ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ

|
Google Oneindia Kannada News

ವಾಷಿಂಗ್ಟನ್, ಜುಲೈ 10: ಅಮೆರಿಕದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಪೈಲಟ್‌ಗಳ ಪ್ರಮಾಣಪತ್ರದ ಬಗ್ಗೆ ಅಮೆರಿಕ ವಿಮಾನಯಾನ ಪ್ರಾಧಿಕಾರ ಸಾಕಷ್ಟು ಸಂದೇಹ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಯುರೋಪಿಯನ್ ಯೂನಿಯನ್ ಆವಿಯೇಷನ್ ಸೇಫ್ಟಿ ಏಜೆನ್ಸಿಯು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮುಂದಿನ ಆರು ತಿಂಗಳಿಗೆ ನಿಷೇಧಿಸಿದೆ. ಪಾಕಿಸ್ತಾನ ಪೈಲಟ್‌ಗಳಿಗೆ ನೀಡಿರುವ ತರಬೇತಿ ಪ್ರಮಾಣ ಪತ್ರದ ಕುರಿತು ಸಾಕಷ್ಟು ಅನುಮಾನವನ್ನು ಅಮೆರಿಕ ವ್ಯಕ್ತಪಡಿಸಿದೆ.

US Bans Pakistan International Airlines Flights

97 ಮಂದಿ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ವಿಮಾನ ಪತನದ ಕಾರಣ ಬಹಿರಂಗ 97 ಮಂದಿ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ವಿಮಾನ ಪತನದ ಕಾರಣ ಬಹಿರಂಗ

ಅಮೆರಿಕ ವಿಮಾನಗಳ ಹಾರಾಟ ನಿಷೇಧಿಸಿರುವ ಕುರಿತು ಪಾಕಿಸ್ತಾನ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ವಿಮಾನ ಅಪಘಾತ ಸಂಭವಿಸಿ 97 ಮಂದಿ ಮೃತಪಟ್ಟಿದ್ದರು. ಬಳಿಕ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಪೈಲಟ್‌ ಕೊರೊನಾ ವಿಚಾರವಾಗಿ ಮಾತನಾಡುತ್ತಿದ್ದರು, ಹೀಗಾಗಿ ಅವರ ಯೋಚನೆ ವಿಮಾನದ ಕಡೆ ಇರಲಿಲ್ಲ ಎಂಬುದು ಸ್ಪಷ್ಟವಾದ ಕಾರಣ ಸಧ್ಯಕ್ಕಂತೂ ಪಾಕಿಸ್ತಾನ ವಿಮಾನ ಹಾರಾಟ ಅವಕಶ್ಯಕತೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

English summary
The US Department of Transportation said it has revoked permission for Pakistan International Airlines (PIA) to conduct charter flights to the United States, citing Federal Aviation Administration (FAA) concerns over Pakistani pilot certifications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X