ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್,ಅಫ್ಘಾನಿಸ್ತಾನದಲ್ಲಿ ಸೈನಿಕರ ಸಂಖ್ಯೆ ಕಡಿಮೆ ಮಾಡಲು ಅಮೆರಿಕ ನಿರ್ಧಾರ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 18: ಇರಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕ ನಿರ್ಧರಿಸಿದೆ.

2021ರ ಜನವರಿ 15ರೊಳಗಾಗಿ ಸೈನಿಕರ ಸಂಖ್ಯೆಯನ್ನು 2500ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಘೋಷಣೆ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳನ್ನು ಯಶಸ್ವಿಗೊಳಿಸಲು ಮತ್ತು ಸೇನಾ ಸಿಬ್ಬಂದಿಯನ್ನು ಮನೆಗೆ ವಾಪಸ್ ಕರೆತರುವ ಭರವಸೆಯನ್ನು ನೀಡಿದ್ದರು, ಹೀಗಾಗಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ.

US Announces Troop Withdrawal From Afghanistan And Iraq

ಅಮೆರಿಕ ಕಾರ್ಯದರ್ಶಿಇರಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕ ನಿರ್ಧರಿಸಿದೆ.2021ರ ಜನವರಿ 15ರೊಳಗಾಗಿ ಸೈನಿಕರ ಸಂಖ್ಯೆಯನ್ನು 2500ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಘೋಷಣೆ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳನ್ನು ಯಶಸ್ವಿಗೊಳಿಸಲು ಮತ್ತು ಸೇನಾ ಸಿಬ್ಬಂದಿಯನ್ನು ಮನೆಗೆ ವಾಪಸ್ ಕರೆತರುವ ಭರವಸೆಯನ್ನು ನೀಡಿದ್ದರು, ಹೀಗಾಗಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ.

ಅಮೆರಿಕ ಕಾರ್ಯದರ್ಶಿ ಕ್ರಿಸ್ಟೋಫರ್ ಸಿ ಮಿಲ್ಲರ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕ್ರಿಸ್ಟೋಫರ್ ಸಿ ಮಿಲ್ಲರ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ ಈ ನಡೆಗೆ ವಿರೋಧ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಸೈನಿಕರನ್ನು ಕಡಿಮೆಗೊಳಿಸಲಾಗುವುದು. ನಮ್ಮ ಸೈನಿಕರು ಸುರಕ್ಷಿತವಾಗಿ ಮನೆಗೆ ಹಿಂದಿರುಗಬೇಕು ಎಂಬುದು ಟ್ರಂಪ್ ಆಶಯವಾಗಿದೆ. ಎಂದು ರಾಬರ್ಟ್ ಒಬ್ರೇನ್ ಹೇಳಿದ್ದಾರೆ.

ಆದರೆ ಈ ನಿರ್ಧಾರಕ್ಕೆ ಡೆಮಾಕ್ರೆಟಿಕ್ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರು ಕೂಡ ಈ ನಿರ್ಧಾರವನ್ನು ವಿರೋಧಿಸಿದ್ದಾರೆ.ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ತಂದೊಡ್ಡಬಹುದು ಎಂದು ಹೇಳಿದೆ.

English summary
The US has announced to reduce the number of American troops in Afghanistan and Iraq to 2,500 each by January 15 next year, which drew sharp reaction from influential lawmakers across the aisle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X