟು ಯಶಸ್ವಿಯಾದರೆ ಫಲಿತಾಂಶದ ದಿಕ್ಕು ಬದಲಾಗಲಿದೆ. ಇದೇ ಕಾರಣಕ್ಕೆ ಈಗ ರಚಿಸಲಾಗಿರುವ 4 ಮೈತ್ರಿಕೂಟಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷದ ಚಿಂತನೆಗಳನ್ನ ಬೆಂಬಲಿಸಲಿವೆಯಂತೆ. ಈ ವಿಚಾರವನ್ನು ಸ್ವತಃ ಮೈತ್ರಿಕೂಟಗಳ ಒಕ್ಕೂಟದ ನಿರ್ದೇಶಕ ಆಶ್ಲೆ ಹಯೆಕ್ ಪ್ರತಿಪಾದಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಭಾರತೀಯರದ್ದೇ ಹವಾ..!

ಅಮೆರಿಕ ಚುನಾವಣೆಯಲ್ಲಿ ಭಾರತೀಯರದ್ದೇ ಹವಾ..!

ಒಟ್ಟಾರೆ ಸದ್ಯದ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದರೆ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರತೀಯ ಮತದಾರರನ್ನೇ ಅವಲಂಬಿಸಿದೆ. ಇತ್ತೀಚೆಗೆ ಅಮೆರಿಕದಲ್ಲಿ ಘಟಿಸಿದ ಜಾರ್ಜ್ ಫ್ಲಾಯ್ಡ್ ಸಾವು ಹಾಗೂ ಆ ನಂತರದ ವರ್ಣಭೇದ ಸಂಘರ್ಷ ಈಗಾಗಲೇ ಟ್ರಂಪ್ ವಿರುದ್ಧ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆಗಳನ್ನು ಒಗ್ಗೂಡಿಸಿದೆ. ಈ ನಡುವೆ ಕಮಲಾ ಭಾರತ ಮೂಲದವರ ಮತಗಳನ್ನ ಒಗ್ಗೂಡಿಸುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಕೊರೊನಾ ಸೋಂಕು ನಿಭಾಯಿಸುವಲ್ಲೂ ಟ್ರಂಪ್ ಎಡವಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಈ ಬಾರಿ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಭಾರತೀಯರ ಪಾತ್ರ ಮಹತ್ವದ್ದಾಗಿದ್ದು, ಮತದಾರರ ಒಲವು ಯಾರ ಕಡೆ ವಾಲಲಿದೆ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯಲೇಬೇಕು.

ಡೊನಾಲ್ಡ್ ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಬರಾಕ್ ಒಬಾಮ..!ಡೊನಾಲ್ಡ್ ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಬರಾಕ್ ಒಬಾಮ..!

English summary
An estimated 1.3 million Indian-Americans are expected to vote in the November 3 election. So Trump's Campaign Creates 4 Coalitions To Tap Indian-American Voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X