ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿಯುತ್ತಿದೆ ಮನುಷ್ಯನ ಆಯಸ್ಸು! ಅಮೆರಿಕನ್ನರ ಜೀವಕ್ಕೆ ಕುತ್ತು ತಂದ ಕೊರೊನಾ!

|
Google Oneindia Kannada News

ಅದು ಶ್ರೀಮಂತ ದೇಶ, ಇಷ್ಟುದಿನ ಎಲ್ಲಾ ವಿಚಾರದಲ್ಲೂ ಟಾಪ್ ರಾಷ್ಟ್ರವಾಗಿತ್ತು. ಆದ್ರೆ ಕೊರೊನಾ ಅಪ್ಪಳಿಸಿದ ಬಳಿಕ ಎಲ್ಲವೂ ಉಲ್ಟಾ ಆಗೋಗಿದೆ. ಆ ದೇಶದಲ್ಲೀಗ ಜೀವ ಉಳಿಸಿಕೊಂಡವನೇ ಪುಣ್ಯವಂತ ಎಂಬಂತಾಗಿದೆ. ಅಷ್ಟಕ್ಕೂ ನಾವು ಹೇಳ್ತಿರೋದು ಅಮೆರಿಕದ ಬಗ್ಗೆ ಇಷ್ಟುದಿನ ನಂಬರ್ 1 ದೇಶವೆಂದು ಮೆರೆದ ರಾಷ್ಟ್ರಕ್ಕೆ ಕಿಲ್ಲರ್ ಕೊರೊನಾ ಒಂದೊಂದೇ ಆಘಾತ ನೀಡುತ್ತಿದೆ. ಅಮೆರಿಕದಲ್ಲಿ ಮಾನವರ ಜೀವಿತಾವಧಿ ಸುಮಾರು 1 ವರ್ಷ ಕಡಿಮೆಯಾಗಿದೆ.

2019ರಲ್ಲಿ 77.8 ವರ್ಷದಷ್ಟಿದ್ದ ಜೀವಿತಾವಧಿ 2020ರಲ್ಲಿ 77.3 ವರ್ಷಕ್ಕೆ ಬಂದು ತಲುಪಿದೆ. ಈಗಾಗಲೇ ಅಮೆರಿಕದಲ್ಲಿ ಸುಮಾರು 6 ಲಕ್ಷಷ್ಟು ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈಗಲೂ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಭಯದ ವಾತಾವರಣ ಆವರಿಸಿದೆ. ಈ ನಡುವೆ 2020ರಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣ ಕುಸಿದಿತ್ತು. ಈ ಮಾಹಿತಿಗಳು ಅಮೆರಿಕನ್ನರಲ್ಲಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಆಯಸ್ಸು ಕೂಡ ಕಡಿಮೆಯಾಗುತ್ತಿರುವ ವಿಚಾರ ಬಯಲಾಗಿದೆ. ಕೊರೊನಾ ಜನರ ಆಯಸ್ಸು ಕಸಿಯುತ್ತಿದ್ದು, ಭವಿಷ್ಯದಲ್ಲಿ ಇದು ಅಡ್ಡಪರಿಣಾಮ ಬೀರಲಿದೆ.

ಕೋವಿಡ್ 19: ಅಮೆರಿಕನ್ನರ ಜೀವಿತಾವಧಿ ದಾಖಲೆ ಪ್ರಮಾಣದಲ್ಲಿ ಇಳಿಕೆಕೋವಿಡ್ 19: ಅಮೆರಿಕನ್ನರ ಜೀವಿತಾವಧಿ ದಾಖಲೆ ಪ್ರಮಾಣದಲ್ಲಿ ಇಳಿಕೆ

‘ಕೊರೊನಾ’ ತೊಲಗಬೇಕಿದೆ!

‘ಕೊರೊನಾ’ ತೊಲಗಬೇಕಿದೆ!

