ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಡದೊಳಗೆ ನುಗ್ಗಿದ ಕಾರು; ಕೆಲ ಕಾಲ ಬಂದ್ ಆದ ಯು.ಎಸ್ ಕ್ಯಾಪಿಟಲ್

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 2: ವ್ಯಕ್ತಿಯೊಬ್ಬ ಯು.ಎಸ್‌ ಕ್ಯಾಪಿಟಲ್‌ನ ಭದ್ರತಾ ಬ್ಯಾರಿಕೇಡ್‌ಗಳನ್ನು ನುಗ್ಗಿಸಿಕೊಂಡು ಕಾರು ಚಲಾಯಿಸಿದ್ದು, ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಈ ಘಟನೆ ನಡೆಯುತ್ತಿದ್ದಂತೆ ಯು.ಎಸ್. ಕ್ಯಾಪಿಟಲ್ ಕಟ್ಟಡವನ್ನು ಕೆಲ ಕಾಲ ಬಂದ್ ಮಾಡಲಾಗಿತ್ತು.

ಯು.ಎಸ್. ಕ್ಯಾಪಿಟಲ್ ಪೊಲೀಸರ ಪ್ರಕಾರ, ಒಬ್ಬ ವ್ಯಕ್ತಿಯು, ಭದ್ರತಾ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಾರು ನುಗ್ಗಿಸಲು ಪ್ರಯತ್ನಿಸಿದ್ದಾನೆ. ಕಾರು ಕೂಡ ಗೋಡೆಗೆ ಡಿಕ್ಕಿ ಹೊಡೆದಿದ್ದು, ಆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಚಾಲಕ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

US Capitol Closed On Firday After Car Rams Security Barricade

ಕಟ್ಟಡದ ಒಳಗೆ ಬರುತ್ತಿದ್ದ ಕಾರನ್ನು ಪರಿಶೀಲನೆಗಾಗಿ ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಏಕಾಏಕಿ ಕಾರು ನುಗ್ಗಿಸಲಾಗಿದೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಒಳಾಂಗಣದಲ್ಲಿಯೇ ಇರಲು ಪೊಲೀಸರಿಗೆ ಸೂಚನೆ ನೀಡಲಾಯಿತು.

ಸಂಸತ್ ಮೇಲೆ ಮತ್ತೆ ದಾಳಿ ನಡೆಯಬಹುದು, 7 ಸುತ್ತಿನ ಕೋಟೆಯಾಯ್ತು 'ಕ್ಯಾಪಿಟಲ್ ಹಿಲ್‌' ಸಂಸತ್ ಮೇಲೆ ಮತ್ತೆ ದಾಳಿ ನಡೆಯಬಹುದು, 7 ಸುತ್ತಿನ ಕೋಟೆಯಾಯ್ತು 'ಕ್ಯಾಪಿಟಲ್ ಹಿಲ್‌'

ಜನವರಿ 6ರಂದು ಮಾಜಿ ಅಧ್ಯಕ್ಷ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್‌ಗೆ ನುಗ್ಗಿ ಹಿಂಸಾಚಾರ ನಡೆಸಿದಂದಿನಿಂದಲೂ ಯು.ಎಸ್. ಕ್ಯಾಪಿಟಲ್‌ನಲ್ಲಿ ಆತಂಕದ ಪರಿಸ್ಥಿತಿಯಿದೆ. ಶುಕ್ರವಾರ ಈ ಘಟನೆ ನಡೆಯುತ್ತಿದ್ದಂತೆ ಹೆಚ್ಚು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

English summary
U.S. Capitol closed on friday after car rams security barricade, injuring two police officers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X