ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

|
Google Oneindia Kannada News

ದೊಡ್ಡಣ್ಣನ ನಾಡಿನಲ್ಲಿ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಒಂದ್ಕಡೆ ಹೇಗಾದರೂ ಮರು ಆಯ್ಕೆ ಆಗಲೇಬೇಕು ಅಂತಾ ಡೊನಾಲ್ಡ್ ಟ್ರಂಪ್ ಪ್ರಯತ್ನಿಸುತ್ತಿದ್ದರೆ, ಮತ್ತೊಂದ್ಕಡೆ ಜೋ ಬಿಡೆನ್ ಮೆಲ್ಲಗೆ ಅಧ್ಯಕ್ಷರ ಖುರ್ಚಿಗೆ ಹತ್ತಿರವಾಗುತ್ತಿದ್ದಾರೆ. ಈಗ ಹೊರಬಿದ್ದಿರುವ ಸಮೀಕ್ಷೆಗಳ ಪ್ರಕಾರ ಬಿಡೆನ್ ಭಾರತೀಯರ ಮನಗೆಲ್ಲುವಲ್ಲಿ ದಿನದಿಂದ ದಿನಕ್ಕೆ ಯಶಸ್ವಿಯಾಗುತ್ತಿದ್ದಾರೆ.

ಅತ್ತ ಟ್ರಂಪ್ ಬಿಡೆನ್ ವಿರುದ್ಧ ಡ್ರಗ್ಸ್ ಆರೋಪ ಮಾಡುತ್ತಿದ್ದರೆ, ಇತ್ತ ಜೋ ಬಿಡೆನ್ ಭಾರತೀಯರ ವೋಟ್ ಬ್ಯಾಂಕ್ ಕೊಳ್ಳೆ ಹೊಡೆಯುತ್ತಿದ್ದಾರೆ. 'ಎಎಪಿಐ' ಸಮೀಕ್ಷೆ ಪ್ರಕಾರ ಶೇಕಡ 66ರಷ್ಟು ಭಾರತೀಯ ಅಮೆರಿಕನ್ನರು ಜೋ ಬಿಡೆನ್ ಪರ ಇದ್ದರೆ, ಶೇಕಡ 28ರಷ್ಟು ಭಾರತೀಯ ಅಮೆರಿಕನ್ನರು ಮಾತ್ರ ಹಾಲಿ ಅಧ್ಯಕ್ಷ ಟ್ರಂಪ್‌ಗೆ ಬೆಂಬಲ ಸೂಚಿಸಿದ್ದಾರೆ. ಅಂದಹಾಗೆ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವಂತೆ ತಮ್ಮ ಪ್ರಚಾರದ ತೀವ್ರತೆಯನ್ನೂ ಹೆಚ್ಚಿಸಿದ್ದಾರೆ. ಈ ಮಧ್ಯೆ ಮಾತಿನ ಭರದಲ್ಲಿ ಬಿಡೆನ್ ಬಗ್ಗೆ ಟ್ರಂಪ್ ಗಂಭೀರ ಆರೋಪ ಮಾಡಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಡೆಮಾಕ್ರಟಿಕ್ ಅಭ್ಯರ್ಥಿ ಬಿಡೆನ್ ನಿಷೇಧಿತ ಡ್ರಗ್ಸ್ ಸೇವಿಸುತ್ತಾರೆ ಎಂದಿದ್ದರು. ಅಲ್ಲದೆ ಬಿಡೆನ್ ಸ್ವಭಾವ ಭಯಾನಕವಾಗಿದ್ದು, ಆತ ಅಸಮರ್ಥ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಉದಾಹರಣೆಯನ್ನೂ ನೀಡಿದ್ದ ಟ್ರಂಪ್, ಜೋ ಬಿಡೆನ್ ಇತ್ತೀಚಿನ ಸಂದರ್ಶನದಲ್ಲಿ ವಿಚಿತ್ರವಾಗಿ ವರ್ತಿಸಿದ್ದರು ಎಂದಿದ್ದರು. ಇಷ್ಟೆಲ್ಲಾ ಆರೋಪ-ಪ್ರತ್ಯಾರೋಪಗಳ ನಡುವೆಯೂ ಜೋ ಬಿಡೆನ್ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

‘ಟ್ರಂಪ್ ಬೆಂಕಿ ಹಚ್ಚುವ ವ್ಯಕ್ತಿ’

ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಬಿಡೆನ್ ಏನೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಟ್ರಂಪ್ ಹವಾಮಾನ ವೈಪರಿತ್ಯದ ಕುರಿತು ಸಂವಾದವೊಂದರಲ್ಲಿ ನೀಡಿದ್ದ ಹೇಳಿಕೆಗೆ ಬಿಡೆನ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಟ್ರಂಪ್ ಕಿಚ್ಚು ಹಚ್ಚುವ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದರು. ಅಷ್ಟಕ್ಕೂ ಅಮೆರಿಕದಲ್ಲಿ ಚುನಾವಣಾ ಕಾವು ರಂಗೇರುತ್ತಿರುವ ಸಂದರ್ಭದಲ್ಲೇ ಕ್ಯಾಲಿಫೋರ್ನಿಯ ಕಾಡ್ಗಿಚ್ಚಿನ ವಿಚಾರವೂ ಪ್ರಚಾರದ ಅಜೆಂಡಾ ಆಗಿ ಬದಲಾಗಿದೆ. ಈ ಮಧ್ಯೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದ ಟ್ರಂಪ್, ವಾತಾವರಣ ತಣ್ಣಗಾಗುತ್ತಿದೆ. ಕಾದು ನೋಡಿ, ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದಾರೆ. ಈ ಮೂಲಕ ವಿಜ್ಞಾನಿಗಳಿಗೆ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಜ್ಞಾನವೇ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದು ಟ್ರಂಪ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.

