ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಖರೀದಿ ಹಾಗೂ ಪೂರೈಕೆ ಜವಾಬ್ದಾರಿಗೆ ಯುನಿಸೆಫ್ ಸಿದ್ಧ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 07: ಕೊರೊನಾ ಲಸಿಕೆ ಖರೀದಿ ಹಾಗೂ ಪೂರೈಕೆ ಜವಾಬ್ದಾರಿ ಹೊರಲು ಯುನಿಸೆಫ್ ಸಿದ್ಧವಿರುವುದಾಗಿ ತಿಳಿಸಿದೆ.

Recommended Video

Sputnik V Vaccine ಎಲ್ಲಾ ಪ್ರಯೋಗಗಳಲ್ಲೂ ಯಶಸ್ಸು ,Russiaದ ಮತ್ತೊಂದು ಮೈಲುಗಲ್ಲು | Oneindia Kannada

ಈ ಲಸಿಕೆ ಖರೀದಿ ಮತ್ತು ಪೂರೈಕೆ ಪ್ರಕ್ರಿಯೆ ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಾಚರಣೆಯಾಗುವ ಸಾಧ್ಯತೆ ಇದೆ.

ಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾಭಾರತದೊಂದಿಗೆ ಕೊರೊನಾ ಲಸಿಕೆಯ ಸಂಪೂರ್ಣ ಮಾಹಿತಿ ಹಂಚಿಕೊಂಡ ರಷ್ಯಾ

ವಿಶ್ವದ ಏಕೈಕ ಅತಿ ದೊಡ್ಡ ಏಕ ಲಸಿಕೆ ಖರೀದಿಸುವ ಸಂಸ್ಥೆಯಾಗಿರುವ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್‌), ಪ್ರತಿ ವರ್ಷ 2 ಬಿಲಿಯನ್‌ ಡೋಸ್‌ಗಳಷ್ಟು ರೋಗ ನಿರೋಧ ಶಕ್ತಿ ಹೆಚ್ಚಿಸುವ ವಿವಿಧ ಲಸಿಕೆಗಳನ್ನು ಖರೀದಿಸುತ್ತದೆ.

ಸಂಯೋಜಕರಾಗಿ ಸೇವೆ

ಸಂಯೋಜಕರಾಗಿ ಸೇವೆ

ಲಸಿಕೆ ಪೂರೈಸುವ ವಿಚಾರದಲ್ಲಿ ಯುನಿಸೆಫ್‌ ಕೂಡ ಹೆಚ್ಚು ಆದಾಯ ಪಡೆಯುವ 80 ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ‘ಸಂಯೋಜಕರಾಗಿ‘ ಸೇವೆ ಸಲ್ಲಿಸಲು ಮುಂದಾಗಿದೆ.

ಸ್ವಂತ ಹಣದಿಂದ ಲಸಿಕೆಗಳ ಖರೀದಿ

ಸ್ವಂತ ಹಣದಿಂದ ಲಸಿಕೆಗಳ ಖರೀದಿ

ಈ ದೇಶಗಳು ಕೊವಾಕ್ಸ್ ಫೆಸಿಲಿಟಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದು ಮತ್ತು ತಮ್ಮ ಸ್ವಂತ ಹಣದಿಂದಲೇ ಲಸಿಕೆಗಳನ್ನು ಖರೀದಿಸುವುದಾಗಿ ಮಾಹಿತಿ ನೀಡಿದ್ದಾರೆ. ಯುನಿಸೆಫ್ ಸಂಸ್ಥೆಯು ಲಸಿಕೆ ಖರೀದಿ ಮತ್ತು ಪೂರೈಸುವ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ, ಗವಿ ದಿ ವ್ಯಾಕ್ಸಿನ್ ಅಲಯನ್ಸ್‌, ದಿ ಕೋಯ್ಲೇಷನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್‌ ಇನ್ನೋವೇಷನ್‌(ಸಿಇಪಿಐ), ಪಿಎಎಚ್‌ಒ, ವಿಶ್ವ ಬ್ಯಾಂಕ್, ದಿ ಬಿಲ್ ಅಂಡ್ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ ಮತ್ತು ಇತರೆ ಪಾಲುದಾರರ ಸಹಯೋಗದಲ್ಲಿ ಕೈಗೆತ್ತಿಕೊಳ್ಳುತ್ತಿದೆ.

