ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಭೀತಿ; ಅಮೆರಿಕ ಪ್ರಯಾಣಕ್ಕೆ ಹೊಸ ನಿಯಮ

|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್ 05; ಕೋವಿಡ್‌ನ ಹೊಸ ರೂಪಾಂತರಿ ಓಮಿಕ್ರಾನ್ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದೆ. ದೇಶಗಳು ವಿದೇಶಿ ಪ್ರವಾಸಿಗರ ಭೇಟಿಗೆ ಹಲವು ನಿರ್ಬಂಧಗಳನ್ನು ಹೇರುತ್ತಿವೆ. ಅಮೆರಿಕ ಸಹ ದೇಶಕ್ಕೆ ಆಗಮಿಸುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ.

ಭಾನುವಾರ ಅಮೆರಿಕ ಈ ಕುರಿತು ಆದೇಶ ಹೊರಡಿಸಿದೆ. ದೇಶದಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿದೆ. ಭಾರತದಿಂದ ಹೋಗುವವರು ಸಹ ಕಡ್ಡಾಯವಾಗಿ ನೆಗೆಟಿವ್ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕಿದೆ.

ಓಮಿಕ್ರಾನ್ ರೂಪಾಂತರಕ್ಕೆ ಹೆದರಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದ ವೈದ್ಯ! ಓಮಿಕ್ರಾನ್ ರೂಪಾಂತರಕ್ಕೆ ಹೆದರಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದ ವೈದ್ಯ!

ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಎಚ್‌ಎಚ್‌ಎಸ್) ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಡಿಸಿ ಕೋವಿಡ್ ಸೋಂಕಿನಿಂದ ಗುಣಮುಖಗೊಂಡ ವರದಿಗಳು ಇದ್ದರೆ ಅದನ್ನು ಸಹ ತೋರಿಸಬಹುದು. ಡಿಸೆಂಬರ್ 6ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದೆ.

ಓಮಿಕ್ರಾನ್ ರೂಪಾಂತರಕ್ಕೆ ಹೆದರಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದ ವೈದ್ಯ! ಓಮಿಕ್ರಾನ್ ರೂಪಾಂತರಕ್ಕೆ ಹೆದರಿ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದ ವೈದ್ಯ!

United States Mandates Covid Negative Report For All Incoming Passengers

ಈ ಹೊಸ ನಿಯಮಗಳ ಪ್ರಕಾರ ಅಮೆರಿಕ ವಿಮಾನ ಹತ್ತುವ ಮೊದಲು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಮಾಡಬೇಕಿದೆ. ಹೊಸ ನಿಯಮಗಳ ಕುರಿತು ಭಾರತ-ಅಮೆರಿಕ ಸಮುದಾಯದ ಮುಖ್ಯಸ್ಥರಿಗೆ ಸಹ ಮಾಹಿತಿ ನೀಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಹೆಚ್ಚಳ: ಮಕ್ಕಳ ಆರೋಗ್ಯದ್ದೇ ಚಿಂತೆದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಹೆಚ್ಚಳ: ಮಕ್ಕಳ ಆರೋಗ್ಯದ್ದೇ ಚಿಂತೆ

ಹೊಸ ನಿಯಮಗಳ ಅನ್ವಯ ವಿದೇಶದಿಂದ ಅಮೆರಿಕಕ್ಕೆ ಡಿಸೆಂಬರ್ 6, 2021 12:01 AM EST (5:01 AM GMT or 10:31 AM IST) ಬಳಿಕ ಆಗಮಿಸುವ ವಿಮಾನದ ಪ್ರಯಾಣಿಕರು ಕಡ್ಡಾಯವಾಗಿ ಒಂದು ದಿನ ಮೊದಲಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತೋರಿಸಬೇಕು. 90 ದಿನ ಮೊದಲು ಕೋವಿಡ್ ಸೋಂಕಿನಿಂದ ಗುಣಗೊಂಡ ಪ್ರಮಾಣ ಪತ್ರವನ್ನು ಸಹ ತೋರಿಸಬಹುದಾಗಿದೆ. ತಾವು ತೋರಿಸುತ್ತಿರುವ ಮಾಹಿತಿ ಖಚಿತವಾದದ್ದು ಎಂದು ಸಹ ದೃಢೀಕರಿಸಬೇಕು.

ಶನಿವಾರ ನ್ಯೂಯಾರ್ಕ್ ನಗರದಲ್ಲಿ 3 ಹೊಸ ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ದಾಖಲಾಗಿವೆ. ನಗರದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಯಾಗಿದೆ. ಈ ಹಿನ್ನಲೆಯಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ. ಶನಿವಾರ ವಾಷ್ಟಿಂಗ್ಟನ್, ನ್ಯು ಜೆರ್ಸಿ, ಜಾರ್ಜಿಯಾ ಸೇರಿದಂತೆ ಹಲವಾರು ನಗರಗಳಲ್ಲಿ ಮೊದಲ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.

38 ದೇಶಗಳು; ಭಾರತ ಸೇರಿದಂತೆ 38 ದೇಶಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾವುದೇ ದೇಶದಲ್ಲಿ ಸಾವು ಸಂಭವಿಸಿರುವ ವರದಿಗಳು ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಶನಿವಾರ ಮೊದಲ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ನಾರ್ವೆಯಲ್ಲಿ ಕ್ರಿಸ್ ಮಸ್ ಪಾರ್ಟಿಗೆ ಹೋಗಿದ್ದ ಜನರಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಓಮಿಕ್ರಾನ್ ಎಷ್ಟು ಬೇಗ ಹಬ್ಬುತ್ತದೆ?, ಇದು ಎಷ್ಟು ಅಪಾಯಕಾರಿ?, ಚಿಕಿತ್ಸೆಗಳನ್ನು ಹೇಗೆ ನೀಡಬೇಕು? ಎಂಬುದನ್ನು ತೀರ್ಮಾನಿಸಲು ಇನ್ನೂ ಒಂದು ವಾರಗಳ ಅಧ್ಯಯನದ ಅವಶ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಬಳಿಕ ಸೋಂಕಿನ ಲಕ್ಷಣಗಳ ಬಗ್ಗೆ ಅಧ್ಯಯನಗಳು ಆರಂಭಗೊಂಡವು. ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಓಮಿಕ್ರಾನ್ ಹಬ್ಬಲಿದೆ ಎಂದು ಅಂದಾಜಿಸಲಾಗಿದೆ.

ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಬಳಿ ಆಸ್ಪತ್ರೆಗೆ ದಾಖಲಾಗುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಏರಿಕಯಾಗಿದೆ. ಆದರೆ ಈ ರೂಪಾಂತರಿ ಮಕ್ಕಳ ಮೇಲೆ ಪ್ರಭಾವ ಬೀರಲಿದೆಯೇ? ಎಂಬುದನ್ನು ಹೇಳಲು ಇನ್ನೂ ಅಧ್ಯಯನ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಾರೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Carry a negative Covid-19 report mandated all passengers who coming to United States. Proof of recovery from the Covid infection is also acceptable and new protocol comes into effect from December 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X