India
  • search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡ್ಡಿ ದರ 75 ಮೂಲಾಂಕದಷ್ಟು ಹೆಚ್ಚಳ; 1994ರ ಬಳಿಕ ಅಮೆರಿಕ ಕಂಡ ಅತಿದೊಡ್ಡ ಏರಿಕೆ

|
Google Oneindia Kannada News

ವಾಷಿಂಗ್ಟನ್, ಜೂನ್ 16: ಹೆಚ್ಚುತ್ತಿರುವ ಹಣದುಬ್ಬರವನ್ನು ತಹಬದಿಗೆ ತರುವ ಉದ್ದೇಶದಿಂದ ಅಮೆರಿಕದ ರಿಸರ್ವ್ ಬ್ಯಾಂಕ್ ಬಡ್ಡಿ ದರದಲ್ಲಿ 75 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ.

ಅಮೆರಿಕದ ಸೆಂಟ್ರಲ್ ಬ್ಯಾಂಕ್ 50 ಮೂಲಾಂಕಗಳಷ್ಟು ಬಡ್ಡಿ ದರ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇತ್ತಾದರೂ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡುವ ನಿರೀಕ್ಷೆ ಇರಲಿಲ್ಲ. 1994ರ ನಂತರ, ಅಂದರೆ ಕಳೆದ 28 ವರ್ಷಗಳ ಅವಧಿಯಲ್ಲಿ ಅಮೆರಿಕದ ರಿಸರ್ವ್ ಬ್ಯಾಂಕ್ ಇಷ್ಟು ಪ್ರಮಾಣದಲ್ಲಿ ಬಡ್ಡಿದರವನ್ನು ಒಮ್ಮೆಗೇ ಹೆಚ್ಚಿಸಿದ್ದಿಲ್ಲ.

ಯುಎಸ್: ಇಂಧನ ಬೆಲೆ ಹೆಚ್ಚಿಸಿದ ದೊಡ್ಡ ತೈಲ ಸಂಸ್ಥೆಗಳ ವಿರುದ್ಧ ಬೈಡನ್ ಕಿಡಿಯುಎಸ್: ಇಂಧನ ಬೆಲೆ ಹೆಚ್ಚಿಸಿದ ದೊಡ್ಡ ತೈಲ ಸಂಸ್ಥೆಗಳ ವಿರುದ್ಧ ಬೈಡನ್ ಕಿಡಿ

ಹಣದುಬ್ಬರ ನಿರೀಕ್ಷೆ ಮೀರಿ ಹಿಡಿತ ತಪ್ಪಿ ಏರುತ್ತಿರುವುದರಿಂದ ಬಡ್ಡಿ ದರ ದೊಡ್ಡ ಮಟ್ಟದಲ್ಲಿ ಹೆಚ್ಚಿಸದೇ ಬೇರೆ ವಿಧಿ ಇಲ್ಲ ಎನ್ನುತ್ತಾರೆ ಅಮೆರಿಕದ ಆರ್ಥಿಕ ತಜ್ಞರು. ಈ ಹೆಚ್ಚಳ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಬಡ್ಡಿ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಭಾರತದಲ್ಲೂ ಹಣದುಬ್ಬರ ಏರುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಕೂಡ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಭಾರತ ಅಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲೂ ಹಣದುಬ್ಬರ ಬಾಧಿಸುತ್ತಿದ್ದು, ಅಲ್ಲೆಲ್ಲಾ ಅದನ್ನು ನಿಯಂತ್ರಣಕ್ಕೆ ತರಲು ಬಡ್ಡಿ ದರ ಹೆಚ್ಚಳದ ಮಾರ್ಗ ಪ್ರಮುಖ ಅಸ್ತ್ರವಾಗಿದೆ.

ಎಷ್ಟಿದೆ ಬಡ್ಡಿ ದರ?

ಎಷ್ಟಿದೆ ಬಡ್ಡಿ ದರ?

ಅಮೆರಿಕದಲ್ಲಿ ಹಣದುಬ್ಬರ ಶೇ. 5ಕ್ಕಿಂತ ಹೆಚ್ಚು ಮಟ್ಟಕ್ಕೆ ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ 75 ಮೂಲಾಂಕಗಳಷ್ಟು ಬಡ್ಡಿ ದರ ಹೆಚ್ಚಿಸುವ ದೊಡ್ಡಮಟ್ಟದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ಅಲ್ಲಿನ ಆಡಳಿತದ ಗುರಿಯಾಗಿದೆ. ಈಗ ರಿಸರ್ವ್ ಬ್ಯಾಂಕ್ ಕೈಗೊಂಡ ಕ್ರಮದ ಬಳಿಕ ಅಮೆರಿಕದಲ್ಲಿ 1.50ರಿಂದ 1.75 ಪ್ರತಿಶತ ಬಡ್ಡಿ ದರ ಇದೆ. ಈ ವರ್ಷಾಂತ್ಯದಲ್ಲಿ ಅದು ಶೇ. 3.4ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ ಮುಂದಿನ ಕೆಲ ತಿಂಗಳಲ್ಲಿ ಇನ್ನೂ 150 ಮೂಲಾಂಕಗಳಷ್ಟಾದರೂ ಬಡ್ಡಿ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಆರತಿ ಪ್ರಭಾಕರ್ ಅಮೆರಿಕ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರ್ತಿಆರತಿ ಪ್ರಭಾಕರ್ ಅಮೆರಿಕ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರ್ತಿ

