ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪ

|
Google Oneindia Kannada News

ವಾಷಿಂಗ್ಟನ್, ಜನವರಿ 7: ಅಮೆರಿಕ ಕಾಂಗ್ರೆಸ್ ಮೇಲೆ ಬುಧವಾರ ನಡೆದ ದಾಳಿಗೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ನರು ಕಾರಣ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆರೋಪಿಸಿದ್ದಾರೆ. 'ಈ ಘಟನೆಯು ನಮ್ಮ ದೇಶಕ್ಕೆ ಅತಿ ದೊಡ್ಡ ಅಗೌರವ ಹಾಗೂ ನಾಚಿಕೆಗೇಡಿನ ಸಂಗತಿ' ಎಂದು ಅವರು ಕಿಡಿಕಾರಿದ್ದಾರೆ.

'ನಾವು ಇದನ್ನು ಸಂಪೂರ್ಣ ಅಚ್ಚರಿ ಎಂದು ಪರಿಗಣಿಸಿದರೆ ನಮ್ಮನ್ನು ನಾವೇ ತಮಾಷೆ ಮಾಡಿಕೊಂಡಂತೆ' ಎಂದಿರುವ ಒಬಾಮ, 'ಕಾನೂನು ಬದ್ಧ ಚುನಾವಣೆಯಿಂದ ಹೊರಬಂದ ಫಲಿತಾಂಶದ ವಿರುದ್ಧ ಆಧಾರರಹಿತ ಸುಳ್ಳುಗಳನ್ನು ಆರೋಪಿಸುವುದನ್ನು ಮುಂದುವರಿಸಿರುವ ಡೊನಾಲ್ಡ್ ಟ್ರಂಪ್ ಅವರೇ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಯುಎಸ್ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲಯುಎಸ್ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲ

ರಿಪಬ್ಲಿಕನ್ ಪಕ್ಷದ ಸದಸ್ಯರು ಮತ್ತು ಅದರ ಮಾಧ್ಯಮ ವರದಿಗಾರರ ವಿರುದ್ಧವೂ ವಾಗ್ದಾಳಿ ನಡೆಸಿರುವ ಒಬಾಮ, ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರ ಗೆಲುವಿನ ಕುರಿತು ತಮ್ಮ ಹಿಂಬಾಲಕರಿಗೆ ಸತ್ಯ ಹೇಳಲು ಅವರು ಆಸಕ್ತಿ ತೋರಿಸುತ್ತಿಲ್ಲ ಎಂದಿದ್ದಾರೆ.

US Capitol Violence; Barack Obama Blames Donald Trump For Inciting People

'ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ನರು ಸೋಲು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದರ ಫಲಿತಾಂಶವನ್ನು ನಾವೀಗ ಕಾಣುತ್ತಿದ್ದೇವೆ. ಅದು ಹಿಂಸಾತ್ಮಕ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ಇತಿಹಾಸ ಈ ಹಿಂಸಾಚಾರವನ್ನು ನೆನಪಿನಲ್ಲಿಡಲಿದೆ ಎಂದು ಒಬಾಮ ಹೇಳಿದ್ದಾರೆ.

English summary
Barack Obama said that violence at US Capitol a moment of great dishonor and shame for our nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X