ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 17ಕ್ಕೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಚುನಾವಣೆ: ಭಾರತದ ಪಾತ್ರವೇನು?

|
Google Oneindia Kannada News

ವಾಷಿಂಗ್ಟನ್, ಜೂನ್ 2: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆ ಜೂನ್ 17 ರಂದು ನಡೆಯಲಿದೆ. ಅಂದು ಭದ್ರತಾ ಮಂಡಳಿಯ ಖಾಯಂ ಐದು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

Recommended Video

ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ರೀತಿಯಲ್ಲಿ ವಾಖ್ಯಾನಿಸಿದ್ದಾರೆ | Oneindia Kannada

ಭಾರತವು 2021-22ರ ಅವಧಿಗೆ ಏಷ್ಯಾ-ಪೆಸಿಫಿಕ್ ವಿಭಾಗದಿಂದ ಶಾಶ್ವತವಲ್ಲದ ಸ್ಥಾನಕ್ಕೆ ಅಭ್ಯರ್ಥಿಯಾಗಿದೆ. ಈ ಗುಂಪಿನಿಂದ ಏಕೈಕ ಸ್ಥಾನಕ್ಕಾಗಿ ಸ್ಪರ್ಧಿಸುವ ಏಕೈಕ ಅಭ್ಯರ್ಥಿ ರಾಷ್ಟ್ರವಾಗಿರುವ ಕಾರಣ ಭಾರತಕ್ಕೆ ಜಯ ಸುಲಭವಾಗಿರಲಿದೆ.

ಕೊರೊನಾ ಆತಂಕ; ವಿಶ್ವಸಂಸ್ಥೆ ಅಧಿವೇಶನದ ಮೇಲೆ ಕರಿನೆರಳುಕೊರೊನಾ ಆತಂಕ; ವಿಶ್ವಸಂಸ್ಥೆ ಅಧಿವೇಶನದ ಮೇಲೆ ಕರಿನೆರಳು

ಜೂನ್ ತಿಂಗಳಿನ 15 ರಾಷ್ಟ್ರಗಳ ಪರಿಷತ್ತಿನ ಅಧ್ಯಕ್ಷ ಸ್ಥಾನವನ್ನು ಫ್ರಾನ್ಸ್ ವಹಿಸಿದ ನಂತರ ಈ ಪ್ರಕಟಣೆ ಸೋಮವಾರ ಹೊರಬಂದಿದೆ. ಈ ತಿಂಗಳ ಭದ್ರತಾ ಮಂಡಳಿಯ ಅನೌಪಚಾರಿಕ ತಾತ್ಕಾಲಿಕ ಕಾರ್ಯಕ್ರಮದ ಪ್ರಕಾರ, ಜೂನ್ 17 ರಂದು ಭದ್ರತಾ ಮಂಡಳಿಯ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ.

ರಹಸ್ಯ ಮತಪತ್ರದ ಮೂಲಕ ಮತ ಚಲಾವಣೆ

ರಹಸ್ಯ ಮತಪತ್ರದ ಮೂಲಕ ಮತ ಚಲಾವಣೆ

ಯುಎನ್‌ಎಸ್‌ಸಿ ಚುನಾವಣೆಗಳು ಸಾಮಾನ್ಯ ಸಭೆಯ ಸಭಾಂಗಣದಲ್ಲಿ ನಡೆಯಲಿದ್ದು, 193 ಸದಸ್ಯ ರಾಷ್ಟ್ರಗಳಲ್ಲಿ ಪ್ರತಿಯೊಂದೂ ರಹಸ್ಯ ಮತಪತ್ರದಲ್ಲಿ ಮತ ಚಲಾಯಿಸುತ್ತದೆ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವಸಂಸ್ಥೆಯ ಧಾನ ಕಚೇರಿಯಲ್ಲಿ ಪ್ರಧಾನ ವ್ಯಕ್ತಿಗಳ ಸಭೆಗಳು ಜೂನ್ ಅಂತ್ಯದವರೆಗೆ ಮುಂದೂಡಲ್ಪಟ್ಟಿದ್ದವು.

