ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಅಮೆರಿಕ ಕೌಂಟರ್: ಕಪ್ಪುಪಟ್ಟಿಯಲ್ಲಿ ಅಜರ್ ಸೇರಿಸಲು ಹೊಸ ತಂತ್ರ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಲು ಅಡ್ಡಿಪಡಿಸುತ್ತಿರುವ ಚೀನಾಕ್ಕೆ ಎದುರೇಟು ನೀಡಲು ಅಮೆರಿಕ ತಂತ್ರ ರೂಪಿಸಿದೆ.

ಮಸೂದ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಮೆರಿಕ ಕರಡು ನಿರ್ಣಯವನ್ನು ಸಿದ್ಧಪಡಿಸಿದೆ. ಇದರಿಂದ ಚೀನಾದ ಕುತಂತ್ರಕ್ಕೆ ಹಿನ್ನಡೆಯುಂಟಾಗುವ ಸಾಧ್ಯತೆ ಇದೆ.

ಜಾಗತಿಕ ಉಗ್ರರ ಪಟ್ಟಿಗೆ ಅಜರ್ ಹೆಸರು ಸೇರಿಸಲು ಚೀನಾ ಅಡ್ಡಗಾಲುಜಾಗತಿಕ ಉಗ್ರರ ಪಟ್ಟಿಗೆ ಅಜರ್ ಹೆಸರು ಸೇರಿಸಲು ಚೀನಾ ಅಡ್ಡಗಾಲು

ಕಳೆದ ತಿಂಗಳು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯಲ್ಲಿ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಚೀನಾ ವೀಟೋ ಅಧಿಕಾರ ಬಳಸಿ ಅಡ್ಡಿಪಡಿಸಿತ್ತು. ಹೀಗಾಗಿ ಚೀನಾಕ್ಕೆ ತಿರುಗೇಟು ನೀಡಲು ಅಮೆರಿಕ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ನಿರ್ಣಯದ ಪ್ರಸ್ತಾಪ ಸಲ್ಲಿಸಿದೆ.

us contering china circulated a resolution to blacklist JeM Masood Azhar

ಅಮೆರಿಕ ಈ ಸಂಬಂಧ ನಿರ್ಣಯವನ್ನು ಹಂಚಿಕೆ ಮಾಡಿದ್ದು, ಇದಕ್ಕೆ ಬ್ರಿಟನ್ ಮತ್ತು ಫ್ರಾನ್ಸ್‌ನ ಬೆಂಬಲದೊಂದಿಗೆ ಕರಡು ಸಿದ್ಧಪಡಿಸಲಾಗಿದೆ.

ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್ಅಜರ್ ಬೆನ್ನಿಗೆ ನಿಂತ ಚೀನಾ, ಟ್ವಿಟ್ಟರ್ ನಲ್ಲಿ 'ಚೀನಾ ಉತ್ಪನ್ನಗಳನ್ನು ನಿಷೇಧಿಸಿ' ಟ್ರೆಂಡ್

ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಆರಂಭದಲ್ಲಿ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಐಎಸ್‌ಐಎಸ್ ಮತ್ತು ಅಲ್ ಕೈದಾ ನಿರ್ಬಂಧ ಸಮಿತಿಗೆ ಮನವಿ ಮಾಡಿದ್ದವು. ಇದಕ್ಕೆ ಚೀನಾ ತಡೆಯೊಡ್ಡಿತ್ತು.

ಇದು ಜಾರಿಗೆ ಬಂದರೆ ಅಜರ್ ಮೇಲೆ ಶಸ್ತ್ರಾಸ್ತ್ರ ವ್ಯವಹಾರ ನಿಷೇಧ, ಪ್ರಯಾಣ ನಿಷೇಧ ಮತ್ತು ಆತನ ಆಸ್ತಿಪಾಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕಅಜರ್ 'ಜಾಗತಿಕ ಉಗ್ರ': ಭಾರತಕ್ಕೆ ನಮ್ಮ ಬೆಂಬಲ ಎಂದ ಅಮೆರಿಕ

ಅಮೆರಿಕದ ಕರಡು ಪ್ರತಿಗೆ ತಕ್ಷಣ ಪ್ರತಿಕ್ರಿಯೆ ನೀಡಲು ಚೀನಾ ಮುಂದಾಗಿಲ್ಲ. ವಿಶ್ವಸಂಸ್ಥೆಯು ನಿಷೇಧಿತ ಉಗ್ರರ ಪಟ್ಟಿಯನ್ನು ತಯಾರಿಸುವ ವಿಚಾರದಲ್ಲಿ ಈಗಾಗಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದಲೇ ತೀವ್ರ ಆಕ್ಷೇಪವಿದೆ. ಹಾಗಾಗಿ, ಚೀನಾ ದೇಶವು ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದರು.

English summary
The United States circulated a draft resolution to UNSC to blacklist Jaish-e-Mohammad chief Masood Azhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X