ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೋವಿಶೀಲ್ಡ್ ಲಸಿಕೆ ಪಡೆದಿದ್ದೇನೆ ಎಂದ ಅಬ್ದುಲ್ಲಾ ಶಾಹೀದ್

|
Google Oneindia Kannada News

ವಿಶ್ವಸಂಸ್ಥೆ, ಅಕ್ಟೋಬರ್ 02: ಭಾರತದ ಕೋವಿಶೀಲ್ಡ್ ಕೊರೊನಾ ಲಸಿಕೆಯನ್ನು ಪಡೆದಿರುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ತಿಳಿಸಿದ್ದಾರೆ.

ತಾವು ಭಾರತದಲ್ಲಿ ತಯಾರಾದ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಪಡೆದಿದ್ದೇನೆ ಎಂದು ಹೇಳಿದ್ದಾರೆ. ''ನಾನು ಕೋವಿಶೀಲ್ಡ್ ಪಡೆದಿದ್ದೇನೆ. ಭಾರತದಲ್ಲಿ ತಯಾರಾದ ಈ ಲಸಿಕೆ ಸ್ವೀಕಾರಾರ್ಹ ಅಥವಾ ಇಲ್ಲ ಎಂದು ಎಷ್ಟು ದೇಶಗಳು ಒಪ್ಪಿವೆ ಎಂದು ತಿಳಿದಿಲ್ಲ. ಹೆಚ್ಚಿನ ದೇಶಗಳಿಗೆ ಕೋವಿಶೀಲ್ಡ್ ತಲುಪಿದೆ ''ಎಂದು ತಿಳಿಸಿದ್ದಾರೆ.

ಟೀಕೆಗಳನ್ನು ಪ್ರಾಮಾಣಿಕವಾಗಿ ಸ್ವಾಗತಿಸುತ್ತೇನೆ ಆದರೆ...ಮೋದಿಟೀಕೆಗಳನ್ನು ಪ್ರಾಮಾಣಿಕವಾಗಿ ಸ್ವಾಗತಿಸುತ್ತೇನೆ ಆದರೆ...ಮೋದಿ

ಜಗತ್ತಿನಾದ್ಯಂತ ಇತರೆ ದೇಶಗಳಿಗೂ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿವೆ. ಬ್ರಿಟಷ್-ಸ್ವೀಡಿಷ್‌ನ ಔಷಧ ಕಂಪನಿ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ಭಾರತದಲ್ಲಿ ಪುಣೆ ಮೂಲದ ಸೀರಂ ಸಂಸ್ಥೆ ತಯಾರಿಸಿದೆ.

UN General Assembly President Abdulla Shahid Says I Got Indias Covishield Vaccine

ಭಾರತ ಸುಮಾರು 100 ದೇಶಗಳಿಗೆ 6.6 ಕೋಟಿ ಡೋಸ್ ಲಸಿಕೆಗಳನ್ನು ರಫ್ತು ಮಾಡಿದೆ. ಶಾಹಿದ್ ಅವರ ತಾಯ್ನಾಡು ಮಾಲ್ಡೀವ್ಸ್‌ಗೆ ಜನವರಿಯಲ್ಲಿ 1 ಲಕ್ಷ ಡೋಸ್ ಲಸಿಕೆ ರಫ್ತಾಗಿದ್ದು, ಇದು ಲಸಿಕೆ ಪಡೆದ ಮೊದಲ ರಾಷ್ಟ್ರವಾಗಿದೆ.

ಕೋವಿಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆ ಮಾನ್ಯತೆ ನೀಡಬೇಕೇ ಎಂಬ ಪ್ರಶ್ನೆಗೆ ಲಸಿಕೆ ಪಡೆದು ನಾನು ಬದುಕಿದ್ದೇನೆ. ಅನ್ಯರ ಬಗ್ಗೆ ತಿಳಿದಿಲ್ಲ. ಇದಕ್ಕೆ ವೈದ್ಯಕೀಯ ಪರಿಣಿತರು ಉತ್ತರಿಸಬೇಕು, ನಾನಲ್ಲ ಎಂದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 88.14 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಹೇಳಿದೆ.

ಈವರೆಗೆ ಕೇಂದ್ರವು ರಾಜ್ಯಗಳಿಗೆ 88.14 (88,14,50,515) ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು 5,28,28,050 ಕೋಟಿ ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್‌ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು.

ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 89,74,81,554 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ

English summary
President of the 76th session of the UN General Assembly Abdulla Shahid has said he had received the two doses of the Covishield vaccine manufactured in India, as have a "large portion" of other countries around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X