ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಅಲಾಸ್ಕದಲ್ಲಿ ಭಾರಿ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಅ.20: ಅಲಾಸ್ಕದ ನೈಋತ್ಯ ಕರಾವಳಿಯಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆ ದಾಖಲಾಗಿದ್ದು, ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಅಲಾಸ್ಕ ಕರಾವಳಿಯಲ್ಲಿ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ, ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಅಮೆರಿಕ ಸರ್ಕಾರ ಪ್ರಕಟಣೆ ನೀಡಿದೆ.

ಭೂಕಂಪದ ಕೇಂದ್ರ ಬಿಂದು ಸುಮಾರು 100 ಕಿಲೋಮೀಟರ್ ದೂರದಲ್ಲಿದ್ದು, 25 ಅಡಿ ಆಳದಲ್ಲಿ ಭೂಕಂಪ ಸಂಭವಿಸಿದೆ. ಮುಖ್ಯ ಕಂಪನದ ಬಳಿಕ ರಿಕ್ಟರ್ ಮಾಪಕದಲ್ಲಿ 5.8, 5.7, 5.2 ಹಾಗೂ 5.5 ತೀವ್ರತೆಯ ಭೂಕಂಪ ನಂತರದ ಕಂಪನಗಳು ಕಂಡು ಬಂದಿವೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

US: 7.5 Magnitude Earthquake Off Alaska Coast with Tsunami Warning

ಆಂಕರೇಜ್(Anchorage) ಪಟ್ಟಣದಿಂದ ನೈಋತ್ಯಕ್ಕೆ 600 ಮೈಲಿ ದೂರದಲ್ಲಿ ಭೂಕಂಪ ಸಂಭವಿಸಿದೆ. ಸ್ಯಾಂಡ್ ಹಿಲ್ ನಿಂದ 56 ಮೈಲಿ ದೂರದಲ್ಲಿ ಕಂಪನ ತೀವ್ರತೆ ಕಂಡು ಬಂದಿದ್ದು, ಸಮೀಪದ ನಿವಾಸಿಗಳು ಶಾಲೆ, ಕಾಲೇಜು, ಕಚೇರಿ ತೊರೆದು ಎತ್ತರದ ಪ್ರದೇಶಗಳಿಗೆ ತೆರಳಿದ್ದಾರೆ.

Recommended Video

ಹುಷಾರು!! ಇನ್ನು 3 ದಿನ ಮಳೆರಾಯನ ತಡಿಯೋಕ್ ಆಗಲ್ಲ | Oneindia Kannada

ಸುನಾಮಿ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಲಸ್ಕ ಪರ್ಯಾಯ ದ್ವೀಪ ಸೇರಿದಂತೆ ದಕ್ಷಿಣ ಕರಾವಳಿಯ ನಿವಾಸಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಸ್ಥಳೀಯ ಆಡಳಿತಗಾರರು ಹೇಳಿದ್ದಾರೆ. ಕಡಿಮೆ ತೀವ್ರತೆಯ ಸುನಾಮಿಯಾಗಿದ್ದರೂ ಈಜುಗಾರರು, ಸಣ್ಣ ಬೋಟುಗಳಲ್ಲಿ ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹದ ಭೀತಿ ಇಲ್ಲ ಎಂದು ನ್ಯಾಷನಲ್ ವೆದರ್ ಸರ್ವೀಸ್ ಪೆಸಿಫಿಕ್ ಸುನಾಮಿ ವಾರ್ನರ್ ಸೆಂಟರ್ ಹೇಳಿದೆ.

English summary
An earthquake of magnitude 7.5 on the Richter scale hit the southwest coast of Alaska on Monday afternoon, following which the US government has issued a warning about possible tsunamis, or giant tidal waves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X