ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ತೊರೆದ ಕೊನೆಯ ಅಮೆರಿಕ ಸೇನಾಧಿಕಾರಿ ಚಿತ್ರ ಹಂಚಿಕೊಂಡ ರಕ್ಷಣಾ ಇಲಾಖೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ವಾಷಿಂಗ್ಟನ್, ಆಗಸ್ಟ್‌ 31: ಇಪ್ಪತ್ತು ವರ್ಷಗಳ ಬಳಿಕ ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದಿದ್ದು, ಸೋಮವಾರ ಮಧ್ಯರಾತ್ರಿಗೆ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡು ತೆರವು ಕಾರ್ಯಾಚರಣೆ ಮುಕ್ತಾಯವಾಗಿರುವುದಾಗಿ ಅಮೆರಿಕ ಘೋಷಿಸಿದೆ.

ಅಮೆರಿಕ ಪಡೆಯನ್ನು ಹಿಂತೆಗೆದುಕೊಳ್ಳಲು ಆಗಸ್ಟ್‌ 31ರ ಗಡುವು ನೀಡಲಾಗಿತ್ತು. ಸೋಮವಾರ ಮಧ್ಯರಾತ್ರಿಯೇ ಅಮೆರಿಕ ತನ್ನ ಯೋಧರ ತೆರವು ಕಾರ್ಯಾಚರಣೆ ಸಂಪೂರ್ಣಗೊಳಿಸಿದೆ.

'ಸೋಮವಾರ 1929 GMT ವೇಳೆಗೆ ಕಾಬೂಲ್‌ನಿಂದ ಕೊನೆಯ C-17 ವಿಮಾನ ಅಮೆರಿಕಕ್ಕೆ ವಾಪಸ್ಸಾಗಿದೆ. ಈ ರಾತ್ರಿ ಸೇನಾ ಪಡೆಯನ್ನು ಹಿಂಪಡೆಯುವ ಪ್ರಕ್ರಿಯೆ ಅಂತ್ಯವಾಗಿದೆ. 2001ರ ಸೆಪ್ಟೆಂಬರ್ 11ರ ನಂತರ ಅಫ್ಘಾನಿಸ್ತಾನದಲ್ಲಿ ಪ್ರಾರಂಭವಾದ ಸುಮಾರು 20 ವರ್ಷಗಳ ಕಾರ್ಯಾಚರಣೆಯ ಅಂತ್ಯವನ್ನು ಇದು ಪ್ರತಿನಿಧಿಸುತ್ತಿದೆ' ಎಂದು ಅಮೆರಿಕ ಜನರಲ್ ಕೆನ್ನತ್ ಮೆಕೆಂಜಿ ತಿಳಿಸಿದ್ದಾರೆ.

US Department of Defense Tweets Picture Of Last American Soldier to Leave Afghanistan

ಇದರೊಂದಿಗೆ ಅಮೆರಿಕ ರಕ್ಷಣಾ ಇಲಾಖೆ, ಅಫ್ಘಾನಿಸ್ತಾನದಿಂದ ಹೊರಟ ಕೊನೆಯ ವಿಮಾನ ಏರಿದ ಕೊನೆಯ ಸೇನಾಧಿಕಾರಿ ಚಿತ್ರವನ್ನು ಟ್ವೀಟ್ ಮಾಡಿದೆ. ಅಫ್ಘಾನಿಸ್ತಾನದಿಂದ ಹೊರಟ ಕಟ್ಟಕಡೆಯ ಅಮೆರಿಕ ವಾಯುಪಡೆಯ 'ಸಿ-17' ವಿಮಾನವೇರಿದ 'ಆಲ್ ಅಮೆರಿಕನ್ ಡಿವಿಶನ್' ಮೇಜರ್ ಜನರಲ್ ಕ್ರಿಸ್ ಡೆನಾಹ್ಯೂ ಎಂದು ಚಿತ್ರ ಸಹಿತ ಟ್ವೀಟ್ ಮಾಡಿದೆ.

