ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

|
Google Oneindia Kannada News

Recommended Video

ನರೇಂದ್ರ ಮೋದಿ ಹೊಸ ಸರ್ಕಾರಕ್ಕೆ ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ಮೊದಲ ಆಘಾತ

ವಾಷಿಂಗ್ಟನ್, ಮೇ 31: ಎರಡನೇ ಬಾರಿಗೆ ಪ್ರಧಾನಿಯಾಗಿ ಗುರುವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಡೊನಾಲ್ಡ್ ಟ್ರಂಪ್ ಮೊದಲ ಆಘಾತ ನೀಡಿದ್ದಾರೆ.

ಆದ್ಯತೆಯ ವಹಿವಾಟಿನ(Generalized System of Preferences) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಕಳೆದ ಮಾರ್ಚ್ ನಲ್ಲೇ ಹೇಳಿತ್ತು.

ಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆ

ಇದೀಗ ಜೂನ್ 5 ರಿಂದ ಆದ್ಯತೆಯ ವಹಿವಾಟಿನ ಅಡಿಯಲ್ಲಿ ಭಾರತಕ್ಕೆ ನೀಡುತ್ತಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಹಿಂದಕ್ಕೆ ಪಡೆಯುವುದಾಗಿ ಅಮೆರಿಕ ಹೇಳಿದೆ. ತನ್ನ ನಡೆಯನ್ನು ಅಮೆರಿಕ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಟ್ರಂಪ್ ಆಡಳಿತದ ಉನ್ನತಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮುಗಿದ ಕತೆ

ಮುಗಿದ ಕತೆ

"ಭಾರತಕ್ಕೆ ಸುಂಕರಹಿತ ವಹಿವಾಟಿನ ಸೌಲಭ್ಯ ನೀಡುವ ನಿರ್ಧಾರದಿಂದ ನಾವು ಈ ಮೊದಲೇ ಹಿಂದೆ ಸರಿದಿದ್ದೇವೆ. ಅದು ಮುಗಿದ ಕತೆ. ಇನ್ನು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ" ಎಂದು ಅದು ಹೇಳಿದೆ. ಭಾರತವನ್ನು ಅಮೆರಿಕದ ಆದ್ಯತಾ ವಹಿವಾಟಿನ ಪಟ್ಟಿಯಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕಳೆದ ವರ್ಷ ಆಗಸ್ಟ್ ನಲ್ಲೇ ಮನವಿ ಮಾಡಲಾಗಿತ್ತು. ಹೀಗೆ ಮಾಡುವುದರಿಂದ ಅಮೆರಿಕದ ಕಾರ್ಖಾನೆಗಳು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಬಹುದು. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದಿತ್ತು.

ನಿರಾಕರಿಸಿದ್ದ ಟ್ರಂಪ್

ನಿರಾಕರಿಸಿದ್ದ ಟ್ರಂಪ್

ಕಳೆದ ಮಾರ್ಚ್ ತಿಂಗಳಿನಲ್ಲಿ ಮಾತನಾಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನು ಮೇಲೆ ಭಾರತಕ್ಕೆ ಸುಂಕ ರಹಿತ ಸೌಲಭ್ಯವನ್ನು ನೀಡುವುದಿಲ್ಲ. ಭಾರತ ಮತ್ತು ಅಮೆರಿಕದ ನಡುವೆ ಈ ಕುರಿತು ಹಲವು ಬಾರಿ ಮಾತುಕತೆ ನಡೆದಿದ್ದರೂ, ಭಾರತ ಅಮೆರಿಕದಿಂದ ರಫ್ತಾಗುವ ವಸ್ತುಗಳಿಗೂ ಸಮಾನ ಸೌಲಭ್ಯ ನೀಡದೆ ಇರುವುದು ಮತ್ತು ಭಾರತದ ಮಾರುಕಟ್ಟೆಗೆ ಅಮೆರಿಕದಿಂದ ರಫ್ತಾಗುವ ವಸ್ತುಗಳು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದರು. ಭಾರತ ಅಮೆರಿಕದಿಂದ ರಫ್ತಾಗುವ ವಸ್ತುಗಳಿಗೂ ಸಮಾನ ಮತ್ತು ಸಮಂಜಸವಾದ ಪ್ರವೇಶ ನೀಡುವುದಾದರೆ ಈ ನಿರ್ಧಾರವನ್ನು ಮತ್ತೆ ಪರಾಮರ್ಶಿಸಲಾಗುವುದು ಎಂದಿದ್ದರು.

ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ

ಜಿಎಸ್ಪಿ ಎಂದರೇನು?

ಜಿಎಸ್ಪಿ ಎಂದರೇನು?

ಅಮೆರಿಕದ ಆದ್ಯತೆ ವಹಿವಾಟು(Generalized System of Preferences) ವ್ಯವಸ್ಥೆ ಇರುವುದು ಜಗತ್ತಿನ ಹಲವು ಬಡ ದೇಶಗಳು ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ಮುಂದುವರಿದು, ಅವರ ಆರ್ಥಿಕತೆ ದೃಢವಾಗಿ, ಬಡತನದಿಂದ ಹೊರಗೆ ಬರಲು ನೆರವಾಗುವ ಉದ್ದೇಶದಿಂದ. ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿ ಪಥದಲ್ಲಿರುವ ದೇಶಗಳಿಗೆ ನೀಡುವ ಒಂದು ವ್ಯವಸ್ಥೆ ಅಂದುಕೊಳ್ಳಬಹುದು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದ ಮಾಡಿಕೊಳ್ಳುವ ಆಮದಿನ ಮೇಲೆ ಕಡಿಮೆ ಅಥವಾ ಶೂನ್ಯ ಸುಂಕ ವಿಧಿಸಲಾಗುತ್ತದೆ. ಅಮೆರಿಕ ಮಾತ್ರ್ ಅಲ್ಲ, ಯುನೈಟೆಡ್ ಕಿಂಗ್ ಡಮ್, ಯುರೋಪಿಯನ್ ಒಕ್ಕೂಟದ ಕೆಲ ರಾಷ್ಟ್ರಗಳು ಈ ರೀತಿ ಅನುಕೂಲ ನೀಡುತ್ತದೆ. ಅರ್ಹ ಉತ್ಪನ್ನಗಳಿಗೆ ತುಂಬ ಕಡಿಮೆ ಅಥವಾ ಶೂನ್ಯ ಸುಂಕದ ಮೂಲಕ ನೆರವಾಗುತ್ತವೆ.

ಜಿಎಸ್ ಪಿ ಉದ್ದೇಶ ಮತ್ತು ನಿಯಮ

ಜಿಎಸ್ ಪಿ ಉದ್ದೇಶ ಮತ್ತು ನಿಯಮ

ರಫ್ತು ಮಾಡುವುದನ್ನು ಪ್ರೋತ್ಸಾಹಿಸುವ ಮೂಲಕ ಬಡ ದೇಶಗಳನ್ನು ಆರ್ಥಿಕವಾಗಿ ಮೇಲೆತ್ತುವುದು ಈ ಯೋಜನೆ ಉದ್ದೇಶ. ಇದರ ಜತೆಗೆ ತಮ್ಮದೇ ದೇಶದ ಕಂಪನಿಗಳು ವಿದೇಶಿ ಕಂಪನಿಗಳ ಜತೆಗೆ ಸ್ಪರ್ಧೆಗೆ ಇಳಿದು, ದೇಶದ ಜನರಿಗೆ ಸ್ಪರ್ಧಾತ್ಮಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲಿ ಎಂಬ ಉದ್ದೇಶವಿದೆ.

ಈ ವಹಿವಾಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಶೂನ್ಯ ಅಥವಾ ಕಡಿಮೆ ಸುಂಕ ಹಾಕಲಾಗುತ್ತದೆ. ಬಡ ದೇಶಗಳ ಪಟ್ಟಿಯನ್ನು ಅಮೆರಿಕವೇ ಸಿದ್ಧಪಡಿಸುತ್ತದೆ. ಆಯ್ದ ಉತ್ಪನ್ನಗಳಿಗೆ ಉಳಿದ ವಿಶ್ವ ವಾಣಿಜ್ಯ ಒಕ್ಕೂಟದ ರಾಷ್ಟ್ರಗಳಿಗಿಂತ ಕಡಿಮೆ ಸುಂಕ ಹಾಕಲಾಗುತ್ತದೆ. ಪ್ರತಿ ವರ್ಷ ಉತ್ಪನ್ನಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ಜತೆಗೆ ಯಾವ ದೇಶಗಳನ್ನು ಆದ್ಯತಾ ವಹಿವಾಟಿನ ಅಡಿ ಪರಿಗಣಿಸಬೇಕು ಎಂದು ಕೂಡ ತೀರ್ಮಾನಿಸಲಾಗುತ್ತದೆ.

English summary
US confirms that there will be no changes in its decision of removing India from the Generalized System of Preferences. President Donald Trump's administration said in March it was removing India from the GSP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X