ಅಮೆರಿಕದ ಆರ್ಥಿಕ ಸ್ಥಿತಿ

ಅಮೆರಿಕದ ಆರ್ಥಿಕ ಸ್ಥಿತಿ

ಅಮೆರಿಕದ ಆರ್ಥಿಕತೆಯನ್ನು ಈಗ ಹೆಚ್ಚು ಬಾಧಿಸುತ್ತಿರುವುದು ಹಣದುಬ್ಬರ ಮತ್ತು ನಿರುದ್ಯೋಗ. ಉಕ್ರೇನ್ ಮತ್ತು ರಷ್ಯಾ ಯುದ್ದದ ಪರಿಣಾಮ ಅಮೆರಿಕವನ್ನು ತೀವ್ರವಾಗಿ ತಾಕಿದೆ. ಇದು ಹಣದುಬ್ಬರ ಏರಿಕೆಗೆ ಒಂದು ಮುಖ್ಯ ಕಾರಣ. ಹಾಗೆಯೇ, ಚೀನಾದ ವಿವಿಧೆಡೆ ಕೋವಿಡ್ ಕಾರಣಕ್ಕೆ ಲಾಕ್‌ಡೌನ್ ಹೇರಲಾಗುತ್ತಿರುವುದು ಅಮೆರಿಕದ ಆರ್ಥಿಕತೆಗೆ ಪೆಟ್ಟುಕೊಟ್ಟಿದೆ. ಇದಕ್ಕೆ ಕಾರಣ, ಅಮೆರಿಕದ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಚೀನಾದ ಪಾಲೂ ಇರುವುದು.

ಪೆಟ್ರೋಲ್ ಬೆಲೆ ಗಗನಕ್ಕೆ

ಪೆಟ್ರೋಲ್ ಬೆಲೆ ಗಗನಕ್ಕೆ

ಜೊತೆಗೆ, ಉಕ್ರೇನ್-ರಷ್ಯಾ ಯುದ್ಧದಿಂದಾಗಿ ತೈಲ ಬೆಲೆಗಳು ಹೆಚ್ಚುತ್ತಿವೆ. ಅಮೆರಿಕದಲ್ಲಿ ಗ್ಯಾಸೊಲೀನ್ (ಪೆಟ್ರೋಲ್) ದರ ಒಂದು ಗ್ಯಾಲನ್‌ಗೆ 5 ಡಾಲರ್ ಗಡಿ ಮುಟ್ಟಿದೆ. ಇದು ಹೊಸ ದಾಖಲೆಯಾಗಿದೆ. ಒಂದು ಗ್ಯಾಲನ್ ಎಂದರೆ 3.78 ಲೀಟರ್. ಅಂದರೆ, ಒಂದು ಲೀಟರ್ ಪೆಟ್ರೋಲ್ ಬೆಲೆ ಸುಮಾರು 102 ರೂಪಾಯಿ ಆಗುತ್ತದೆ. ಹೆಚ್ಚೂ ಕಡಿಮೆ ಭಾರತದಲ್ಲಿರುವಷ್ಟೇ ಪೆಟ್ರೋಲ್ ಬೆಲೆ ಅಮೆರಿಕದಲ್ಲಿ ಇದ್ದಂತಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಗ್ಯಾಸೊಲಿನ್ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಡಿಪಿ ಮತ್ತು ನಿರುದ್ಯೋಗ

ಜಿಡಿಪಿ ಮತ್ತು ನಿರುದ್ಯೋಗ

ಅಮೆರಿಕದಲ್ಲಿ ಜಿಡಿಪಿ ವೃದ್ಧಿ ದರ ಈ ವರ್ಷ 1.7ಕ್ಕೆ ನಿಲ್ಲಬಹುದು ಎಂದು ಹೊಸದಾಗಿ ಅಂದಾಜು ಮಾಡಲಾಗಿದೆ. ರಷ್ಯಾ ಯುದ್ಧಕ್ಕೆ ಮೊದಲು ಮಾಡಿದ್ದ ಅಂದಾಜಿನ ಪ್ರಕಾರ 2022ರ ವರ್ಷಾಂತ್ಯದಲ್ಲಿ ಅಮೆರಿಕದ ಜಿಡಿಪಿ ಶೇ. 2.8ರಷ್ಟು ವೃದ್ಧಿಯಾಗಬಹುದು ಎಂದು ಎಣಿಸಲಾಗಿತ್ತು. ಈಗ ಯುದ್ಧ, ಹಣದುಬ್ಬರ ಇವೆಲ್ಲವನ್ನೂ ಪರಿಗಣಿಸಿ ಅಂದಾಜು ಪರಿಷ್ಕರಿಸಲಾಗಿದೆ.

ನಿರುದ್ಯೋಗ ಕೂಡ ಅಮೆರಿಕವನ್ನು ಕಾಡುತ್ತಿದೆ. ಇತ್ತೀಚಿನ ಕೆಲ ತಿಂಗಳಲ್ಲಿ ಅಲ್ಲಿ ನಿರುದ್ಯೋಗ ಸಮಸ್ಯೆ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ. 3.6ಕ್ಕೆ ಬಂದು ನಿಂತಿದೆ. ಅದರೆ, ಇದು ಮುಂದಿನ ಕೆಲ ತಿಂಗಳಲ್ಲಿ ಹೆಚ್ಚಾಗುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.

ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಮೇಲೆ ಭಾರತದಂಥ ಅನೇಕ ದೇಶಗಳ ಆರ್ಥಿಕತೆಗಳು ವಿವಿಧ ಸ್ತರಗಳಲ್ಲಿ ಅವಲಂಬಿತವಾಗಿದೆ. ಹೀಗಾಗಿ, ಅಮೆರಿಕದ ಆರ್ಥಿಕತೆ ಮುಗ್ಗರಿಸಿದರೆ ಹಲವು ದೇಶಗಳ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
To combat raising inflation, America's Federal Reserve bank has announced interest rate increase by 75 basis points. This is the biggest interest hike after 1994.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X