ಕೋವ್ಯಾಕ್ಸ್ ಗ್ಲೋಬಲ್ ವ್ಯಾಕ್ಸಿನ್ ಫೆಸಿಲಿಟಿ

ಕೋವ್ಯಾಕ್ಸ್ ಗ್ಲೋಬಲ್ ವ್ಯಾಕ್ಸಿನ್ ಫೆಸಿಲಿಟಿ

ಈಗ ಇದೇ ಯುನಿಸೆಫ್ ಪಾನ್‌ ಅಮೆರಿಕ ಆರೋಗ್ಯ ಸಂಸ್ಥೆ(ಪಿಎಎಚ್‌ಒ) ಸೇರಿದಂತೆ ವಿವಿಧ ಕಂಪನಿಗಳು, ಆರೋಗ್ಯ ಸಂಸ್ಥೆಗಳ ಸಹಯೋಗದಲ್ಲಿ ‘ಕೋವ್ಯಾಕ್ಸ್ ಗ್ಲೋಬಲ್‌ ವ್ಯಾಕ್ಸಿನ್‌ ಫೆಸಿಲಿಟಿ‘ ಎಂಬ ಯೋಜನೆಯ ಪರವಾಗಿ ಕೊರೊನಾ ಲಸಿಕೆ ಖರೀದಿಸಿ, ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವ 92 ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ಮುಂದಾಗಿದೆ. ಈ ಪ್ರಕ್ರಿಯೆಗೆ ಕಂಪನಿ, ಸಂಸ್ಥೆಗಳೂ ಸಾಥ್ ನೀಡಲು ಆಸಕ್ತಿ ತೋರಿವೆ.

ಹಲವು ಕಂಪನಿಗಳಿಂದ ಕೊರೊನಾ ಲಸಿಕೆ ಅಭಿವೃದ್ಧಿ

ಹಲವು ಕಂಪನಿಗಳಿಂದ ಕೊರೊನಾ ಲಸಿಕೆ ಅಭಿವೃದ್ಧಿ

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹಲವು ಕಂಪನಿಗಳು ಕೊರೊನಾ ಲಸಿಕೆಗಳನ್ನು ತಯಾರಿಸಿ, ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಯುನಿಸೆಫ್ ಸಂಸ್ಥೆ, ಕೊರೊನಾ ಲಸಿಕೆಯನ್ನು ಖರೀದಿಸಿ, ವೇಗವಾಗಿ ಹಾಗೂ ಸಮಾನವಾಗಿ ಎಲ್ಲ ರಾಷ್ಟ್ರಗಳಿಗೂ ತಲುಪಿಸುವ ಪ್ರಕ್ರಿಯೆಯನ್ನು ಮುನ್ನಡೆಸುವುದಾಗಿ ಪ್ರಕಟಿಸಿದೆ.

ದಿ ಕೊವಾಕ್ಸ್ ಫೆಸಿಲಿಟಿಯಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮುಕ್ತ ಅವಕಾಶ ನೀಡಿದ್ದು, ಯಾವ ದೇಶವೂ ಕೊವಿಡ್‌ 19 ಲಸಿಕೆಯ ಲಭ್ಯತೆಯಿಂದ ದೂರ ಉಳಿಯಬಾರದು ಎಂದು ಯುನಿಸೆಫ್ ಹೇಳಿದೆ.

English summary
In what could possibly be the world’s largest and fastest ever operation of its kind, the UNICEF will be leading the procurement and supply of coronavirus vaccines to ensure that all countries have safe, fast and equitable access to initial doses when they are available, it has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X