ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಲಕ್ಷ ಮಕ್ಕಳಿಗೆ ಕೊರೊನಾ: ಬೆಚ್ಚಿಬಿದ್ದ ಅಮೆರಿಕನ್ ಪೋಷಕರು

|
Google Oneindia Kannada News

ಕೊರೊನಾ ಕೂಪದಲ್ಲಿ ಬಿದ್ದಿರುವ ಅಮೆರಿಕ ಅದರಿಂದ ಹೊರಬರಲು ಪರದಾಡುತ್ತಿದೆ. ಈ ನಡುವೆ ಅಧ್ಯಕ್ಷ ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಏನೇನೋ ಎಡವಟ್ಟುಗಳು ಸಂಭವಿಸುತ್ತಿವೆ. ಇದೀಗ ಮಕ್ಕಳ ವಿಚಾರದಲ್ಲೂ ಇದೇ ಎಡವಟ್ಟು ಆಗುತ್ತಿದೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್‌ಗಳನ್ನು ಕಂಡಿರುವ ಅಮೆರಿಕದಲ್ಲಿ 3 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಈ ಮಹಾಮಾರಿ ವಕ್ಕರಿಸಿದೆ.

Recommended Video

DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

ಈ ಸಂದರ್ಭದಲ್ಲಿ ಶಾಲೆಗಳನ್ನ ಪುನಃ ತೆರೆಯಲು ಟ್ರಂಪ್ ಸರ್ಕಸ್ ಮಾಡುತ್ತಿದ್ದಾರೆ. ಇದು ಭಾರಿ ವಿರೋಧಕ್ಕೆ ಕಾರಣವಾಗುತ್ತಿರುವ ಜೊತೆಗೆ ಆತಂಕವನ್ನೂ ಹೆಚ್ಚು ಮಾಡುತ್ತಿದೆ. ಸ್ವತಃ ಅಮೆರಿಕದ ಶಾಲಾ ಆಡಳಿತ ಮಂಡಳಿಗಳೇ ಟ್ರಂಪ್ ನಿರ್ಧಾರವನ್ನು ಒಪ್ಪುತ್ತಿಲ್ಲ. ಕೊರೊನಾ ಆತಂಕದ ಮಧ್ಯೆ ಮಕ್ಕಳು ಶಾಲೆಗೆ ಬಂದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಎಂಬ ಅಭಿಪ್ರಾಯ ಕ್ತವಾಗುತ್ತಿದೆ. ಆದರೆ ಇದ್ಯಾವುದನ್ನೂ ಟ್ರಂಪ್ ಬಿಲ್‌ಕುಲ್ ಒಪ್ಪುತ್ತಿಲ್ಲ.

ಅಮೆರಿಕಾದಲ್ಲಿ ಕೋವಿಡ್-19 ಪರೀಕ್ಷೆಯು ಸುಧಾರಿಸಲಿಲ್ಲ: ಬಿಲ್ಅಮೆರಿಕಾದಲ್ಲಿ ಕೋವಿಡ್-19 ಪರೀಕ್ಷೆಯು ಸುಧಾರಿಸಲಿಲ್ಲ: ಬಿಲ್

ಈ ಹಿಂದೆ ಶಾಲೆ ತೆರೆಯದಿದ್ದರೆ ಅನುದಾನ ಕಟ್ ಮಾಡುವ ಬಗ್ಗೆ ಬೆದರಿಸಿದ್ದ ಟ್ರಂಪ್ ವಿರುದ್ಧ ಆಕ್ರೋಶ ಮೊಳಗಿತ್ತು. ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಹಾಗೇ ವಿದೇಶಿ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಹೊರಗಟ್ಟಲು ಟ್ರಂಪ್ ನಿರ್ಧರಿಸಿದ್ದರು. ಆದರೆ ಕಿಚ್ಚು ಹೊತ್ತಿದಾಗ ಟ್ರಂಪ್ ತಣ್ಣಗಾಗಿದ್ದರು. ಹೀಗೆ ಟ್ರಂಪ್ ಅಮೆರಿಕದಲ್ಲಿ ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಟ್ಟುಗಳ ಮೇಲೆ ಮಾಡಿಕೊಳ್ಳುತ್ತಿದ್ದಾರೆ.

15 ದಿನದಲ್ಲಿ 1 ಲಕ್ಷ ಮಕ್ಕಳಿಗೆ ಕೊರೊನಾ

15 ದಿನದಲ್ಲಿ 1 ಲಕ್ಷ ಮಕ್ಕಳಿಗೆ ಕೊರೊನಾ

ನಂಬಲು ಕಷ್ಟವಾದರೂ ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಯಾವ ದೇಶವನ್ನು ನಂಬರ್ 1 ಅಂತಾ ಕರೆಯಲಾಗುತ್ತದೋ, ಅದೇ ದೇಶದಲ್ಲಿ ಮಕ್ಕಳ ಜೀವಕ್ಕೆ ಈಗ ಗ್ಯಾರಂಟಿಯೇ ಇಲ್ಲ. ಜುಲೈ ತಿಂಗಳ ಕೊನೆಯ 2 ವಾರದಲ್ಲಿ ಅಮೆರಿಕದ 1 ಲಕ್ಷ ಮಕ್ಕಳಿಗೆ ಕೊರೊನಾ ಅಂಟಿದೆ. ಈ ಪೈಕಿ 25ಕ್ಕೂ ಹೆಚ್ಚು ಮಕ್ಕಳು 15 ದಿನದ ಅವಧಿಯಲ್ಲಿ ಅಸುನೀಗಿದ್ದಾರೆ.