ಖಾಯಂ ಸದಸ್ಯನಾಗಿ ಆಯ್ಕೆಯಾಗಿದ್ದು ಯಾವಾಗ?

ಖಾಯಂ ಸದಸ್ಯನಾಗಿ ಆಯ್ಕೆಯಾಗಿದ್ದು ಯಾವಾಗ?

ಈ ಹಿಂದೆ, ಭಾರತವು 1950-1951, 1967-1968, 1972-1973, 1977-1978, 1984-1985, 19911992- ಮತ್ತು ಇತ್ತೀಚೆಗೆ 20112012- ರಲ್ಲಿ ಪರಿಷತ್ತಿನ ಖಾಯಂ ಸದಸ್ಯನಾಗಿ ಆಯ್ಕೆಯಾಗಿತ್ತು.

ಭಾರತದ ಉಮೇದುವಾರಿಕೆ ಸರ್ವಾನುಮತದಿಂದ ಅಂಗೀಕಾರ

ಭಾರತದ ಉಮೇದುವಾರಿಕೆ ಸರ್ವಾನುಮತದಿಂದ ಅಂಗೀಕಾರ

ಕಳೆದ ವರ್ಷ ಜೂನ್‌ನಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 55 ಸದಸ್ಯರ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಸಮೂಹ ಭಾರತದ ಉಮೇದುವಾರಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು.ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಜಾರಿಯಲ್ಲಿರುವ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಂಡು ಹೊಸ ಮತದಾನ ವ್ಯವಸ್ಥೆಗಳ ಅಡಿಯಲ್ಲಿ ಭದ್ರತಾ ಮಂಡಳಿ ಚುನಾವಣೆಗಳನ್ನು ನಡೆಸುವ ನಿರ್ಧಾರವನ್ನು ಸಾಮಾನ್ಯ ಸಭೆ ಕಳೆದ ವಾರ ಅಂಗೀಕರಿಸಿತು.

ಭಾರತದ ದೃಷ್ಟಿಕೋನದಿಂದ, ಮತದಾನವನ್ನು ಹೇಗೆ ನಡೆಸಲಾಗುತ್ತದೆ ಎಂಬುದರಲ್ಲಿ ಯಾವುದೇ ಬದಲಾವಣೆಯು ಹೆಚ್ಚು ಪರಿಣಾಮ ಬೀರುವುದಿಲ್ಲ ಏಕೆಂದರೆ ಅದು ಏಷ್ಯಾ ಪೆಸಿಫಿಕ್ ವ್ಯಾಪ್ತಿಯಲ್ಲಿನ ಏಕೈಕ ಅಭ್ಯರ್ಥಿ ರಾಷ್ಟ್ರವಾಗಿರಲಿದೆ. ಅದರ ಅವಧಿ 2021ರಿಂದ ಪ್ರಾರಂಭಗೊಳ್ಳಲಿದೆ.

ಸ್ಪರ್ಧಿಸುವ ದೇಶಗಳು

ಸ್ಪರ್ಧಿಸುವ ದೇಶಗಳು

ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳ ವಿಭಾಗದಲ್ಲಿ ಕೆನಡಾ, ಐರ್ಲೆಂಡ್ ಮತ್ತು ನಾರ್ವೆ ಎರಡು ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ, ಒಂದು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಸ್ಥಾನಗಳಿಗೆ ಮೆಕ್ಸಿಕೊ ಏಕೈಕ ಅಭ್ಯರ್ಥಿಯಾಗಿದೆ ಮತ್ತು ಕೀನ್ಯಾ ಮತ್ತು ಜಿಬೌಟಿ ಆಫ್ರಿಕನ್ ಗುಂಪಿಗೆ ಲಭ್ಯವಿರುವ ಸ್ಥಾನಕ್ಕೆ ಸ್ಪರ್ಧಿಸಲಿವೆ.

English summary
The UN General Assembly has decided to hold elections for the five non-permanent members of the Security Council next month under the new voting arrangements due to the COVID-19 restrictions, with India assured a win being the sole contender for the Asia Pacific seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X