ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ಧಿ ಕಲಿಯದಿದ್ದರೆ ಅಮೆರಿಕಕ್ಕೆ ಇನ್ನಷ್ಟು ಕೊರೊನಾ ಆಘಾತ

|
Google Oneindia Kannada News

ವಾಷಿಂಗ್ಟನ್, ಜುಲೈ 1: ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗಿರುವ ಅಮೆರಿಕದಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಆತಂಕ ಎದುರಾಗಿದೆ.

Recommended Video

KSRTC ಬಸ್ ಹತ್ತಬೇಕಾದಲ್ಲಿ ಈ ನಿಯಮಗಳನ್ನು ಪಾಲಿಸಲೇಬೇಕು | KSRTC Rules & Regulations | Oneindia Kannada

ಅಮರಿಕದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ನಿಮಯಗಳನ್ನು ಪಾಲಿಸದಿದ್ದರೆ ಶೀಘ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗಬಹುದು. ದೇಶದಲ್ಲಿ ಪ್ರತಿದಿನ 2ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಬಹುದು.

ಕೊವಿಡ್ 19 ಮತ್ತೊಂದು ಹಂತ ಎದುರಾದರೂ ಲಾಕ್‌ಡೌನ್ ಇಲ್ಲ: ಟ್ರಂಪ್ಕೊವಿಡ್ 19 ಮತ್ತೊಂದು ಹಂತ ಎದುರಾದರೂ ಲಾಕ್‌ಡೌನ್ ಇಲ್ಲ: ಟ್ರಂಪ್

ಇದರಿಂದ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆರೋಗ್ಯ ತಜ್ಞ ಆಂಥೋನಿ ಫಾಸಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.ಈಗಾಗಲೇ ಅಮೆರಿಕದಲ್ಲಿ 1 ಲಕ್ಷದ 26 ಸಾವಿರ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ನಿಯಂತ್ರಣ ಕ್ರಮಕ್ಕೆ ಬೇಸರ

ಕೊರೊನಾ ನಿಯಂತ್ರಣ ಕ್ರಮಕ್ಕೆ ಬೇಸರ

ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಸಮಾಧಾನಕರ ಕ್ರಮಗಳನ್ನು ತೆಗದುಕೊಂಡಿಲ್ಲ, ನಾವು ಕೊರೊನಾ ನಿಯಂತ್ರಣದ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದೇವೆ. ಈಗ ಪ್ರತಿದಿನ ಸುಮಾರು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದೆ. ಟೆಕ್ಸಾಸ್ ಮತ್ತೆ ಫ್ಲೋರಿಡಾ ಒಂದರಲ್ಲೇ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬರುತ್ತಿವೆ ಎಂದು ಆಂಥೋನಿ ಫಾಸಿ ಹೇಳಿದ್ದಾರೆ.

ಹೀಗಿಯೇ ಇದ್ದರೆ ದಿನಕ್ಕೆ 2 ಲಕ್ಷಕ್ಕೂ ಅಧಿಕ ಪ್ರಕರಣ

ಹೀಗಿಯೇ ಇದ್ದರೆ ದಿನಕ್ಕೆ 2 ಲಕ್ಷಕ್ಕೂ ಅಧಿಕ ಪ್ರಕರಣ

ಅಮೆರಿಕ ಈಗ ಕೊರೊನಾ ನಿಯಂತ್ರಿಸುವ ಯಾವ ಗೋಜಿಗೂ ಹೋಗುತ್ತಿಲ್ಲ, ಅಮೆರಿಕ ಕಾಂಗ್ರೆಸ್ ಸೆನೆಟ್ ಹಾಗೂ ಅಧ್ಯಕ್ಷರು ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಇದು ಕಾಲಹರಣ ಮಾಡುವ ಸಮಯವಲ್ಲ. ಆರ್ಥಿಕ ಚಟುವಟಿಕೆಯ ಜೊತೆಗೆ ಕೊರೊನಾ ನಿಯಂತ್ರಣ ಕೂಡ ಅಷ್ಟೇ ಮುಖ್ಯ ಎಂದು ಫಾಸಿ ಹೇಳಿದ್ದಾರೆ.

ಸಾರ್ವಜನಿಕರ ಪಾತ್ರವೂ ಇದೆ

ಸಾರ್ವಜನಿಕರ ಪಾತ್ರವೂ ಇದೆ

ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರು ಸಹಕರಿಸಬೇಕಿದೆ, ವೈಯುಕ್ತಿಕ ಹಾಗೂ ಸಾರ್ವಜನಿಕವಾಗಿ ಜನರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಆಗ ಮಾತ್ರ ಮಹಾಮಾರಿ ನಿಯಂತ್ರಣ ಸಾಧ್ಯ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸರ್ಕಾರ ಕೂಡ ತನ್ನ ಪಾತ್ರ ನಿರ್ವಹಿಸಲೇಬೇಕು.

ಟ್ರಂಪ್ ಕೂಡ ಮಾಸ್ಕ್ ಧರಿಸಲಿ

ಟ್ರಂಪ್ ಕೂಡ ಮಾಸ್ಕ್ ಧರಿಸಲಿ

ಅಮೆರಿಕದಲ್ಲಿ ಈಗ ಮಾಸ್ಕ್ ಧರಿಸುವುವ ಬಗ್ಗೆಯೂ ರಾಜಕೀಯ ಆರಂಭವಾಗಿದೆ. ಮಾಸ್ಕ್ ಧರಿಸುವವರು ಟ್ರಂಪ್ ವಿರೋಧಿ, ಮಾಸ್ಕ್ ಧರಿಸದೆ ಇರುವವರು ಟ್ರಂಪ್ ಪರ ಎನ್ನುವ ಚರ್ಚೆ ನಡೆಯುತ್ತಿದೆ. ಹೀಗಾಗಿ ಟ್ರಂಪ್ ಕೂಡ ಮಾಸ್ಕ್ ಧರಿಸಲು ಆರಂಭಿಸಬೇಕು, ಇದರಿಂದ ಅಸಂಖ್ಯಾತ ಬೆಂಬಲಿಗರು ಮಾಸ್ಕ್ ಧರಿಸಲು ಮುಂದಾಗುತ್ತಾರೆ. ಅಧ್ಯಕ್ಷರೇ ಮೊದಲು ಈ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

English summary
New US coronavirus cases could more than double to 100,000 per day if the current surge spirals further out of control, the government's top infectious disease expert has warned, although he was "cautiously optimistic" a vaccine would be available early next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X