ಇನ್ಫೋಗ್ರಾಫಿಕ್ಸ್: ಗುಣಮುಖರಾದವರು ಯಾವ ದೇಶದಲ್ಲಿ ಅಧಿಕ?ಇನ್ಫೋಗ್ರಾಫಿಕ್ಸ್: ಗುಣಮುಖರಾದವರು ಯಾವ ದೇಶದಲ್ಲಿ ಅಧಿಕ?

53 ಲಕ್ಷ ಕೇಸ್ 1.7 ಲಕ್ಷ ಸಾವು..!

53 ಲಕ್ಷ ಕೇಸ್ 1.7 ಲಕ್ಷ ಸಾವು..!

ಅಮೆರಿಕದಲ್ಲಿ ಈವರೆಗೂ ಜಗತ್ತಿನಲ್ಲೇ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಸದ್ಯದ ಅಂಕಿ-ಅಂಶಗಳ ಪ್ರಕಾರ ಈವರೆಗೂ 53 ಲಕ್ಷ ಸೋಂಕಿತರು ಅಮೆರಿಕದಲ್ಲಿ ಪತ್ತೆಯಾಗಿದ್ದು, ಸುಮಾರು 1 ಲಕ್ಷ 70 ಸಾವಿರ ಅಮೆರಿಕನ್ನರು ಸೋಂಕಿಗೆ ಬಲಿಯಾಗಿದ್ದಾರೆ. ವಿಶ್ವದಾದ್ಯಂತ ಸುಮಾರು 2 ಕೋಟಿ ಸೋಂಕಿತರು ಪತ್ತೆಯಾಗಿದ್ದರೆ, ಅಮೆರಿಕದಲ್ಲೇ ಈ ಸಂಖ್ಯೆ 50 ಲಕ್ಷದಷ್ಟಿದೆ. ಇದು ಪರಿಸ್ಥಿತಿ ಕೈ ಮೀರಿರುದನ್ನು ಸೂಚಿಸುತ್ತಿದೆ.

ಮಕ್ಕಳ ಮೂಲಕ ಬಹುಬೇಗ ಹರಡುತ್ತೆ

ಮಕ್ಕಳ ಮೂಲಕ ಬಹುಬೇಗ ಹರಡುತ್ತೆ

ಈವರೆಗೂ ನಡೆದಿರುವ ಸಂಶೋಧನೆಗಳ ಪ್ರಕಾರ ಹಿರಿಯರಿಗಿಂತಲೂ ಹಲವುಪಟ್ಟು ವೇಗವಾಗಿ ಮಕ್ಕಳಿಂದಲೇ ಸೋಂಕು ಅಂಟುತ್ತದೆ. ಮಕ್ಕಳು ತಮ್ಮ ಮೂಲಕ ವಯಸ್ಸಾದವರು ಹಾಗೂ ಅನಾರೋಗ್ಯ ಪೀಡಿತರಿಗೆ ಈ ಸೋಂಕನ್ನು ಹರಡುತ್ತಾರೆ. ಪರಿಸ್ಥಿತಿ ಹೀಗಿರುವಾಗಲೇ ಟ್ರಂಪ್ ಮತ್ತೆ ಶಾಲೆ ತೆರೆಯಿರಿ ಅಂತಾ ಮಕ್ಕಳಂತೆ ಹಠ ಮಾಡುತ್ತಿದ್ದಾರೆ. ಸ್ವತಃ ತಮ್ಮ ಸಲಹೆಗಾರರ ಮಾತನ್ನೂ ಟ್ರಂಪ್ ಕೇಳಲು ಸಿದ್ಧವಿಲ್ಲ. ಹೀಗಾಗಿ ಟ್ರಂಪ್ ವಿರುದ್ಧ ಅಮೆರಿಕದಲ್ಲಿ ಮತ್ತೆ ಆಕ್ರೋಶ ಮೊಳಗುತ್ತಿದೆ.

ಮುನ್ನೆಚ್ಚರಿಕೆ ಇದ್ದರೂ ಸಂಕಷ್ಟ ತಪ್ಪಲ್ಲ

ಮುನ್ನೆಚ್ಚರಿಕೆ ಇದ್ದರೂ ಸಂಕಷ್ಟ ತಪ್ಪಲ್ಲ

ಟ್ರಂಪ್ ಹೇಳುವಂತೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಮಕ್ಕಳಿಂದ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಪುಟ್ಟ ಮಕ್ಕಳಿಗೆ ಇಷ್ಟು ಅರಿವು ಮೂಡಿಸುವುದು ಕಷ್ಟ. ಹೀಗಾಗಿ ಮಕ್ಕಳು ಬಹುಬೇಗ ಸೋಂಕಿಗೆ ತುತ್ತಾಗಿ, ಇನ್ನೂ ಹಲವರಿಗೆ ಸೋಂಕನ್ನು ಟ್ರಾನ್ಸ್‌ಫರ್ ಮಾಡುತ್ತಾರೆ. ಒಟ್ಟಾರೆ ಹೇಳುವುದಾದರೆ ಟ್ರಂಪ್ ಹಠದಿಂದ ಅಮೆರಿಕದಲ್ಲಿ ಶಾಲಾ-ಕಾಲೇಜುಗಳು ತೆರೆದರೆ, ಊಹಿಸಲು ಸಾಧ್ಯವಾಗದ ಭಯಾನಕ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಟ್ರಂಪ್ ತಮ್ಮ ನಿರ್ಧಾರ ಪುನರ್‌ ಪರಿಶೀಲನೆ ಮಾಡಿದರೆ ಒಳಿತು.

English summary
US President Donald Trump is planning to reopen the schools in America. But In the last 2 weeks of July, there are more than 97 thousand children’s test positive for corona virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X