ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: 12-15 ವರ್ಷದವರೆಗೆ ಫೈಜರ್ ಲಸಿಕೆ ಬಳಕೆಗೆ ಅಮೆರಿಕ ಅನುಮತಿ

|
Google Oneindia Kannada News

ವಾಷಿಂಗ್ಟನ್, ಮೇ 11: ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಕೂಡ ಪರಿಣಾಮ ಬೀರುತ್ತಿದೆ. ಹೆಚ್ಚೆಚ್ಚು ಮಕ್ಕಳು ಸೋಂಕಿಗೊಳಗಾಗುತ್ತಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುತ್ತಿದ್ದು, ಮಕ್ಕಳಿಂದ ಹಿಡಿದು 45 ವರ್ಷದೊಳಗಿನವರ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತಿರುವ ಕಾರಣ ಜನರು ಆತಂಕಕ್ಕೊಳಗಾಗಿದ್ದಾರೆ.

ವಿದೇಶಗಳಿಂದ ಕೊರೊನಾ ಲಸಿಕೆ ಆಮದಿಗೆ 'ಮಹಾ' ಸರ್ಕಾರದ ಚಿಂತನೆ ವಿದೇಶಗಳಿಂದ ಕೊರೊನಾ ಲಸಿಕೆ ಆಮದಿಗೆ 'ಮಹಾ' ಸರ್ಕಾರದ ಚಿಂತನೆ

ಇದೀಗ ಬಯೋಎನ್‌ಟೆಕ್‌ ಸಂಸ್ಥೆಯು 12-15 ವರ್ಷದವರಿಗೆ ಫೈಜರ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.12-15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್-ಬಯೊಎನ್‌ಟೆಕ್ ಅಮೆರಿಕ ಸರ್ಕಾರಕ್ಕೆ ಕಳೆದ ವಾರ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಗೆ ಸ್ಪಂದಿಸಿರುವ ಅಮೆರಿಕ ಸರ್ಕಾರ ಮಕ್ಕಳಿಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

US Authorises Pfizer Vaccine For 12-15 Year Olds

ಪ್ರಸ್ತುತ ಅಮೆರಿಕದಲ್ಲಿ ಫಿಜರ್-ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ.

ಅಮೆರಿಕದ ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ) ಅನುಮತಿ ನೀಡಿದ್ದು, ಇದಕ್ಕಾಗಿ ಲಸಿಕೆ ಬಳಕೆಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಅಮೆರಿಕ ಆಂತರಿಕ ಸಚಿವಾಲಯ ಹೇಳಿದೆ.

ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮೊದಲ ರೂಪಾಂತರ ವೈರಸ್‌ನ್ನು ಫೈಜರ್ ಲಸಿಕೆ ಪರಿಣಾಮಕಾರಿಯಾಗಿ ತಟಸ್ಥಗೊಳಿಸಲಿದೆ ಎಂದು ಅಧ್ಯಯನವೊಂದು ಹೇಳಿತ್ತು.

ಅಮೆರಿಕದ ಫೈಜರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಕಂಪನಿ ಜತೆಯಾಗಿ ಅಭಿವೃದ್ಧಿಪಡಿಸಿರುವ ಫೈಜರ್ ಕೊರೊನಾ ಲಸಿಕೆ ರೂಪಾಂತರಿ ಕೊರೊನಾವೈರಸ್ ಮೇಲೆ ನಡೆಸಿದ ಈ ಸಂಶೋಧನಾ ಅಧ್ಯಯನ ನೇಚರ್ ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

English summary
The United States on Monday authorized the Pfizer-BioNTech Covid-19 vaccine for children aged 12 to 15 years old, while the devastating outbreak in India raged on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X