ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ಆಕ್ಷೇಪ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 14: ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಮನಾವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿರುವುದರಿಂದ ಕೆಲವರ ಹಕ್ಕಗಳನ್ನು ಕಸಿದುಕೊಂಡಂತಾಗುತ್ತದೆ. ಮೂಲಭೂತವಾಗಿ ಇದು ಸಮಾಜದಲ್ಲಿ ತಾರತಮ್ಯ ಸೃಷ್ಟಿಸಲಿದೆ. ಇದಲ್ಲದೇ ಭಾರತದ ಸಂವಿಧಾನಕ್ಕೂ ವಿರುದ್ಧವಾಗಿ ಕಾಯ್ದೆ ರೂಪಿಸಲಾಗಿದೆ.

ಪೌರತ್ವ ಮಸೂದೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಗೆ ಕಾಂಗ್ರೆಸ್‌ಪೌರತ್ವ ಮಸೂದೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಗೆ ಕಾಂಗ್ರೆಸ್‌

ಇನ್ನೊಂದೆಡೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಭಾರತವು ನೂತನ ತಿದ್ದುಪಡಿ ಕಾಯ್ದೆ ಬಗ್ಗೆ ಮರು ಪರಿಶೀಲನೆ ಮಾಡಬೇಕಿದೆ ಎಂದು ಆಯೋಗ ಆಗ್ರಹಿಸಿದೆ.

United Nations Human Right Body Objects To Indias CAB

ನೂತನ ಕಾಯ್ದೆಯು ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ದೇಶದ ಜಾತ್ಯತೀತ ತತ್ವದ ಮೇಲೆ ಇದು ಪ್ರಹಾರ ಮಾಡಲಿದೆ. ಭಾರತದಲ್ಲಿ ಇಂತಹ ಕಾಯ್ದೆ ನಿರೀಕ್ಷೆ ಮಾಡಲಿರಲಿಲ್ಲ ಎಂಧು ಆಯೋಗ ಅಭಿಪ್ರಾಯಪಟ್ಟಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಈಗಾಗಲೇ ಅಮೆರಿಕ ಕೂಡ ತನ್ನ ಅಸಮಾಧಾನವ್ಯಕ್ತಪಡಿಸಿದೆ.

English summary
United Nation's Human Right body made a objections to Citizenship Amendment Bill. It says new law is anti constitutional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X