ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಮಾಡೆರ್ನಾ ಲಸಿಕೆ ಪಡೆದ ವೈದ್ಯರಲ್ಲಿ ತೀವ್ರ ಅಲರ್ಜಿ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 26: ಅಮೆರಿಕದ ಬಾಸ್ಟನ್‌ನಲ್ಲಿ ಗುರುವಾರ ಮಾಡೆರ್ನಾ ಕೊರೊನಾ ವೈರಸ್ ಲಸಿಕೆಯನ್ನು ಪಡೆದ ವೈದ್ಯರೊಬ್ಬರಲ್ಲಿ ತೀವ್ರ ಅಲರ್ಜಿಯ ಅಡ್ಡಪರಿಣಾಮ ಕಂಡುಬಂದಿದೆ.

ಬಾಸ್ಟನ್ ಮೆಡಿಕಲ್ ಸೆಂಟರ್‌ನ ಜೆರಿಯಾಟ್ರಿಕ್ ಗ್ರಂಥಿಶಾಸ್ತ್ರ ವಿಭಾಗದ ವೈದ್ಯ ಡಾ. ಹೊಸೀನ್ ಸಡ್ರಜಾದೆಹ್ ಅವರು ಮಾಡೆರ್ನಾ ಲಸಿಕೆ ಪಡೆದುಕೊಂಡ ಬಳಿಕ ತೀವ್ರ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ತಲೆಸುತ್ತು ಮತ್ತು ಎದೆಬಡಿತದ ಹೆಚ್ಚಳದ ಸಮಸ್ಯೆಗಳು ಉಂಟಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹೊಸ ಕೊರೊನಾವೈರಸ್ ಹೆಚ್ಚಿನ ಜನರ ಸಾವಿಗೆ ಕಾರಣವಾಗಬಹುದು: ಅಧ್ಯಯನ ವರದಿಹೊಸ ಕೊರೊನಾವೈರಸ್ ಹೆಚ್ಚಿನ ಜನರ ಸಾವಿಗೆ ಕಾರಣವಾಗಬಹುದು: ಅಧ್ಯಯನ ವರದಿ

ಮಾಡೆರ್ನಾ ಲಸಿಕೆಯ ರಾಷ್ಟ್ರವ್ಯಾಪಿ ಬಳಕೆಯನ್ನು ಆರಂಭಿಸಿದ ವಾರದಲ್ಲಿ ಸಾರ್ವಜನಿಕವಾಗಿ ಬಹಿರಂಗವಾದ ಮೊದಲ ಗಂಭೀರ ಪರಿಣಾಮದ ಪ್ರಕರಣವಾಗಿದೆ.

 US Doctor Suffers Severe Allergic Reaction After Receiving Moderna Coronavirus Vaccine

ಲಸಿಕೆ ಪಡೆದುಕೊಂಡ ವೈದ್ಯರಲ್ಲಿ ತೀವ್ರವಾದ ಅಲರ್ಜಿ ಪರಿಣಾಮ ಉಂಟಾದಂತೆ ಅನಿಸಿದೆ. ಅವರನ್ನು ತುರ್ತು ವಿಭಾಗಕ್ಕೆ ದಾಖಲಿಸಿ ಆರೋಗ್ಯವನ್ನು ತಪಾಸಣೆ, ಅಧ್ಯಯನ ನಡೆಸಲಾಗಿದೆ. ಅವರು ಚೇತರಿಕೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬಾಸ್ಟನ್ ಮೆಡಿಕಲ್ ಸೆಂಟರ್ ವಕ್ತಾರರು ತಿಳಿಸಿದ್ದಾರೆ.

ಫೈಜರ್ ಇಂಕ್ ಮತ್ತು ಬಯೋಎನ್‌ಟೆಕ್ ಲಸಿಕೆ ಪಡೆದ ಜನರಲ್ಲಿ ಕಂಡುಬಂದ ಐದು ಅಲರ್ಜಿ ಪರಿಣಾಮಗಳ ಬಗ್ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರವು ತನಿಖೆ ನಡೆಸುತ್ತಿರುವುದಾಗಿ ಕಳೆದ ವಾರ ತಿಳಿಸಿತ್ತು.

English summary
A US doctor suffered a severe allergic reaction after receiving Moderna coronavirus vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X