ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಕಪ್ಪುಪಟ್ಟಿಗೆ ಸೇರಿಸಿದ ಯುಎಸ್!

|
Google Oneindia Kannada News

ನವದೆಹಲಿ, ನವೆಂಬರ್ 3: ಇಸ್ರೇಲಿ ಮೂಲದ ಬೇಹುಗಾರಿಕೆ ತಂತ್ರಾಂಶವನ್ನು ಉತ್ಪಾದಿಸುವ NSO ಗ್ರೂಪ್ ಅನ್ನು ವಾಣಿಜ್ಯ ಇಲಾಖೆಯ "ಎಂಟಿಟಿ ಲಿಸ್ಟ್" (ಕಪ್ಪುಪಟ್ಟಿ)ಗೆ ಸೇರಿಸಲಾಗಿದೆ ಎಂದು US ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ. ಇದು ಕಂಪನಿಯನ್ನು US ತಂತ್ರಜ್ಞಾನದ ರಫ್ತುಗಳನ್ನು ನಿರ್ಬಂಧಿಸುವ ಫೆಡರಲ್ ಕಪ್ಪು ಪಟ್ಟಿಯಾಗಿದೆ.

"ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ರಾಯಭಾರ ಕಚೇರಿಯ ಕೆಲಸಗಾರರ ಮೇಲೆ ದುರುದ್ದೇಶಪೂರ್ವಕವಾಗಿ ಗುರಿಯಾಗಿಸಲು" ವಿದೇಶಿ ಸರ್ಕಾರಗಳು NSO ಗ್ರೂಪಿನ್ ಫೋನ್ ಹ್ಯಾಕಿಂಗ್ ಸಾಧನಗಳನ್ನು ಬಳಸಲಾಗಿದೆ ಎಂದು ಜೋ ಬಿಡೆನ್ ಸರ್ಕಾರ ನಿರ್ಧರಿಸಿದ ನಂತರದಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

Breaking News: ಪೆಗಾಸಸ್ ಬೇಹುಗಾರಿಕೆ ಕುರಿತು ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್ Breaking News: ಪೆಗಾಸಸ್ ಬೇಹುಗಾರಿಕೆ ಕುರಿತು ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಕಳೆದ ಜುಲೈ 2021ರಲ್ಲಿ ದಿ ವೈರ್ ಸೇರಿದಂತೆ ಜಾಗತಿಕ ಮಾಧ್ಯಮಗಳು, 10 ದೇಶಗಳಲ್ಲಿ ಕಾರ್ಯಕರ್ತರು, ಪತ್ರಕರ್ತರು ಮತ್ತು ಶಿಕ್ಷಣತಜ್ಞರನ್ನು ಗುರಿಯಾಗಿಸಲು NSO ಗ್ರೂಪ್‌ನ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಅನ್ನು ಹೇಗೆ ಬಳಸಲಾಗಿದೆ ಎಂಬುದರ ಕುರಿತು ವರದಿ ಪ್ರಕಟಿಸಿದ್ದವು.

ಜಾಗತಿಕ ಮಾಧ್ಯಮಗಳಲ್ಲಿ ಪೆಗಾಸಸ್ ಬೇಹುಗಾರಿಕೆ ವರದಿ

ಜಾಗತಿಕ ಮಾಧ್ಯಮಗಳಲ್ಲಿ ಪೆಗಾಸಸ್ ಬೇಹುಗಾರಿಕೆ ವರದಿ

ಜಾಗತಿಕ ಸುದ್ದಿ ಸಂಸ್ಥೆಗಳಾಗಿರುವ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲೇ ಮೊಂಡೆ ಜೊತೆ ಸಹಯೋಗ ಹೊಂದಿರುವ 'ದಿ ವೈರ್' ಪೆಗಾಸಸ್ ಬೇಹುಗಾರಿಕೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಮಾಧ್ಯಮ ಪಾಲುದಾರ ಸಂಸ್ಥೆ ಆಗಿರುವ ಪ್ಯಾರಿಸ್ ಮೂಲದ 'ನಾನ್ ಪ್ರಾಫಿಟ್ ಆರ್ಗನೈಸೇಷನ್ ಫಾರ್ಬಿಡನ್ ಸ್ಟೋರೀಸ್ ಮತ್ತು ರೈಟ್ಸ್ ಗ್ರೂಪ್ ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸಂಸ್ಥೆಗಳು ಈ ಕುರಿತು ತನಿಖೆ ನಡೆಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಿವೆ. ಇಸ್ರೇಲ್ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿತ್ತು.

