ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರ್ಯಾಗನ್ ರಾಷ್ಟ್ರ ಚೀನಾ ವಿರುದ್ಧ ಕೇಳಿಬಂದಿದೆ ಮತ್ತೊಂದು ಗಂಭೀರ ಆರೋಪ.!

|
Google Oneindia Kannada News

ವಾಷಿಂಗ್ಟನ್, ಮೇ 14: ''ಡೆಡ್ಲಿ ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಲು ಚೀನಾ ಕಾರಣ. ಚೀನಾದ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಲೀಕ್ ಆಗಿದೆ. ಕೊರೊನಾ ವೈರಸ್ ಮಾರಣಾಂತಿಕ ಅಂತ ಗೊತ್ತಿದ್ದರೂ, ಚೀನಾ ಆ ವಿಷಯವನ್ನು ಮುಚ್ಚಿಟ್ಟಿತು. ಕೋವಿಡ್-19 ನಿರ್ವಹಣೆಯಲ್ಲಿ ಚೀನಾ ಪಾರದರ್ಶಕವಾಗಿರಲಿಲ್ಲ'' ಎಂಬೆಲ್ಲ ಮಾತುಗಳು ಚೀನಾ ವಿರುದ್ಧ ಕೇಳಿಬಂದಿವೆ.

ಕೊರೊನಾ ವೈರಸ್ ವಿಚಾರದಲ್ಲಿ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ವಿರುದ್ಧ ಗುಟುರು ಹಾಕಿವೆ. ಹೀಗಿರುವಾಗಲೇ, ಡ್ರ್ಯಾಗನ್ ರಾಷ್ಟ್ರ ಚೀನಾ ವಿರುದ್ಧ ಅಮೇರಿಕಾ ಮತ್ತೊಂದು ಗಂಭೀರ ಆರೋಪ ಮಾಡಿದೆ.

ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್

ಕೊರೊನಾ ವೈರಸ್ ಲಸಿಕೆಯ ಮಾಹಿತಿಯನ್ನು ಹ್ಯಾಕ್ ಮಾಡಲು ಚೀನಾ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಆರೋಪಿಸಿದೆ.

ಚೀನಿ ಹ್ಯಾಕರ್ಸ್ ವಿರುದ್ಧ ನೇರ ಆರೋಪ

ಚೀನಿ ಹ್ಯಾಕರ್ಸ್ ವಿರುದ್ಧ ನೇರ ಆರೋಪ

ಕೋವಿಡ್-19 ಗೆ ಲಸಿಕೆ ಅಭಿವೃದ್ಧಿ ಮಾಡುತ್ತಿರುವ ಡೇಟಾವನ್ನು ಕದಿಯಲು ಚೀನಾದ ನುರಿತ ಹ್ಯಾಕರ್ ಗಳು ಗೂಢಾಚಾರರು ಮುಂದಾಗಿದ್ದಾರೆ ಎಂಬ ವಾರ್ನಿಂಗ್ ನೀಡಲು ಇತ್ತೀಚೆಗಷ್ಟೇ ಎಫ್.ಬಿ.ಐ ಮತ್ತು ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಸಿದ್ಧತೆ ನಡೆಸಿತ್ತು. ಇದೀಗ ಕೋವಿಡ್-19 ಗಾಗಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳ ಮಾಹಿತಿ ಪಡೆಯಲು ''ಸ್ಟೇಟ್ ಸ್ಪಾನ್ಸರ್ಡ್' ಚೀನಿ ಹ್ಯಾಕರ್ ಗಳೇ ಯುಎಸ್ ಸಂಶೋಧಕರನ್ನು ಟಾರ್ಗೆಟ್ ಮಾಡಿದ್ದಾರೆ'' ಎಂದು ಎಫ್.ಬಿ.ಐ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿ ನೇರವಾಗಿ ಆರೋಪಿಸಿದೆ.

