ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗು ಮಾಸ್ಕ್ ಹಾಕಿಲ್ಲವೆಂದು ದಂಪತಿಯನ್ನು ಕೆಳಗಿಳಿಸಿದ ಏರ್ ಲೈನ್ಸ್

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 14: ಎರಡು ವರ್ಷದ ಮಗು ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸಿದ್ದಕ್ಕೆ ದಂಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿರುವ ಸಂಗತಿ ನಡೆದಿದ್ದು, ಈ ಕುರಿತು ವಿಡಿಯೋ ಮಾಡಿರುವ ದಂಪತಿ ಸಿಬ್ಬಂದಿಯ ನಡೆಯನ್ನು ಖಂಡಿಸಿದ್ದಾರೆ.

ಯುನೈಟೆಡ್ ಏರ್ ಲೈನ್ ವಿಮಾನದ ಸಿಬ್ಬಂದಿ ಹೀಗೆ ವರ್ತಿಸಿರುವುದಾಗಿ ದಂಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಎರಡು ವರ್ಷದ ಮಗಳು ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸುತ್ತಿದ್ದಳು. ನಾವು ಆಕೆಗೆ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿ ಹೇಳುತ್ತಿದ್ದೆವು. ಆದರೆ ಆಕೆ ಹಟ ಮಾಡುತ್ತಿದ್ದಳು. ಮಗುವನ್ನು ಸಂತೈಸುವಷ್ಟರಲ್ಲಾಗಲೇ ವಿಮಾನ ಸಿಬ್ಬಂದಿ ನಮ್ಮನ್ನು ಹೊರಗೆ ಹೋಗುವಂತೆ ತಿಳಿಸಿದರು ಎಂದು ಎಲಿಝ್ ಅರ್ಬನ್ ಎಂಬಾಕೆ ವಿಡಿಯೋ ಮಾಡಿ ದೂರಿದ್ದಾರೆ.

ವಿಮಾನ ಸಿಬ್ಬಂದಿಗೆ ಡೈಪರ್ ಬಳಸುವಂತೆ ಸೂಚನೆ ನೀಡಿದ ಚೀನಾವಿಮಾನ ಸಿಬ್ಬಂದಿಗೆ ಡೈಪರ್ ಬಳಸುವಂತೆ ಸೂಚನೆ ನೀಡಿದ ಚೀನಾ

ವಿಮಾನ ಸಿಬ್ಬಂದಿ ನಡೆದುಕೊಂಡ ರೀತಿಯನ್ನೂ ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಪುಟ್ಟ ಮಗು ಮಾಸ್ಕ್ ಹಾಕಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಹೀಗೆ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

United Airlines Sent Out Family From Flight For Kid Refused To Wear Mask

ದಂಪತಿ ತಮ್ಮ ಮಗುವಿನೊಂದಿಗೆ ಕೊಲೊರಾಡೊದಿಂದ ನ್ಯೂಜೆರ್ಸಿಗೆ ಪಯಣಿಸುತ್ತಿದ್ದರು. ವಿಮಾನ ಹೊರಡುವ ಸಂದರ್ಭ ಮಗು ಮಾಸ್ಕ್ ಹಾಕಿಲ್ಲ ಎಂದು ಇವರನ್ನು ಕೆಳಗಿಳಿಸಿರುವ ಆರೋಪ ಕೇಳಿಬಂದಿದೆ. ಮಗು ಮಾಸ್ಕ್ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಹೊರಗೆ ಹೋಗುವಂತೆ ಸೂಚಿಸಿದರು. ನಾವೂ ಮಗಳಿಗೆ ಮಾಸ್ಕ ಹಾಕಲು ಪ್ರಯತ್ನಿಸುತ್ತಿದ್ದೆವು. ನಾವೂ ಪ್ರಜ್ಞಾವಂತರು. ನಮಗೂ ಅರಿವಿದೆ. ಆದರೆ ಸಿಬ್ಬಂದಿ ಇಷ್ಟು ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Recommended Video

Mandya:ಕುಮಾರಸ್ವಾಮಿ ಬಿಜೆಪಿಗೆ ಬಂದು ಸಿಎಂ ಆಗೋ ಭ್ರಮೆಯಲ್ಲಿ ಇದ್ದಾರೆ-ಸಚಿವ ನಾರಾಯಣಗೌಡ ಆಕ್ರೋಶ | Oneindia Kannada

ಆದರೆ ಏರ್ ಲೈನ್ಸ್ ಈ ಕುರಿತು ಸೂಕ್ತ ಸ್ಪಷ್ಟನೆ ನೀಡಿಲ್ಲ. ಮುಂದಿನ ವಿಮಾನದಲ್ಲಿ ಕುಟುಂಬ ಪ್ರಯಾಣವನ್ನು ನಾವು ನಿಷೇಧಿಸಿರಲಿಲ್ಲ ಎಂದು ಹೇಳಿದೆ.

English summary
United airlines flight crew sent out the family out of the plane even as they parents try to put a mask on their daughter's face,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X