ಪೆಗಾಸಸ್ ತಂತ್ರಾಂಶದ ಬಗ್ಗೆ ಯಾವ ರಾಷ್ಟ್ರಗಳಲ್ಲಿ ತನಿಖೆ

ಪೆಗಾಸಸ್ ತಂತ್ರಾಂಶದ ಬಗ್ಗೆ ಯಾವ ರಾಷ್ಟ್ರಗಳಲ್ಲಿ ತನಿಖೆ

ಇಸ್ರೇಲ್ ಮೂಲದ ಪೆಗಾಸಸ್ ಎಂಬ ಎನ್ಎಸ್ಓ ಕಂಪನಿಗೆ 10 ರಾಷ್ಟ್ರಗಳ ಸರ್ಕಾರಗಳು ಗ್ರಾಹಕರಾಗಿ ಸಂಖ್ಯೆ ನೊಂದಾಯಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಅಜೆರ್ಬೈಜಾನ್, ಬಹ್ರೇನ್, ಕಜಕಿಸ್ತಾನ್, ಮೆಕ್ಸಿಕೋ, ಮೊರಾಕೊ, ರುವಾಂಡಾ, ಸೌದಿ ಅರೇಬಿಯಾ, ಹಂಗೇರಿ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಷ್ಚ್ರಗಳು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿವೆ. ಇದರೊಂದಿಗೆ ಆಯ್ಕೆ ಮಾಡಲಾದ ಫೋನ್ ಸಂಖ್ಯೆಗಳು ನಾಲ್ಕು ಖಂಡಗಳ 45ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿರುವುದು ಗೊತ್ತಾಗಿದೆ.

ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಹಿನ್ನೆಲೆ

ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಹಿನ್ನೆಲೆ

ಜಾಗತಿಕ ತನಿಖಾ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ, ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೇ, ದೇಶದ 300ಕ್ಕೂ ಹೆಚ್ಚು ಪ್ರಮುಖ ರಾಜಕಾರಣಿಗಳು, ಕೇಂದ್ರ ಸಚಿವರು, ನ್ಯಾಯಾಧೀಶರು ಹಾಗೂ ಪತ್ರಕರ್ತರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಲಾಗಿದೆ. ಈ ಬೇಹಾಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿ ಸ್ವತಃ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಮತ್ತು ಅಶ್ವಿನಿ ವೈಷ್ಣವ್ ಜೊತೆಗೆ 40 ಮಂದಿ ಪತ್ರಕರ್ತರ ಹೆಸರು ಕೂಡ ಸೇರಿದೆ.

ಪೆಗಾಸಸ್ ತಂತ್ರಾಂಶಕ್ಕೆ ಇಸ್ರೇಲ್ ಮೂಲ ನೆಲೆ

ಪೆಗಾಸಸ್ ತಂತ್ರಾಂಶಕ್ಕೆ ಇಸ್ರೇಲ್ ಮೂಲ ನೆಲೆ

ಪೆಗಾಸಸ್ ಬೇಹುಗಾರಿಕೆ ತಂತ್ರಾಂಶಕ್ಕೆ ಸಂಬಂಧಿಸಿದಂತೆ NSO ಗ್ರೂಪ್ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಇಸ್ರೇಲ್ ಅಂತರ್-ಸಚಿವಾಲಯದ ತಂಡವನ್ನು ಸ್ಥಾಪಿಸಿತು. ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಜುಲೈನಲ್ಲಿ NSO ಕಚೇರಿಗೆ ಭೇಟಿ ನೀಡಿದರು. ಸೈಬರ್ ಉತ್ಪನ್ನಗಳನ್ನು ರಫ್ತು ಮಾಡಲು "ಪರವಾನಗಿಗಳನ್ನು ನೀಡುವ ಸಂಪೂರ್ಣ ವಿಷಯದ ಪರಿಶೀಲನೆ" ಯ ಬಗ್ಗೆ ಸರ್ಕಾರವು ಸುಳಿವು ನೀಡಿತ್ತು.

English summary
United States Added Israel's Pegasus Spyware to 'black List: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X