ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಆಯ್ತು ಅಮೆರಿಕದಲ್ಲೂ ಆತಂಕ! ಜನಸಂಖ್ಯೆ ಕುಸಿಯುತ್ತಿದೆ ಯಾಕೆ?

|
Google Oneindia Kannada News

ಕೊರೊನಾ ತಂದಿಟ್ಟ ಸಾವು, ನೋವು ಒಂದೆರಡಲ್ಲ. ಆದರೆ ಈಗೀಗ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿದ್ದರೂ, ವೈರಸ್ ಮಾಡಿರುವ ಹಾನಿ ಸರಿಯಾಗುತ್ತಿಲ್ಲ. ಇದು ಸಾಲದು ಎಂಬಂತೆ ಜನಸಂಖ್ಯೆ ಕೂಡ ಭಾರಿ ಕುಸಿತ ಕಾಣುತ್ತಿದ್ದು, ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಕಳೆದ ವರ್ಷ 'ಡ್ರ್ಯಾಗನ್' ನಾಡು ಚೀನಾದಲ್ಲಿ ಜನನ ಪ್ರಮಾಣ ಭಾರಿ ಕುಸಿತ ಕಂಡಿತ್ತು. ಈಗ ಅಮೆರಿಕದಲ್ಲೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳ ಜನನ ಪ್ರಮಾಣ ಕಳೆದ ವರ್ಷ ಅಂದರೆ 2020ರಲ್ಲಿ ಶೇ. 4ಕ್ಕೆ ಕುಸಿದಿದೆ. ಬರೋಬ್ಬರಿ 50 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿರುವ ಅಮೆರಿಕದ ಜನನ ಪ್ರಮಾಣ ಹೊಸ ಆತಂಕ ಸೃಷ್ಟಿಸಿದೆ. ಚೀನಾದಲ್ಲಿ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ ಶೇ. 0.53ಕ್ಕೆ ಕುಸಿದರೆ ಅಮೆರಿಕದಲ್ಲಿ ಇದು ಶೇ. 4ಕ್ಕೆ ಕುಸಿದಿದೆ.

ಚೀನಾದಲ್ಲಿ ಕುಸಿಯುತ್ತಿದೆ ಜನಸಂಖ್ಯೆ..! ಭವಿಷ್ಯದಲ್ಲಿ ಭಾರತಕ್ಕೆ ನಂ. 1 ಪಟ್ಟ..?ಚೀನಾದಲ್ಲಿ ಕುಸಿಯುತ್ತಿದೆ ಜನಸಂಖ್ಯೆ..! ಭವಿಷ್ಯದಲ್ಲಿ ಭಾರತಕ್ಕೆ ನಂ. 1 ಪಟ್ಟ..?

ಅಷ್ಟಕ್ಕೂ ಎರಡೂ ದೇಶದ ಜನಸಂಖ್ಯೆ ಆಧಾರದಲ್ಲಿ ಹೇಳುವುದಾದರೆ ಅಮೆರಿಕನ್ನರಿಗೆ ಶಾಕಿಂಗ್ ಸುದ್ದಿಯಾಗಿದೆ. 2020ರ ಆರಂಭದಲ್ಲಿ ನೆಮ್ಮದಿಯಾಗಿದ್ದ ಅಮೆರಿಕದಲ್ಲಿ, 2-3 ತಿಂಗಳು ಕಳೆದ ಬಳಿಕ ಕೊರೊನಾ ಬಿರುಗಾಳಿಯೇ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಹೀಗೆ ಕೊರೊನಾ ಹೊಡೆತ ಕೂಡ ಜನಸಂಖ್ಯೆ ಏರಿಕೆಗೆ ಕಡಿವಾಣ ಹಾಕಿರಬಹುದು ಅಂತಿದ್ದಾರೆ ತಜ್ಞರು.

36 ಲಕ್ಷ ಮಕ್ಕಳ ಜನನ..!

36 ಲಕ್ಷ ಮಕ್ಕಳ ಜನನ..!

ಅಮೆರಿಕದಲ್ಲಿ 2020ರಲ್ಲಿ ಕೇವಲ 36 ಲಕ್ಷ ಮಕ್ಕಳು ಜನಿಸಿದ್ದಾರೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 4ರಷ್ಟು. 2019ರಲ್ಲಿ ಈ ಪ್ರಮಾಣ 37 ಲಕ್ಷಕ್ಕೂ ಹೆಚ್ಚಾಗಿತ್ತು. ಹಾಗೆ 2018ರಲ್ಲಿ 38 ಲಕ್ಷ ಮಕ್ಕಳು ಜನಿಸಿದ್ದರು. ಆದರೆ 2020ರ ಕೊರೊನಾ ಕರಾಳತೆ ನಡುವೆ ಕೇವಲ 36 ಲಕ್ಷ ಮಕ್ಕಳು ಜನಿಸಿದ್ದಾರೆ. ಇದಿಷ್ಟೇ ಅಲ್ಲ, ಕೊರೊನಾ ಹಿನ್ನೆಲೆ ಕಳೆದೊಂದು ವರ್ಷದಲ್ಲಿ ಅಮೆರಿಕ ಬರೋಬ್ಬರಿ 6 ಲಕ್ಷ ಜನರನ್ನು ಕಳೆದುಕೊಂಡಿದೆ. ಒಂದು ಕಡೆ ಕೊರೊನಾ ಸಾವುಗಳು, ಮತ್ತೊಂದು ಕಡೆ ಜನಸಂಖ್ಯೆ ಏರಿಕೆಯ ಹಿನ್ನಡೆ ಆತಂಕ ಸೃಷ್ಟಿಸಿದೆ.