'ಅಫ್ಘಾನಿಸ್ತಾನದಲ್ಲಿ ನಮ್ಮದು ಒತ್ತಡದ ಕಾರ್ಯಾಚರಣೆಯಾಗಿತ್ತು. ಪ್ರತಿ ಹಂತದಲ್ಲಿಯೂ ಸಮಸ್ಯೆ ಎದುರಿಸಿದೆವು. ನಮ್ಮ ಸೇನಾ ಪಡೆ ಶಿಸ್ತಿನಿಂದ ವರ್ತಿಸಿತು. ಅಫ್ಘಾನಿಸ್ತಾನದಲ್ಲಿ ಕೊನೆಯದಾಗಿ ನಿರ್ಗಮಿಸಿದ ನಮ್ಮ ಸೇನಾಧಿಕಾರಿ ಚಿತ್ರ ಇಲ್ಲಿದೆ' ಎಂದು ಅಮೆರಿಕ ವಾಯುಪಡೆ ಇಲಾಖೆ ಟ್ವೀಟ್ ಮಾಡಿದೆ.

ಅಮೆರಿಕ ಸೇನಾ ಅಕಾಡೆಮಿಯಲ್ಲಿ ಪದವಿ ಪಡೆದಿದ್ದ ಡೆನಾಹ್ಯೂ 1992ರ ಬ್ಯಾಚ್‌ನವರು. ಅಮೆರಿಕ ಪಡೆ ಹಾಗೂ ವಿಶೇಷ ಕಾರ್ಯಾಚರಣಾ ಘಟಕಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದುವರೆಗೂ ಅಫ್ಘಾನಿಸ್ತಾನದಿಂದ ಅಮೆರಿಕ ಸುಮಾರು 1,23,000 ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಂಡಿದೆ. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುಎಸ್ ಸೇನೆ ನಿರಂತರ ಕಾರ್ಯಾಚರಣೆ ನಡೆಸಿತು. 1,23,000 ಅಮೆರಿಕಾ ಮತ್ತು ಅಫ್ಘಾನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿತು.

ಅಮೆರಿಕ ಸೇನೆ ಅಫ್ಘಾನ್‌ನಿಂದ ತೆರಳಿದರೆ ದಾಳಿ ನಿಲ್ಲಿಸುತ್ತೇವೆ: ತಾಲಿಬಾನ್ಅಮೆರಿಕ ಸೇನೆ ಅಫ್ಘಾನ್‌ನಿಂದ ತೆರಳಿದರೆ ದಾಳಿ ನಿಲ್ಲಿಸುತ್ತೇವೆ: ತಾಲಿಬಾನ್

US Department of Defense Tweets Picture Of Last American Soldier to Leave Afghanistan

1996 ರಿಂದ 2001ರವರೆಗೂ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಅಮೆರಿಕ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿ ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು.

ಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವುಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವು

ಇದೀಗ ಎರಡು ದಶಕಗಳ ಕಾಲ ಅಮೆರಿಕ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ವಶಪಡಿಸಿಕೊಂಡಿದೆ.

ತಾಲಿಬಾನ್ ಸಂಭ್ರಮಾಚರಣೆ

ಅಮೆರಿಕದ ಪಡೆಗಳು 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ಕಾಬೂಲ್‌ನಿಂದ ಅಮೆರಿಕ ಪಡೆ ನಿರ್ಗಮಿಸಿದ ಕೂಡಲೇ ತಾಲಿಬನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

'ಅಮೆರಿಕ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶ ಸಂಪೂರ್ಣ ಸ್ವತಂತ್ರಗೊಂಡಿದೆ' ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಘೋಷಿಸಿಕೊಂಡಿದ್ದಾರೆ. "ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಯಾಗುತ್ತದೆ," ಎಂದು ತಾಲಿಬಾನ್ ಸಂಘಟನೆಯ ಹಿರಿಯ ಅಧಿಕಾರಿ ಅನಾಸ್ ಹಕ್ಕಾನಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಚೆಕ್ ಪಾಯಿಂಟ್ ಗಳಲ್ಲಿ ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

English summary
US Department of Defense tweets picture of the last american soldier who left afghanistan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X