ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಟ್ವಿಟ್ಟರ್, ಫೇಸ್ಬುಕ್ ಖಾತೆ ತಾತ್ಕಾಲಿಕ ಬಂದ್ ಆಗಿದ್ದೇಕೆ?

|
Google Oneindia Kannada News

ವಾಷಿಂಗ್ಟನ್, ಜನವರಿ 07: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದು, ಯುಎಸ್ಎನಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಹೊತ್ತಿಗೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಪುಂಡಾಟವಾಡಿದ್ದಾರೆ. ''ನಾನು ಎಂದಿಗೂ ಚುನಾವಣೆ ಸೋಲೊಪ್ಪಿಕೊಳ್ಳುವುದಿಲ್ಲ'' ಎಂದು ಟ್ರಂಪ್ ಘೋಷಿಸಿದ್ದಾರೆ. ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ಟ್ರಂಪ್ ಬೆಂಬಲಿಗರು ನುಗ್ಗುವ ವೇಳೆಗೆ ಟ್ರಂಪ್ ಅವರ ಸಾಮಾಜಿಕ ಜಾಲ ತಾಣಗಳು ಸ್ಥಗಿತಗೊಂಡಿವೆ.

ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು12 ಗಂಟೆಗಳ ಕಾಲ ಹಾಗೂ ಫೇಸ್ಬುಕ್ 24ಗಂಟೆಗಳ ಕಾಲ ಕಾರ್ಯ ನಿರ್ವಹಿಸದಂತೆ ಸ್ಥಗಿತಗೊಳಿಸಲಾಗಿದೆ ಎಂದು ಫೇಸ್ಬುಕ್ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ಇನ್ಸ್ಟಾಗ್ರಮ್ ಖಾತೆ ಕೂಡಾ 24 ಗಂಟೆಗಳ ಕಾಲ ಲಾಕ್ ಆಗಿರಲಿದೆ ಎಂದು ಮುಖ್ಯಸ್ಥರಾದ ಆಡಂ ಮೊಸ್ಸೆರಿ ಹೇಳಿದ್ದಾರೆ.

ಪ್ರತಿಭಟನೆಗಾರರನ್ನು ಉದ್ದೇಶಿಸಿ ಟ್ರಂಪ್ ಅನೇಕ ಟ್ವೀಟ್‌ಗಳನ್ನು ಮಾಡಿದ್ದರು. ಮುಖ್ಯವಾಗಿ ಪ್ರಚೋದನಾಕಾರಿಯಾಗಿದ್ದ ಮೂರು ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ಹೇಳಿದೆ. ಇದರ ಬೆನ್ನಲೇ ಫೇಸ್ಬುಕ್ ವಿಡಿಯೋ ಕೂಡಾ ತೆಗೆದು ಹಾಕಲಾಗಿದೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಲಾಗಿತ್ತು, ಹೀಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಫೇಸ್ಬುಕ್ ಒಡೆತನದ ಟ್ವಿಟ್ಟರ್ ಹೇಳಿದೆ.

US Capitol breach posts: Donald Trump Twitter and Facebook accounts locked

ಈ ನಡುವೆ ಟ್ವಿಟ್ಟರ್ ನಲ್ಲಿ ಅಮೆರಿಕ ಟ್ರೆಂಡಿಂಗ್ ನಲ್ಲಿದೆ. ಟ್ರಂಪ್ ಪರ ವಿರೋಧ ಟ್ವೀಟ್ಸ್ ಹರಿದಾಡುತ್ತಿವೆ. ನಮ್ಮ ಮತ ಸರಿಯಾಗಿ ಎಣಿಕೆ ಮಾಡಿ ಎಂದು ಟ್ರಂಪ್ ಪರ ಹಲವರು ವಾದಿಸಿದರೆ, ಅಮೆರಿಕದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲಿದೆ, ಇಂಥ ಪ್ರತಿಭಟನೆಗಳಿಂದ ದೇಶದ ಘನತೆ ಕುಗ್ಗಲಿದೆ ಎಂಬ ಟ್ವೀಟ್ ಗಳು ಕಂಡು ಬಂದಿವೆ.

ಯುಎಸ್ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲಯುಎಸ್ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದಿದ್ದಾರೆ ಎಂದು ಈಗಾಗ್ಲೇ ಎಲೆಕ್ಟೊರಾಲ್ ಕಾಲೇಜು ಸ್ಪಷ್ಟಪಡಿಸಿದೆ. 46ನೇ ಅಧ್ಯಕ್ಷರಾಗಿ ಬೈಡನ್ ಗೆಲುವನ್ನು ಅಮೆರಿಕ ಚುನಾವಣಾ ಆಯೋಗ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಅಮೆರಿಕನ್ ಕಾಂಗ್ರೆಸ್ ಅಥವಾ ಜನಪ್ರತಿನಿಧಿಗಳ ಸಭೆಯಲ್ಲಿ ಬೈಡನ್ ಗೆಲುವನ್ನು ಅಂಗೀಕರಿಸಿ ಪ್ರಮಾಣ ಪತ್ರ ನೀಡಿದೆ.

ಸೆನೆಟರ್ ಆಗುವತ್ತ ಪಾಸ್ಟರ್ ವಾರ್ನಕ್, ಡೆಮಾಕ್ರಾಟ್ಸ್‌ನಿಂದ ಇತಿಹಾಸ ನಿರ್ಮಾಣ ಸೆನೆಟರ್ ಆಗುವತ್ತ ಪಾಸ್ಟರ್ ವಾರ್ನಕ್, ಡೆಮಾಕ್ರಾಟ್ಸ್‌ನಿಂದ ಇತಿಹಾಸ ನಿರ್ಮಾಣ

ಟ್ರಂಪ್ ಜನವರಿ 20ರ ನಂತರ ಅಧಿಕಾರ ತೊರೆದು, ವೈಟ್ ಹೌಸ್ ಬಿಟ್ಟು ಹೊರಡದಿದ್ದರೆ ಎಲ್ಲರೂ ಒಗ್ಗಟ್ಟಿನಿಂದ ಟ್ರಂಪ್ ವಿರುದ್ಧ ಅವರ ಪಕ್ಷದವರೇ ಹೋರಾಟ ನಡೆಸಿದರೂ ಅಚ್ಚರಿ ಪಡಬೇಕಾಗಿಲ್ಲ, ಇದಕ್ಕೆ ಪುಷ್ಟಿ ನೀಡುವಂತೆ ಇಂದು ಪ್ರತಿಭಟನೆ ವೇಳೆಯಲ್ಲೇ ಅನೇಕ ಹಿರಿಯ ಅಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

English summary
Twitter and Facebook Inc temporarily locked the accounts of US President Donald Trump on Wednesday following the US Capitol breach posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X