ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news : ವಿಶ್ವಸಂಸ್ಥೆ ಕಾಶ್ಮೀರ ಕುರಿತು ಭದ್ರತಾ ಮಂಡಳಿ ಸಭೆ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 16: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ಮುಂದೆ ಭದ್ರತಾ ಮಂಡಳಿಯ ಸಭೆ ನಡೆಯಲಿದೆ.

ಆದರೆ ಭದ್ರತಾ ಮಂಡಳಿಯ ಖಾಯಂ ಸದಸ್ಯರೆಲ್ಲರೂ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ, ಪಾಕಿಸ್ತಾನದ ಮನವಿ ಹಾಗೂ ಚೀನಾದ ಸೂಚನೆಯಂತೆ ಈ ಸಭೆ ಕರೆಯಲಾಗಿದೆ.

370 ನೇ ವಿಧಿ ರದ್ದು: ವಿಶ್ವಸಂಸ್ಥೆಗೆ ಚಾಡಿ ಹೇಳಲು ಹೊರಟಿತೇ ಚೀನಾ? 370 ನೇ ವಿಧಿ ರದ್ದು: ವಿಶ್ವಸಂಸ್ಥೆಗೆ ಚಾಡಿ ಹೇಳಲು ಹೊರಟಿತೇ ಚೀನಾ?

ಭದ್ರತಾ ಮಂಡಳಿಯ ಇತರೆ ಸದಸ್ಯರು ಸಭೆಗೆ ಹಾಜರಾಗದಿರುವ ಕಾರಣ ಯಾವುದೇ ಪ್ರಮುಖ ನಿರ್ಧಾರ ಹೊರ ಬೀಳುವ ಸಾಧ್ಯತೆ ಕಡಿಮೆ ಇದೆ. ಪಾಕಿಸ್ತಾನದ ಪರ ಒಲವು ಹೊಂದಿರುವ ಚೀನಾದ ಕಾರಣದಿಂದ ಈ ಸಭೆ ಆಯೋಜನೆಯಾಗಿದೆ.

uno

ಇದಕ್ಕೂ ಮೊದಲು ಪಾಕಿಸ್ತಾನ ಸರ್ಕಾರವು ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿಯ ರಾಷ್ಟ್ರಗಳಿಗೆ ಪತ್ರ ಬರೆದು ಭದ್ರತಾ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ತುರ್ತಾಗಿ ಕರೆಯುವಂತೆ ಮನವಿ ಮಾಡಿತ್ತು.

ಆದರೆ ಇದಕ್ಕೆ ಚೀನಾ ಹೊರತುಪಡಿಸಿ ಭದ್ರತಾ ಮಂಡಳಿಯ ಇತರೆ ಸದಸ್ಯ ರಾಷ್ಟ್ರಗಳು ತಲೆಕೆಡಿಸಿಕೊಂಡಿರಲಿಲ್ಲ. ಬಳಿಕ ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಚೀನಾಕ್ಕೆ ತೆರಳಿ ಅಲವತ್ತುಕೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆಜಮ್ಮು ಮತ್ತು ಕಾಶ್ಮೀರ ಕುರಿತು ಚುನಾವಣಾ ಆಯೋಗದ ಮಹತ್ವದ ಚರ್ಚೆ

ಈ ಸಂದರ್ಭದಲ್ಲಿ ಪಾಕಿಸ್ತಾನ ಪರ ನಿಲ್ಲಲು ಚೀನಾ ನಿರ್ಧರಿಸಿತ್ತು.ಉಳಿದೆಲ್ಲಾ ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿತ್ತು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಪರಿಚ್ಛೇದ 370ಯನ್ನು ಭಾರತ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ತನ್ನ ಆಟ ಶುರು ಮಾಡಿತ್ತು.

ಇದೀಗ ಜಮ್ಮು ಕಾಶ್ಮೀರ ರಾಜ್ಯವಾಗಿರದೆ ಕೇಂದ್ರಾಡಳಿತ ಪ್ರದೇಶವಾಗಿದೆ. ಜೊತೆಗೆ ವಿಧಾನಸಭೆಯೂ ಇರಲಿದೆ. ಆಗಸ್ಟ್ 15ರಂದು ಜಮ್ಮು ಕಾಶ್ಮೀರದಲ್ಲಿ ಏಕಧ್ವಜಾರೋಹಣ ನೆರವೇರಿಸಲಾಯಿತು.
ಜಮ್ಮು ಕಾಶ್ಮೀರದಲ್ಲಿ ಕಳೆದ 12 ದಿನಗಳಿಂದ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಕಾಶ್ಮೀರದಲ್ಲಿ 10 ಟೆಲಿಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನಕಾಶ್ಮೀರದಲ್ಲಿ 10 ಟೆಲಿಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನ

ಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.

ಜೊತೆಗೆ ಪಾಕಿಸ್ತಾನವೂ ತನ್ನ ಏರೋಸ್ಪೇಸ್‌ನಲ್ಲಿ ಭಾರತದ ವಿಮಾನಕ್ಕೆ ನಿರ್ಬಂಧ ಹೇರಿದೆ.
ಸಂಜೋತಾ ಹಾಗೂ ಥಾರ್ ಎಕ್ಸ್‌ಪ್ರೆಸ್‌ನ್ನು ಭಾರತಕ್ಕೆ ಬರದಂತೆ ತಡೆ ಹಿಡಿದಿದೆ.

ಇದೀಗ ಚೀನಾ ಬೆಂಬಲ ಪಡೆದುಕೊಂಡು ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಯ ಮೆಟ್ಟಿಲೇರಿದೆ. ಆದರೆ ಇಂದು ವಿಶ್ವಸಂಸ್ಥೆಯಲ್ಲಿ ಮಹತ್ವದ ನಿರ್ಧಾರ ಹೊರ ಬೀಳುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.

English summary
After the China Intervention UN security council holding Closed door meeting today. It will discuss on revoking of special status to Jammu and Kashmir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X