ಕೊರೊನಾ ತಂದಿಟ್ಟ ಸಾವು, ನೋವು ಒಂದೆರಡಲ್ಲ. ಆದರೆ ಈಗೀಗ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿದ್ದರೂ, ವೈರಸ್ ಮಾಡಿರುವ ಹಾನಿ ಸರಿಯಾಗುತ್ತಿಲ್ಲ. ಇದು ಸಾಲದು ಎಂಬಂತೆ ಜನಸಂಖ್ಯೆ ಕೂಡ ಭಾರಿ ಕುಸಿತ ಕಾಣುತ್ತಿದ್ದು, ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಕಳೆದ ವರ್ಷ 'ಡ್ರ್ಯಾಗನ್' ನಾಡು ಚೀನಾದಲ್ಲಿ ಜನನ ಪ್ರಮಾಣ ಭಾರಿ ಕುಸಿತ ಕಂಡಿತ್ತು. ಈಗ ಅಮೆರಿಕದಲ್ಲೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಜನನ ಪ್ರಮಾಣ ಕಳೆದ ವರ್ಷ ಅಂದರೆ 2020ರಲ್ಲಿ ಶೇ. 4ಕ್ಕೆ ಕುಸಿದಿದೆ. ಬರೋಬ್ಬರಿ 50 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿರುವ ಅಮೆರಿಕದ ಜನನ ಪ್ರಮಾಣ ಹೊಸ ಆತಂಕ ಸೃಷ್ಟಿಸಿದೆ.

ಚೀನಾದಲ್ಲೂ ಇದೇ ಪರಿಸ್ಥಿತಿ

ಚೀನಾದಲ್ಲೂ ಇದೇ ಪರಿಸ್ಥಿತಿ

ಚೀನಾದಲ್ಲಿ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣ ಶೇ. 0.53ಕ್ಕೆ ಕುಸಿದಿದ್ದರೆ, ಅಮೆರಿಕದಲ್ಲಿ ಇದು ಶೇ. 4ಕ್ಕೆ ಕುಸಿದಿದೆ. ಅಷ್ಟಕ್ಕೂ ಎರಡೂ ದೇಶದ ಜನಸಂಖ್ಯೆ ಆಧಾರದಲ್ಲಿ ಹೇಳುವುದಾದರೆ ಅಮೆರಿಕನ್ನರಿಗೆ ಇದು ಬಿಗ್ ಶಾಕ್. 2020ರ ಆರಂಭದಲ್ಲಿ ನೆಮ್ಮದಿಯಾಗಿದ್ದ ಅಮೆರಿಕದಲ್ಲಿ, 2-3 ತಿಂಗಳು ಕಳೆದ ಬಳಿಕ ಡೆಡ್ಲಿ ಕೊರೊನಾ ಬಿರುಗಾಳಿಯೇ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ನೋಡ ನೋಡುತ್ತಲೇ ಸುಮಾರು 6 ಲಕ್ಷ ಜನ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವತ್ತಿಗೂ ಲಕ್ಷಾಂತರ ಕೊರೊನಾ ಸೋಂಕಿತರಿಗೆ ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

36 ಲಕ್ಷ ಮಕ್ಕಳ ಜನನ!

36 ಲಕ್ಷ ಮಕ್ಕಳ ಜನನ!

ಅಮೆರಿಕದಲ್ಲಿ 2020ರಲ್ಲಿ ಕೇವಲ 36 ಲಕ್ಷ ಮಕ್ಕಳು ಜನಿಸಿದ್ದಾರೆ. ಇದು ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 4ರಷ್ಟು. 2019ರಲ್ಲಿ ಈ ಪ್ರಮಾಣ 37 ಲಕ್ಷಕ್ಕೂ ಹೆಚ್ಚಾಗಿತ್ತು. ಹಾಗೆ 2018ರಲ್ಲಿ 38 ಲಕ್ಷ ಮಕ್ಕಳು ಜನಿಸಿದ್ದರು. ಆದರೆ 2020ರ ಕೊರೊನಾ ಕರಾಳತೆ ನಡುವೆ ಕೇವಲ 36 ಲಕ್ಷ ಮಕ್ಕಳು ಜನಿಸಿದ್ದಾರೆ. ಇದಿಷ್ಟೇ ಅಲ್ಲ, ಕೊರೊನಾ ಹಿನ್ನೆಲೆ ಕಳೆದೊಂದು ವರ್ಷದಲ್ಲಿ ಅಮೆರಿಕ ಬರೋಬ್ಬರಿ 6 ಲಕ್ಷ ಜನರನ್ನ ಕಳೆದುಕೊಂಡಿದೆ. ಒಂದು ಕಡೆ ಕೊರೊನಾ ಸಾವುಗಳು, ಮತ್ತೊಂದು ಕಡೆ ಜನಸಂಖ್ಯೆ ಏರಿಕೆಯ ಹಿನ್ನಡೆ ಆತಂಕ ಸೃಷ್ಟಿಸಿದೆ.

