ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.6: ಯುಎಸ್ ಕ್ಯಾಪಿಟಲ್ ಮೇಲೆ ಮೇಲೆ ದಾಳಿಗೆ ಒಂದು ವರ್ಷ

|
Google Oneindia Kannada News

ವಾಶಿಂಗ್ಟನ್, ಜನವರಿ 06: ಪ್ರಜಾಪ್ರಭುತ್ವದ ಹೆಸರಿನಲ್ಲಿ ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿಗೆ ಜನವರಿ 6ರಂದು ಒಂದು ವರ್ಷ ಆಗುತ್ತದೆ. ಜಗತ್ತಿನಾದ್ಯಂತ ದಾಳಿ ಕರಾಳತೆಯನ್ನು ಹೇಳುವ ಚಿತ್ರಗಳು ಸಾಕಷ್ಟು ವೈರಲ್ ಆಗಿದ್ದವು. ವಾಷಿಂಗ್ಟನ್‌ನಲ್ಲಿನ ಡೆಮಾಕ್ರಟ್‌ಗಳು ಗುರುವಾರ ಅದೇ ಘಟನೆಯನ್ನು ನೆನಪಿಸುವ ಕಟ್ಟಡಗಳಿಗೆ ಗೌರವ ಸಲ್ಲಿಸಿದರು.

ಕ್ಯಾಪಿಟಲ್ ಮೆಟ್ಟಿಲುಗಳ ಮೇಲೆ ನಿಂತು ಮೌನಾಚರಣೆ, ಮೊದಲು ಘಟನೆಗೆ ಸಾಕ್ಷಿಯಾದ ಜನಪ್ರತಿನಿಧಿಗಳು ಮತ್ತು ಇತಿಹಾಸಕಾರರೊಂದಿಗೆ ಪ್ಯಾನಲ್ ಚರ್ಚೆ ಹಾಗೂ ಪ್ರಾರ್ಥನೆ ಮತ್ತು ಜಾಗರಣೆಯನ್ನು ಮಾಡುವುದು ಇಂದಿನ ವಾರ್ಷಿಕೋತ್ಸವದ ಪ್ರಮುಖ ಕಾರ್ಯಕ್ರಮ ಆಗಿದ್ದವು.

ಗಲಭೆಯ ಬಳಿಕ ಕೊನೆಗೂ ತಲೆಬಾಗಿದ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆಗಲಭೆಯ ಬಳಿಕ ಕೊನೆಗೂ ತಲೆಬಾಗಿದ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ

ರಾಷ್ಟ್ರೀಯ ಪ್ರತಿಮೆ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಜನವರಿ 6ರ "ಐತಿಹಾಸಿಕ ಮಹತ್ವ"ವನ್ನು ಹೈಲೈಟ್ ಮಾಡುವ ನಿರೀಕ್ಷೆಯೊಂದಿಗೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಮಾರಂಭಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. "ಒಂದು ವರ್ಷದ ನಂತರ ದೇಶಕ್ಕೆ ಇದರ ಅರ್ಥವೇನು" ಎಂದು ತಿಳಿಸಲಾಗುವುದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.

US Capitol riots anniversary : Heres whats happening at the Capitol

ಯುಎಸ್ ಅಧ್ಯಕ್ಷ ಬೈಡನ್ ಭಾಷಣದ ಬಗ್ಗೆ ಉಲ್ಲೇಖ:

"ಕಳೆದ ವರ್ಷ ಕ್ಯಾಪಿಟಲ್ ದಾಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಜೋ ಬೈಡನ್, ಕೆಲವರು ಹರಡಿದ ಸುಳ್ಳುಗಳ ಬಗ್ಗೆ ಅಲ್ಲ, ಅಂದು ಏನಾಯಿತು ಎಂಬ ಸತ್ಯದ ಬಗ್ಗೆ ಮಾತನಾಡಲಿದ್ದಾರೆ. ಅದರಿಂದ ಕಾನೂನು ನಿಯಮ ಮತ್ತು ನಮ್ಮ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ತಂದೊಡ್ಡಿರುವ ಅಪಾಯ," ಎಂದು ಪ್ಸಾಕಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಕ್ಯಾಪಿಟಲ್ ಮತ್ತು ಒಳಗಿರುವವರನ್ನು ರಕ್ಷಿಸಿದ ಕಾನೂನು ಜಾರಿ ಅಧಿಕಾರಿಗಳನ್ನು ಸ್ಮರಿಸಲು ಬೈಡೆನ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಯುಎಸ್ ಕ್ಯಾಪಿಟಲ್‌ನಲ್ಲಿ ದಾಳಿ:

