ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

US ಅಧ್ಯಕ್ಷೀಯ ಚುನಾವಣೆ: ಮಾಜಿ-ಹಾಲಿ ನಡುವೆ ಬಿಗ್ ಫೈಟ್ Recap

|
Google Oneindia Kannada News

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಎದುರಾಳಿಯಾಗಿ ಬೈಡನ್ ಸ್ಪರ್ಧೆ ಮಾಡಿದ್ದರೂ, ಒಬಾಮಾ ನಿಜವಾದ ಪ್ರತಿಸ್ಪರ್ಧಿಯಾಗಿದ್ದರು. ಟ್ರಂಪ್ ವಿರುದ್ಧ ವರ್ಷವಿಡೀ ಗಂಭೀರ ಆರೋಪ ಮಾಡುತ್ತಾ ಬಂದ ಒಬಾಮಾ, ಅದಕ್ಕೆ ತಕ್ಕ ಸಾಕ್ಷಿಗಳನ್ನು ಕೂಡ ಒದಗಿಸಿದ್ದರು. ಕೊರೊನಾ ಕಂಟ್ರೋಲ್‌ ಮಾಡುವ ಬಗ್ಗೆ ಟ್ರಂಪ್ ಕೈಗೊಂಡ ತಪ್ಪು ನಿರ್ಧಾರಗಳು ಹಾಗೂ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಕೋಟಿಯ ಗಡಿ ದಾಟಿ ಹೋಗಲು ಕಾರಣವಾದ ಎಡವಟ್ಟುಗಳ ಕುರಿತು ಮಾಹಿತಿಯನ್ನ ಒಬಾಮಾ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು.

ಅಲ್ಲದೆ ಡೊನಾಲ್ಡ್‌ ಟ್ರಂಪ್‌ ಆಡಳಿತದ ವೈಫಲ್ಯಗಳ ಬಗ್ಗೆಯೂ ಒಬಾಮಾ ಅಮೆರಿಕ ಮತದಾರರ ಎದುರು ಮಾಹಿತಿ ಕೊಟ್ಟಿದ್ದರು. ಇನ್ನು ಒಬಾಮಾ ಮಾಡುತ್ತಿದ್ದ ಆರೋಪಗಳಿಗೆ ಟ್ರಂಪ್ ಕೂಡ ಸರಿಯಾಗೇ ತಿರುಗೇಟು ನೀಡಿದ್ದರು. ಹೀಗೆ 2020 ಅಮೆರಿಕದ ಮಾಜಿ ಹಾಗೂ ಹಾಲಿ ಅಧ್ಯಕ್ಷರ ನಡುವಿನ ಸಮರಕ್ಕೆ ನಾಂದಿ ಹಾಡಿತ್ತು. ಅಲ್ಲದೆ ಬೈಡನ್ ಗೆಲುವಿನಲ್ಲಿ ಒಬಾಮಾ ನೀಡಿದ ಕೆಲ ಹೇಳಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು. ಹಾಗಾದರೆ 2020ರಲ್ಲಿ ಅಮೆರಿಕದ ಒಬಾಮಾ ಟ್ರಂಪ್ ವಿರುದ್ಧ ಮಾಡಿದ್ದ ಪ್ರಮುಖ ಆರೋಪಗಳ ಪಟ್ಟಿ ಇಲ್ಲಿದೆ.

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

ಅಕ್ಟೋಬರ್‌ನಲ್ಲಿ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಒಬಾಮಾ, ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಅಲ್ಲದೆ ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಅಮೆರಿಕದ ಸ್ನೇಹಿತರು ಅತಂತ್ರರಾಗಿ ನಿಲ್ಲುವ ಸ್ಥಿತಿಯನ್ನು ಟ್ರಂಪ್ ಬೇಕಂತಲೇ ಸೃಷ್ಟಿಸಿದ್ದಾರೆ ಎಂದಿದ್ದರು.

ಟ್ರಂಪ್‌ಗೆ ಮತ ಹಾಕಿದವರಿಗೆ ಬುದ್ಧಿ ಇಲ್ವಾ..? ಮಾಜಿ ಅಧ್ಯಕ್ಷ ಒಬಾಮಾ ಪ್ರಶ್ನೆ..!ಟ್ರಂಪ್‌ಗೆ ಮತ ಹಾಕಿದವರಿಗೆ ಬುದ್ಧಿ ಇಲ್ವಾ..? ಮಾಜಿ ಅಧ್ಯಕ್ಷ ಒಬಾಮಾ ಪ್ರಶ್ನೆ..!

ವಿರೋಧಿಗಳಿಗೆ ನಾವು ಸೋಲಬೇಕಿದೆ..!

ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದ್ದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಒಬಾಮಾ ತಿಳಿಸಿದ್ದರು.