ತಾಂತ್ರಿಕ ವಿವರಗಳು ಸದ್ಯದಲ್ಲೇ ಬಿಡುಗಡೆ

ತಾಂತ್ರಿಕ ವಿವರಗಳು ಸದ್ಯದಲ್ಲೇ ಬಿಡುಗಡೆ

''ಕೊರೊನಾ ವೈರಸ್ ಗೆ ನೀಡುತ್ತಿರುವ ಚಿಕಿತ್ಸೆ, ಟೆಸ್ಟಿಂಗ್ ಗಳ ಡೇಟಾ ಜೊತೆಗೆ ಲಸಿಕೆ ಮತ್ತು ಪಬ್ಲಿಕ್ ಹೆಲ್ತ್ ಮಾಹಿತಿಯನ್ನೂ ಕದಿಯಲು ಚೀನಿ ಹ್ಯಾಕರ್ ಗಳು ಯತ್ನಿಸುತ್ತಿದ್ದಾರೆ'' ಎಂದು ಎಫ್.ಬಿ.ಐ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಕ್ಯೂರಿಟಿ ಏಜೆನ್ಸಿ ಹೇಳಿದೆ. ಹಾಗೇ, ಚೀನಾದ ಹ್ಯಾಕಿಂಗ್ ಪ್ರಯತ್ನಗಳ ಬಗೆಗಿನ ತಾಂತ್ರಿಕ ವಿವರಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿಯೂ ತಿಳಿಸಿದೆ.

ಸೆಕ್ಯೂರಿಟಿ ಏಜೆನ್ಸಿಯ ಶಿಫಾರಸ್ಸು

ಸೆಕ್ಯೂರಿಟಿ ಏಜೆನ್ಸಿಯ ಶಿಫಾರಸ್ಸು

ಕೊರೊನಾ ವೈರಸ್ ಲಸಿಕೆಯ ಮಾಹಿತಿಯನ್ನು ಸುರಕ್ಷಿತವಾಗಿಡಲು, ಎಲ್ಲಾ ಸಂಶೋಧಕರ ತಾಂತ್ರಿಕ ಉಪಕರಣಗಳ ಅಕೌಂಟ್ ಗಳಿಗೆ ಮಲ್ಟಿಫ್ಯಾಕ್ಟರ್ ದೃಢೀಕರಣದ ಅಗತ್ಯವಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಶಿಫಾರಸ್ಸು ಮಾಡಿದೆ.

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

ಸೈಬರ್ ಅಟ್ಯಾಕ್ಸ್

ಸೈಬರ್ ಅಟ್ಯಾಕ್ಸ್

ಕೋವಿಡ್-19 ಔಟ್ ಬ್ರೇಕ್ ಅನ್ನು ಚೀನಾ ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬ ಮಾಹಿತಿಯನ್ನು ಪಡೆಯಲು ವಿಯೆಟ್ನಾಂ ನ ಸ್ಟೇಟ್ ಸ್ಪಾನ್ಸರ್ಡ್ ಹ್ಯಾಕರ್ ಗಳು ಚೀನಾ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಫೈರ್ಐ ಹೇಳಿದೆ. ಇನ್ನೂ, ಕೊರೊನಾ ವೈರಸ್ ಗೆ ಚಿಕಿತ್ಸೆ ರೂಪದಲ್ಲಿ ನೀಡುತ್ತಿರುವ ರೆಮ್ದೇಸಿವಿರ್ ಕುರಿತ ಮಾಹಿತಿಗಾಗಿ ಇರಾನ್ ದೇಶದ ಹ್ಯಾಕರ್ ಗಳು Gilead ಸೈನ್ಸೆಸ್ ಕಂಪನಿಯನ್ನು ಗುರಿಯಾಗಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಸಲಿಗೆ, ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಸೈಬರ್ ಅಟ್ಯಾಕ್ ಐದು ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

English summary
US accuses China of trying to hack Coronavirus Vaccine research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X