ಕಳೆದ ಜನವರಿ 6ರಂದು ಕ್ಯಾಪಿಟಲ್‌ನಲ್ಲಿ ಸುಮಾರು 80 U.S. ಕ್ಯಾಪಿಟಲ್ ಪೋಲಿಸ್ ಮತ್ತು ಮೆಟ್ರೋಪಾಲಿಟನ್ ಪೋಲೀಸ್ ಇಲಾಖೆಯ ಸುಮಾರು 60 ಮಂದಿ ಸೇರಿದಂತೆ ಒಟ್ಟು 140 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಇನ್ನು, ದಾಳಿಯಲ್ಲಿ ಒಬ್ಬ ಕಾನೂನು ಅಧಿಕಾರಿ ಹಾಗೂ ನಾಲ್ವರು ಪ್ರತಿಭಟನಾಕಾರರು ಸೇರಿದಂತೆ ಐವರು ಮೃತಪಟ್ಟಿದ್ದರು.

"ಅವರ ಪ್ರಯತ್ನಗಳಿಂದಾಗಿ, ನಮ್ಮ ಪ್ರಜಾಪ್ರಭುತ್ವವು ಜನಸಮೂಹದ ದಾಳಿಯನ್ನು ತಡೆದುಕೊಂಡಿತು. ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ 150 ದಶಲಕ್ಷಕ್ಕೂ ಹೆಚ್ಚು ಜನರ ಇಚ್ಛೆಯನ್ನು ಅಂತಿಮವಾಗಿ ಕಾಂಗ್ರೆಸ್ ನೋಂದಾಯಿಸಿದೆ," ಎಂದು ಪ್ಸಾಕಿ ಹೇಳಿದರು.

ಯುಎಸ್ ಅಧ್ಯಕ್ಷ ಜೋ ಬೈಡೆನ್ "ನಮ್ಮ ಪ್ರಜಾಪ್ರಭುತ್ವವನ್ನು ಭದ್ರಪಡಿಸಲು ಮತ್ತು ಬಲಪಡಿಸಲು ಹಾಗೂ ನಮ್ಮ ಸಂಸ್ಥೆಗಳಲ್ಲಿ ಹರಡುತ್ತಿರುವ ದ್ವೇಷ ಮತ್ತು ಸುಳ್ಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಮರುಪರಿಶೀಲನೆ ನಡೆಸುವ ನಿರೀಕ್ಷೆಯಿದೆ ಎಂದು ಪ್ಸಾಕಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಂಧಲೆ:

ಜೋ ಬೈಡನ್ ಅವರ ಗೆಲುವನ್ನು ಪ್ರಮಾಣೀಕರಿಸುವ ಸಲುವಾಗಿ ಬುಧವಾರ ಅಮೆರಿಕ ಸಂಸತ್ತು ಸಭೆ ಸೇರಿತ್ತು. ಅಂದು ರಿಪಬ್ಲಿನ್ ಬಾವುಟ ಹೊತ್ತ ಡೊನಾಲ್ಡ್ ಟ್ರಂಪ್ ಬೆಂಬಲಿತ ಸಾವಿರಾರು ಪ್ರತಿಭಟನಾಕಾರರು ಕ್ಯಾಪಿಟಲ್ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ನಡೆದ ಸಂಘರ್ಷದಲ್ಲಿ ಐವರು ಮೃತಪಟ್ಟಿದ್ದರು.

ಸಂಸತ್‌ನಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾಗಳಲ್ಲಿನ ಬೈಡನ್ ಗೆಲುವಿನ ವಿರುದ್ಧ ರಿಪಬ್ಲಿಕನ್ನರು ಆಕ್ಷೇಪ ವ್ಯಕ್ತಡಿಸಿದ್ದರು. ಸಂಸತ್ತು ಅದನ್ನು ತಿರಸ್ಕರಿಸಿತು. ಅರಿಝೋನಾ, ನೆವಾಡ ಮತ್ತು ಮಿಚಿಗನ್ ಎಲೆಕ್ಟೊರಲ್ ಮತಗಳ ವಿರುದ್ಧ ಕೂಡ ಆಕ್ಷೇಪ ತಿಳಿಸಿದರು. ಆದರೆ ಅವು ಚರ್ಚೆಗೆ ಬರುವ ಮೊದಲೇ ನಿರ್ಣಯಗಳು ವಿಫಲವಾದವು. ಪ್ರತಿಭಟನಾಕಾರರ ದಾಂಧಲೆಯಿಂದ ಸಂಸತ್ ಕಾರ್ಯಕಲಾಪ ಸ್ಥಗಿತಗೊಂಡಿತ್ತು.

English summary
US Capitol riots anniversary : Here's what's happening at the U.S. Capitol on Thursday to mark one year since the Jan. 6 attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X