ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನ್ ಫೇಲ್, ಬಿಡಿ ಭಾಗಗಳು ಕಳಚಿದರೂ ವಿಮಾನ ಸುರಕ್ಷಿತ ಲ್ಯಾಂಡಿಂಗ್

|
Google Oneindia Kannada News

ವಾಷಿಂಗ್ಟನ್,ಫೆಬ್ರವರಿ 21: ಎಂಜಿನ್ ಫೇಲ್ ಆಗಿದ್ದರೂ, ವಿಮಾನದ ಬಿಡಿ ಭಾಗಗಳು ಕಳಚಿದ್ದರೂ, ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ಒಂದಲ್ಲ ಎರಡಲ್ಲ ವಿಮಾನದಲ್ಲಿ ಬರೋಬ್ಬರಿ 241 ಮಂದಿ ಪ್ರಯಾಣಿಕರಿದ್ದರು.ಮೂಲಗಳ ಪ್ರಕಾರ ಅಮೆರಿಕದ ಡೆನ್ವರ್‌ನಿಂದ ಹೊನೊಲುಲುಗೆ ಹೊರಟಿದ್ದ ವಿಮಾನದ ಎಂಜಿನ್‌ ಮಾರ್ಗ ಮಧ್ಯೆ ತಾಂತ್ರಿಕ ದೋಷಕ್ಕೆ ತುತ್ತಾಗಿ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿದೆ.

ಆಂಧ್ರಪ್ರದೇಶ ವಿಮಾನ ಅಪಘಾತ: ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ಅನಾಹುತಆಂಧ್ರಪ್ರದೇಶ ವಿಮಾನ ಅಪಘಾತ: ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ಅನಾಹುತ

ಅಲ್ಲದೆ ವಿಮಾನ ಆಗಸದಲ್ಲಿ ಹಾರಾಟ ಮಾಡುತ್ತಿದ್ದ ವೇಳೆಯಲ್ಲಿಯೇ ಎಂಜಿನ್ ನ ರಕ್ಷಣಾ ಕವಚ ಕಳಚಿ ಭೂಮಿಗೆ ಬಿದ್ದಿದೆ. ಆದರೂ ಅಪಾಯಕ್ಕೆ ತುತ್ತಾಗಿದ್ದ ಅಮೆರಿಕದ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗುವ ಮೂಲಕ ಅಚ್ಚರಿ ಮೂಡಿಸಿದೆ. ಅಲ್ಲದೆ ಆಗಬಹುದಾಗಿದ್ದ ಭೀಕರ ದುರಂತವೊಂದು ಪೈಲಟ್ ನ ಸಮಯ ಪ್ರಜ್ಞೆಯಿಂದ ತಪ್ಪಿದೆ.

United Plane Suffers Engine Failure, Scatters Debris Over US City

ಬೋಯಿಂಗ್ 777-200- ಯುಎ328 ಸಂಖ್ಯೆಯ ವಿಮಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 12: 15ರಲ್ಲಿ ಹೊನೊಲುಲುಗೆ ಪ್ರಯಾಣ ಬೆಳೆಸಿತ್ತು.

ಮಾರ್ಗ ಮಧ್ಯೆ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ಪೈಲಟ್ ಕೂಡಲೇ ಏರ್ ಟ್ರಾಫಿಕ್ ಕಂಟೋಲ್ ರೂಂಗೆ ಮಾಹಿತಿ ನೀಡಿದ್ದರೆ. ಬಳಿಕ ವಿಮಾನವನ್ನು ಮರಳಿ ಏರ್ ಪೋರ್ಟ್ ಗೆ ತಿರುಗಿಸಿದ್ದಾರೆ.

ಈ ವೇಳೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್ ಗೆ ಅಳವಡಿಸಲಾಗಿದ್ದ ರಕ್ಷಣಾ ಕವಚ ಕೂಡ ಉದುರಿ ಕೆಳಗೆ ಮನೆಯೊಂದರ ಆವರಣದಲ್ಲಿ ಬಿದ್ದಿದೆ. ಹಾಗಿದ್ದರೂ ವಿಮಾನ ಸುರಕ್ಷಿತವಾಗಿ ಡೆನ್ವರ್ ವಿಮಾನ ನಿಲ್ದಾಣ ತಲುಪಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇನ್ನು ವಿಮಾನದಲ್ಲಿ 241 ಪ್ರಯಾಣಿಕರಿದ್ದರು ಮತ್ತು ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರಾದ ಅಲೆಕ್ಸ್ ರೆಂಟೇರಿಯಾ ಹೇಳಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಮಾನದ ಎಂಜಿನ್ ಗೆ ಬೆಂಕಿ ತಗುಲಿದ್ದನ್ನು ವಿಮಾನದಲ್ಲಿದ್ದವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಯುನೈಟೆಡ್‌ ಏರ್‌ಲೈನ್ಸ್‌ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಲ್ಲ ರೀತಿಯ ಭದ್ರತಾ ಮಾನದಂಡಗಳನ್ನು ಪಾಲಿಸಲಾಗಿತ್ತು. ಆದಾಗ್ಯೂ ಈ ಘಟನೆ ನಡೆದಿದೆ ಎಂದು ಟ್ವೀಟ್ ಮಾಡಿದೆ.

English summary
A United Airlines plane suffered a fiery engine failure Saturday shortly after taking off from Denver for Hawaii, dropping massive debris on a residential area before a safe emergency landing, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X