ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಚೀನಾ ಮೀರಿಸಿದ ಸಾವಿನ ಸಂಖ್ಯೆ: 1,75,000ಮಂದಿಗೆ ಸೋಂಕು

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 1: ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಮುಂದುವರೆದಿದ್ದು, ಚೀನಾವನ್ನು ಕೂಡ ಮೀರಿಸಿದೆ.

1,75,000 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಅಮೆರಿಕ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈ ವರೆಗೂ 10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1,75,000ಮಂದಿಯಲ್ಲಿ ಸೋಂಕು ದಢಪಟ್ಟಿದೆ.

ಅಂತೆಯೇ ಈ ವರೆಗೂ 3,415 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಅಮೆರಿಕ ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿದೆ.

trump

ಚೀನಾದಲ್ಲಿ ಈವರೆಗೂ 3,309 ಮಂದಿ ಸಾವನ್ನಪ್ಪಿದ್ದರು ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಇತ್ತೀಚಿನ ಮಾಹಿತಿ ಹೇಳಿದೆ.

ಅಮೆರಿಕದಲ್ಲಿ 3,000 ಜನರ ಬಲಿ ಪಡೆದ ಮಹಾಮಾರಿ ಕೊರೊನಾ!ಅಮೆರಿಕದಲ್ಲಿ 3,000 ಜನರ ಬಲಿ ಪಡೆದ ಮಹಾಮಾರಿ ಕೊರೊನಾ!

ಕೊರೋನಾ ವೈರಸ್ ಕುರಿತು ಮಾತನಾಡಿದ ಅವರು, 'ಇಂದು ನಾವು ಕೊರೋನ ಹಾವಳಿ ವಿರುದ್ಧದ ಯುದ್ಧದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದೇವೆ. 1 ಮಿಲಿಯನ್ ಅಮೆರಿಕನ್ನರನ್ನು ಪರೀಕ್ಷಿಸಲಾಗಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ: ಅಮೆರಿಕ ಅಧ್ಯಕ್ಷ ಟ್ರಂಪ್: ಇದೇ ವೇಳೆ ಅಮೆರಿಕದಲ್ಲಿ 10 ಲಕ್ಷ ಜನರಿಗೆ ಕರೋನ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಹೇಳಿದ್ದಾರೆ.

ಅಂತೆಯೇ 'ಈ ನಡುವೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಸೋಂಕುನಿವಾರಕಗೊಳಿಸುವ ಎನ್ 95 ಮಾಸ್ಕ್ ಗಳನ್ನು ಅನುಮೋದಿಸಿದ್ದು ಆರೋಗ್ಯ ಕಾರ್ಯಕರ್ತರು ಅವುಗಳನ್ನು ಮರುಬಳಕೆ ಮಾಡಬಹುದು.

English summary
The number of deaths in the United States from coronavirus has surpassed those reported by China, where the pandemic began in December, according to a toll published on Tuesday by Johns Hopkins University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X