ಹಾಲಿವುಡ್ ನಾಡು ಈಗ ಅಕ್ಷರಶಃ ನರಕ

ಹಾಲಿವುಡ್ ನಾಡು ಈಗ ಅಕ್ಷರಶಃ ನರಕ

ಕ್ಯಾಲಿಫೋರ್ನಿಯ ನೋಡಲು ಥೇಟ್ ನರಕವಾಗಿ ಬದಲಾಗಿದೆ. ಅಲ್ಲಿ ಎಲ್ಲವೂ ಸುಟ್ಟು ಕರಕಲಾಗಿ ಹೋಗಿದೆ. 4 ಸಾವಿರಕ್ಕೂ ಹೆಚ್ಚು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದ್ದರೆ, ಇನ್ನೂ ಸಾವಿರಾರು ಮನೆಗಳು ಭಸ್ಮವಾಗುವ ಸ್ಥಿತಿಯಲ್ಲಿವೆ. ಲಕ್ಷಾಂತರ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೂ, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ಕೆನ್ನಾಲಿಗೆ ಕ್ಯಾಲಿಫೋರ್ನಿಯ ಅರಣ್ಯದಲ್ಲಿ ವೇಗವಾಗಿ ಹಬ್ಬುತ್ತಿದೆ. 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೆಂಕಿ ಹೊತ್ತಿದ್ದು, 28 ಭಾಗಗಳಲ್ಲಿ ಬೆಂಕಿ ಹಿಡಿತಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 'ಹಾಲಿವುಡ್ ನಾಡು' ಅಂತಲೇ ಖ್ಯಾತಿ ಪಡೆದಿರುವ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯ ಈಗ ಅಕ್ಷರಶಃ ನರಕವಾಗಿ ಬದಲಾಗಿದೆ.

ಟ್ರಂಪ್‌ಗೆ ಗುನ್ನಾ ಕೊಡತ್ತಾ ಕಾಡ್ಗಿಚ್ಚು..?

ಟ್ರಂಪ್‌ಗೆ ಗುನ್ನಾ ಕೊಡತ್ತಾ ಕಾಡ್ಗಿಚ್ಚು..?

ಒಂದುಕಡೆ ಕೊರೊನಾ ಸೋಂಕು ಕೊಡುತ್ತಿರುವ ಪೆಟ್ಟು, ಮತ್ತೊಂದ್ಕಡೆ ಕುಸಿಯುತ್ತಿರುವ ಆರ್ಥಿಕತೆ. ಇದಿಷ್ಟೂ ಅಮೆರಿಕ ಎಂಬ ದೈತ್ಯ ದೇಶವನ್ನೇ ಕಂಗಾಲಾಗಿಸಿದೆ. ಇಂತಹ ಹೊತ್ತಲ್ಲೇ ಅಧ್ಯಕ್ಷೀಯ ಚುನಾವಣೆ ಎದುರಾಗಿದೆ. ಅದರಲ್ಲೂ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚು ಇನ್ನೂ ಕೆಲವು ತಿಂಗಳು ಹಿಡಿತಕ್ಕೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆ ಮೇಲೂ ಕಾಡ್ಗಿಚ್ಚಿನ ಪರಿಣಾಮ ವ್ಯತಿರಿಕ್ತವಾಗಲಿದ್ದು, ಟ್ರಂಪ್‌ ಸರ್ಕಾರದ ವಿರುದ್ಧ ಜನಾಕ್ರೋಶ ಮೊಳಗುವ ಸಾಧ್ಯತೆ ದಟ್ಟವಾಗಿದೆ.

Recommended Video

RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada
ಎಬಿಸಿ ನ್ಯೂಸ್‌ನ ಸಮೀಕ್ಷೆ

ಎಬಿಸಿ ನ್ಯೂಸ್‌ನ ಸಮೀಕ್ಷೆ

2ನೇ ಬಾರಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪದೇ ಪದೇ ನಿರಾಸೆ ಎದುರಾಗುತ್ತಿದೆ. ಒಂದಾದ ನಂತರ ಒಂದು ಸಮೀಕ್ಷೆಗಳು ಟ್ರಂಪ್ ಈ ಬಾರಿ ಸೋಲಲಿದ್ದಾರೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ. ಇದೀಗ ವಾಷಿಂಗ್ಟನ್ ಪೋಸ್ಟ್ ಹಾಗೂ ಎಬಿಸಿ ನ್ಯೂಸ್‌ನ ಸಮೀಕ್ಷೆ ಕೂಡ ಟ್ರಂಪ್ ಸೋಲನ್ನೇ ಪ್ರತಿಪಾದಿಸಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

English summary
According to AAPI survey 66 percent of Indian American voters currently favour to Biden, 28 percent favour President Trump, and 6 percent were undecided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X