ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014ರಿಂದ 22,000ಕ್ಕೂ ಹೆಚ್ಚು ಭಾರತೀಯರು ಅಮೆರಿಕ ಆಶ್ರಯಕ್ಕೆ ಅರ್ಜಿ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 30: 2014ರಿಂದ ಈಚೆಗೆ 7,000 ಮಹಿಳೆಯರೂ ಸೇರಿದಂತೆ 22,000ಕ್ಕೂ ಹೆಚ್ಚು ಮಂದಿ ಭಾರತೀಯರು ಯುನೈಟೆಡ್ ಸ್ಟೇಟ್ಸ್ ನಲ್ಲಿ (ಯು. ಎಸ್) ಆಶ್ರಯಕ್ಕಾಗಿ ಅರ್ಜಿ ಹಾಕಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕೃತ ಅಂಕಿ- ಅಂಶಗಳು ಬಯಲು ಮಾಡಿವೆ.

ಭಾರತೀಯರು ಅಮೆರಿಕದಲ್ಲಿ ಆಶ್ರಯ ಕೇಳಲು ಭಾರತದಲ್ಲಿನ ನಿರುದ್ಯೋಗ ಅಥವಾ ಅಸಹಿಷ್ಣುತೆ ಅಥವಾ ಎರಡೂ ಕಾರಣ ನಾರ್ಥ್ ಅಮೆರಿಕನ್ ಪಂಜಾಬಿ ಅಸೋಸಿಯೇಷನ್ (NAPA) ಕಾರ್ಯಕಾರಿ ನಿರ್ದೇಶಕ ಸತ್ನಾಂ ಸಿಂಗ್ ಚಾಹಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಷಿಂಗ್ಟನ್ ನಿಂದ ಹುಕುಂ, ಭಾರತ ಮೂಲದ ವಲಸಿಗರನ್ನು ಹೊರಗಟ್ಟಿದ ಮೆಕ್ಸಿಕೋವಾಷಿಂಗ್ಟನ್ ನಿಂದ ಹುಕುಂ, ಭಾರತ ಮೂಲದ ವಲಸಿಗರನ್ನು ಹೊರಗಟ್ಟಿದ ಮೆಕ್ಸಿಕೋ

NAPA ದಿಂದ ಫ್ರೀಡಂ ಆಫ್ ಇನ್ಫರ್ಮೇಷನ್ ಆಕ್ಟ್ (FOIA) ಮೂಲಕ ಅಮೆರಿಕ ಪೌರತ್ವ ಮತ್ತು ವಲಸಿಗ ಸೇವಾ ಕೇಂದ್ರದಿಂದ ಪಡೆದಿರುವ ಮಾಹಿತಿ ಪ್ರಕಾರ 22,371 ಮಂದಿ ಭಾರತೀಯರು ಅಮೆರಿಕದಲ್ಲಿ 2014ರಿಂದ ಈಚೆಗೆ ಆಶ್ರಯಕ್ಕಾಗಿ ಕೇಳಿಕೊಂಡಿದ್ದಾರೆ. ಈ ಸಂಖ್ಯೆ ಬಹಳ ಆತಂಕಕಾರಿಯಾದದ್ದು ಎಂದು ಚಾಹಲ್ ತಿಳಿಸಿದ್ದಾರೆ.

US

ಇನ್ನು ಈ ಐದು ವರ್ಷದಲ್ಲಿ ಅಮೆರಿಕದಲ್ಲಿ ಆಶ್ರಯಕ್ಕಾಗಿ ಕೇಳಿಕೊಂಡವರಲ್ಲಿ 6,935 ಮಹಿಳೆಯರು, 15,436 ಪುರುಷರಿದ್ದಾರೆ. ಇನ್ನು ಕಾನೂನುಬಾಹಿರವಾಗಿ ಅಮೆರಿಕ ಪ್ರವೇಶ ಮಾಡಿದವರನ್ನು ಚಾಹಲ್ ಮಾತನಾಡಿಸಿದ್ದು, ಕಾನೂನು ಪ್ರಕ್ರಿಯೆಗಳು ಸುದೀರ್ಘವಾಗಿದೆ. ಅಷ್ಟು ಸಮಯ ನಮ್ಮ ನೋವನ್ನು ಸಹಿಸುವುದು ಅಸಾಧ್ಯ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಆ ರೀತಿ ಕಾನೂನು ಬಾಹಿರವಾಗಿ ಅಮೆರಿಕ ಪ್ರವೇಶಿಸಿದ ನಂತರ ನಾನಾ ಬಗೆಯಲ್ಲಿ ಕಷ್ಟ ಪಡುತ್ತಿರುವುದನ್ನು ಕಂಡಿರುವುದರಿಂದ ಕಾನೂನು ಪ್ರಕಾರ- ನಿಯಮ ಅನುಸರಿಸಿಯೇ ಅಮೆರಿಕದ ಆಶ್ರಯ ಪಡೆಯುವಂತೆ ಸಲಹೆ ಮಾಡಿದ್ದಾರೆ ಚಾಹಲ್.

English summary
Due to main reason of unemployment, intolerance over 22,000 Indians seek asylum in US since 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X