News Makers 2020: ಡೊನಾಲ್ಡ್‌ಗೆ ಟ್ರಂಪ್ ಕಾರ್ಡ್‌ ಆಗದ 2020News Makers 2020: ಡೊನಾಲ್ಡ್‌ಗೆ ಟ್ರಂಪ್ ಕಾರ್ಡ್‌ ಆಗದ 2020

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಚುನಾವಣೆಗೆ ಮುನ್ನ ನಡೆದಿದ್ದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದರು. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿ ಜರಿದಿದ್ದರು. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ.

ಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನಸೆನೆಟರ್, ಉಪಾಧ್ಯಕ್ಷ, POTUS ಬೈಡನ್ ಜತೆ ಒಬಾಮಾ ಗೆಳೆತನ

ಟ್ರಂಪ್ ತಮಗೆ ಮತ್ತು ಅವರ ಸ್ನೇಹಿತರನ್ನ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರ ಬಳಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದರು. ಚುನಾವಣೆಯಲ್ಲಿ ಬೈಡನ್ ಪರ ಮತಗಳಿಕೆಗೆ ಒಬಾಮಾ ವಾಗ್ದಾಳಿ ಸಹಾಯಕವಾಗಿತ್ತು. ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲ ಒಬಾಮಾ ಪಾತ್ರವೂ ದೊಡ್ಡದಿದೆ.

ಕಂಡ ಕಂಡವರು ಬೈಯುತ್ತಾರೆ..!

ಕಂಡ ಕಂಡವರು ಬೈಯುತ್ತಾರೆ..!

ಅಮೆರಿಕದ ನಿರ್ಗಮಿತ ಅಧ್ಯಕ್ಷ ಟ್ರಂಪ್ ಅವರಿಗೂ ಟ್ವಿಟ್ಟರ್‌ಗೂ ಅವಿನಾಭಾವ ಸಂಬಂಧ. ಮನಸ್ಸಿಗೆ ಬಂದಂತೆ ಟ್ವೀಟ್ ಮಾಡುತ್ತಾ ಎಡವಟ್ಟು ಮಾಡಿಕೊಳ್ಳುವುದು ಟ್ರಂಪ್‌ಗೆ ರೂಢಿಯಾಗಿದೆ. ಹೀಗೆ ಟ್ರಂಪ್ ಟ್ವಿಟ್ಟರ್‌ನಲ್ಲಿ ಮಾಡಿಕೊಳ್ಳುತ್ತಿದ್ದ ರಾದ್ಧಾಂತಗಳನ್ನ ಒಬಾಮಾ ಪ್ರಸ್ತಾಪ ಮಾಡಿದ್ದರು. ಟ್ವಿಟ್ಟರ್‌ನಲ್ಲಿ ಒಬ್ಬ ಅಧ್ಯಕ್ಷರಿಗೆ ಸಿಗುವ ಗೌರವ ಟ್ರಂಪ್‌ಗೆ ಸಿಗುತ್ತಿಲ್ಲ, ಸಿಕ್ಕ ಸಿಕ್ಕವರೆಲ್ಲಾ ಅಧ್ಯಕ್ಷರಿಗೆ ಛೀಮಾರಿ ಹಾಕುತ್ತಾರೆ.

ಟ್ರಂಪ್ v/s ಮಾಸ್ಕ್: ವರ್ಷಪೂರ್ತಿ ನಡೆದಿತ್ತು 'ಮಾಸ್ಕ್ ಮಹಾಯುದ್ಧ'ಟ್ರಂಪ್ v/s ಮಾಸ್ಕ್: ವರ್ಷಪೂರ್ತಿ ನಡೆದಿತ್ತು 'ಮಾಸ್ಕ್ ಮಹಾಯುದ್ಧ'

ಇದು ಅಮೆರಿಕದ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗುವಂತಹ ವರ್ತನೆ ಎಂದು ಟ್ರಂಪ್‌ಗೆ ಬಿಸಿ ಮುಟ್ಟಿಸಿದ್ದರು. ಇಷ್ಟು ಮಾತ್ರವಲ್ಲ ಇನ್ನೂ ಹಲವು ಹೇಳಿಕೆಗಳು ಬೈಡನ್ ಗೆಲುವಿಗೆ ಪೂರಕವಾದರೆ, ಟ್ರಂಪ್ ಸೋಲಿಗೆ ಕಾರಣವಾಯಿತು. ಹೀಗೆ 2020 ಅಮೆರಿಕದಲ್ಲಿ ಮಾಜಿ ಹಾಗೂ ಹಾಲಿ ಅಧ್ಯಕ್ಷರ ನಡುವಿನ ಸಮರಕ್ಕೆ ನಾಂದಿ ಹಾಡಿತ್ತು.

English summary
Unforgettable 2020: US Ex-president Barack Obama is also a reason in Biden’s victory. Obama also made serious allegations against Donald Trump in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X