ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಕ್ಯಾನ್ಸರ್‌ ರೋಗಿಯ ದೇಹದಲ್ಲಿ 105 ದಿನ ಇತ್ತು ಕೊರೊನಾ ವೈರಸ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 06: ಕೊರೊನಾ ಸೋಂಕು ಸಾಮಾನ್ಯವಾಗಿ ವ್ಯಕ್ತಿಯ ದೇಹದೊಳಗೆ ಹೊಕ್ಕು ಎಂಟು ದಿನಗಳೊಳಗಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಆದರೆ ಅಮೆರಿಕದಲ್ಲಿರುವ ಕ್ಯಾನ್ಸರ್ ರೋಗಿಯೊಬ್ಬರ ದೇಹದಲ್ಲಿ ಕೊರೊನಾ ಸೋಂಕು 105 ದಿನಗಳ ಕಾಲ ಇದ್ದರೂ ಯಾವುದೇ ಲಕ್ಷಣ ಕಾಣಿಸಿಕೊಂಡಿರಲಿಲ್ಲ.ಕೊರೊನಾ ಸೋಂಕು ವ್ಯಕ್ತಿಯ ದೇಹದೊಳಗೆ 70 ದಿನಗಳ ಕಾಲ ಉಳಿದಿರುವ ನಿದರ್ಶನಗಳಿವೆ ಹಾಗೆಯೇ ಸೋಂಕು ಮರುಕಳಿಸಿದ ಪ್ರಕರಣಗಳು ಕೂಡ ಇವೆ.

ಪ್ಲಾಸ್ಮಾ ಥೆರಪಿಯಿಂದ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು: ತಜ್ಞರು ಪ್ಲಾಸ್ಮಾ ಥೆರಪಿಯಿಂದ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು: ತಜ್ಞರು

ಆದರೆ ಇದೇ ಮೊದಲ ಬಾರಿಗೆ ಕ್ಯಾನ್ಸರ್ ರೋಗಿಯೊಬ್ಬರಲ್ಲಿ ಯಾವುದೇ ಲಕ್ಷಣಗಳಿಲ್ಲದೆ ಕೊರೊನಾ ಸೋಂಕು 105 ದಿನಗಳ ಕಾಲ ಇತ್ತು ಎಂಬ ಸಂಗತಿ ಆಶ್ಚರ್ಯವನ್ನುಂಟು ಮಾಡಿದೆ.

US Cancer Patient Carried Coronavirus For 105 Days

ಜರ್ನಲ್ ಸೆಲ್‌ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ ವೈರಸ್ ಎಷ್ಟು ದಿನಗಳ ಕಾಲ ದೇಹದಲ್ಲಿ ಇರಬಹುದು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ದೊರೆತಿಲ್ಲ.

71 ವರ್ಷದ ಕ್ಯಾನ್ಸರ್ ಇರುವ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಅವರಿಗೆ ಅನಿಮಿಯಾ ಹೆಚ್ಚಾಗಿತ್ತೆಂದು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.

ಆಸ್ಪತ್ರೆಯಲ್ಲಿರುವ ರೋಗಿಗಳ ರಕ್ತದ ಮಾದರಿಯನ್ನು ನಿತ್ಯವೂ ಪರೀಕ್ಷಿಸಲಾಗುತ್ತಿತ್ತು. ಪಾಸಿಟಿವ್ ವರದಿ ಬಂದು 70, 105 ದಿನಗಳು ಕಳೆದ ಮೇಲೆ ಪರೀಕ್ಷೆ ಮಾಡಿದಾಗಲೂ ಪಾಸಿಟಿವ್ ಬಂದಿತ್ತು.

105 ದಿನಗಳ ಕಾಲ ಕೊರೊನಾ ಸೋಂಕು ಆಕೆಯ ದೇಹವನ್ನು ಬಿಟ್ಟು ಹೋಗಿರಲಿಲ್ಲ.ಆಕೆಗೆ ಬ್ಲಡ್ ಕ್ಯಾನ್ಸರ್ ಇರುವುದರಿಂದ ಆಕೆಯ ರಕ್ತದಲ್ಲಿ ಪ್ರತಿಕಾಯಗಳು ವೃದ್ಧಿಯಾಗಲೇ ಇಲ್ಲ. ಇದೇ ಮೊದಲ ಬಾರಿಗೆ ಇಂತಹ ಒಂದು ಪ್ರಕರಣವನ್ನು ನಾವು ನೋಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

English summary
While most people infected with the novel coronavirus actively shed the pathogen for about eight days, scientists have reported an unusual case of a blood cancer patient who carried the virus for about 105 days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X