ಸಾವು, ಸೋಲಿನ ನಡುವೆ ಯುದ್ಧ!

ಸಾವು, ಸೋಲಿನ ನಡುವೆ ಯುದ್ಧ!

ಅಮೆರಿಕ ತನ್ನ ನಂಬರ್ 1 ಪಟ್ಟ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಸುಮಾರು 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕ ಭಾರತಕ್ಕಿಂತ ಸುಮಾರು 3 ಪಟ್ಟು ಹೆಚ್ಚು ಭೂಮಿ ಹೊಂದಿದೆ. ಆದ್ರೆ ಅಲ್ಲಿ ಅಭಿವೃದ್ಧಿಗೆ ಅಗತ್ಯ ಇರುವಷ್ಟು ಜನಸಂಖ್ಯೆ ಹೆಚ್ಚುತ್ತಿಲ್ಲ. ಇದು ಅಮೆರಿಕದ ಭವಿಷ್ಯವನ್ನೇ ಅಲುಗಾಡಿಸುತ್ತಿದೆ. ಉದ್ದಿಮೆಗಳು ವಲಸಿಗರ ಮೇಲೆ ಅವಲಂಬಿತವಾಗಿವೆ. ಚೀನಾ ಎದುರಿಸುತ್ತಿರುವ ಸಮಸ್ಯೆಯನ್ನೇ ಅಮೆರಿಕನ್ನರು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ತೊಲಗುವವರೆಗೆ ಜನರಿಗೆ ನೆಮ್ಮದಿ ಸಿಗುವುದು ಅನುಮಾನವಾಗಿದೆ.

ಚೀನಾದಲ್ಲೂ ಆತಂಕದ ಪರಿಸ್ಥಿತಿ!

ಚೀನಾದಲ್ಲೂ ಆತಂಕದ ಪರಿಸ್ಥಿತಿ!

ಅಂದಹಾಗೆ 2019ರಲ್ಲಿ ಚೀನಾ ಜನಸಂಖ್ಯೆ 140 ಕೋಟಿ ಇತ್ತು, 2020ರಲ್ಲಿ ಜನಸಂಖ್ಯೆಯ ಪ್ರಮಾಣ 141.17 ಕೋಟಿಗೆ ಹೆಚ್ಚಳವಾಗಿದೆ. ಆದರೂ ಈ ಅಂಕಿ-ಅಂಶವು ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿರುವ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೀನಾದಲ್ಲಿ ಒಂದೇ ಮಗು ಪಡೆಯುವ ಬಗ್ಗೆ ಕಠಿಣ ನಿಯಮ ಇತ್ತು. ಆದರೆ 2016ರಲ್ಲಿ ಮಕ್ಕಳನ್ನು ಪಡೆಯುವ ಕಠಿಣ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ಆದರೂ ಚೀನಾದಲ್ಲಿ ಜನಸಂಖ್ಯೆ ಏರಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಅಮೆರಿಕ ಹಾಗೂ ಚೀನಾ ತಮ್ಮ ತಮ್ಮ ರಾಷ್ಟ್ರಗಳಲ್ಲಿ ಜನಸಂಖ್ಯೆ ಏರಿಕೆಗೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

English summary
After the Pandemic the United States America is facing life expectancy fall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X