ಸಾವು, ಸೋಲಿನ ನಡುವೆ ಯುದ್ಧ..!

ಸಾವು, ಸೋಲಿನ ನಡುವೆ ಯುದ್ಧ..!

ಅಮೆರಿಕ ತನ್ನ ನಂಬರ್ 1 ಪಟ್ಟ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಸುಮಾರು 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕ ಭಾರತಕ್ಕಿಂತ ಸುಮಾರು 3 ಪಟ್ಟು ಹೆಚ್ಚು ಭೂಮಿ ಹೊಂದಿದೆ. ಆದ್ರೆ ಅಲ್ಲಿ ಅಭಿವೃದ್ಧಿಗೆ ಅಗತ್ಯ ಇರುವಷ್ಟು ಜನಸಂಖ್ಯೆ ಹೆಚ್ಚುತ್ತಿಲ್ಲ. ಇದು ಅಮೆರಿಕದ ಭವಿಷ್ಯವನ್ನೇ ಅಲುಗಾಡಿಸುತ್ತಿದೆ. ಉದ್ದಿಮೆಗಳು ವಲಸಿಗರ ಮೇಲೆ ಅವಲಂಬಿತವಾಗಿವೆ. ಚೀನಾ ಎದುರಿಸುತ್ತಿರುವ ಸಮಸ್ಯೆಯನ್ನೇ ಅಮೆರಿಕನ್ನರು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ತೊಲಗುವವರೆಗೆ ಜನರಿಗೆ ನೆಮ್ಮದಿ ಸಿಗುವುದು ಅನುಮಾನವಾಗಿದೆ.

ಸಂತಾನಕ್ಕೂ ಕುತ್ತು ತಂದ 'ಕೊರೊನಾ', ಜನಸಂಖ್ಯೆ ಏರಿಕೆಯಲ್ಲಿ ಭಾರಿ ಇಳಿಕೆ..!ಸಂತಾನಕ್ಕೂ ಕುತ್ತು ತಂದ 'ಕೊರೊನಾ', ಜನಸಂಖ್ಯೆ ಏರಿಕೆಯಲ್ಲಿ ಭಾರಿ ಇಳಿಕೆ..!

ಕಾರ್ಮಿಕರ ಕೊರತೆ ಅಪಾಯ..?

ಕಾರ್ಮಿಕರ ಕೊರತೆ ಅಪಾಯ..?

ಯಾವುದೇ ದೇಶದ ಆರ್ಥಿಕತೆ ನಿರ್ಧಾರ ಆಗುವುದು ನೈಸರ್ಗಿಕ ಸಂಪತ್ತು ಹಾಗೂ ಶ್ರಮಿಕ ವರ್ಗದ ಮೇಲೆ. ಜನಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇರಬೇಕೆ ವಿನಃ, ಹೆಚ್ಚು-ಕಡಿಮೆಯಾದರೆ ಆರ್ಥಿಕತೆಗೆ ನೇರ ಪೆಟ್ಟು ಕೊಡಲಿದೆ. ಹಿಂದೆ ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಏರಿಕೆ ಕಾಣುತ್ತಿತ್ತು. ಆದರೆ ಇದೀಗ ದಿಢೀರ್ ಕುಸಿತ ಕಾಣುತ್ತಿರುವುದು ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಹಾಗೂ ಬಳಕೆದಾರರ ಕೊರತೆ ಎದುರಾಗುವ ಮುನ್ಸೂಚನೆ ನೀಡುತ್ತಿದೆ. ಜಗತ್ತಲ್ಲೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ ಅಮೆರಿಕ ಜನನ ಪ್ರಮಾಣದ ಹಿನ್ನಡೆಯಿಂದ ಒದ್ದಾಡುವಂತಾಗಿದೆ.

ಚೀನಾದಲ್ಲೂ ಆತಂಕದ ಪರಿಸ್ಥಿತಿ..!

ಚೀನಾದಲ್ಲೂ ಆತಂಕದ ಪರಿಸ್ಥಿತಿ..!

ಅಂದಹಾಗೆ 2019ರಲ್ಲಿ ಚೀನಾ ಜನಸಂಖ್ಯೆ 140 ಕೋಟಿ ಇತ್ತು, 2020ರಲ್ಲಿ ಜನಸಂಖ್ಯೆಯ ಪ್ರಮಾಣ 141.17 ಕೋಟಿಗೆ ಹೆಚ್ಚಳವಾಗಿದೆ. ಆದರೂ ಈ ಅಂಕಿ-ಅಂಶವು ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೀನಾದಲ್ಲಿ ಒಂದೇ ಮಗು ಪಡೆಯುವ ಬಗ್ಗೆ ಕಠಿಣ ನಿಯಮ ಇತ್ತು. ಆದರೆ 2016ರಲ್ಲಿ ಮಕ್ಕಳನ್ನು ಪಡೆಯುವ ಕಠಿಣ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ಆದರೂ ಚೀನಾದಲ್ಲಿ ಜನಸಂಖ್ಯೆ ಏರಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಅಮೆರಿಕ ಹಾಗೂ ಚೀನಾ ತಮ್ಮ ತಮ್ಮ ರಾಷ್ಟ್ರಗಳಲ್ಲಿ ಜನಸಂಖ್ಯೆ ಏರಿಕೆಗೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

English summary
United States birth rates have fallen by 4 percent after the Corona pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X