ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ: ವಿಶ್ವಸಂಸ್ಥೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 11: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಮಸ್ಯೆಯನ್ನೂ ಅವರೇ ಬಗೆಹರಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ಥಾನ ಹಾಗೂ ಭಾರತದ ನಡುವೆ ಪರಿಸ್ಥಿತಿ ಉಲ್ಭಣಿಸಿದೆ. ಯಾವುದೇ ಕಾರಣಕ್ಕೆ ಎರಡೂ ದೇಶದ ನಡುವೆ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಪಾಕ್ ಸೇನೆ ಮತ್ತು ಉಗ್ರರ ಸೀಕ್ರೆಟ್ ಕೋಡ್ಸ್ ಭೇದಿಸಿದ ಭಾರತಪಾಕ್ ಸೇನೆ ಮತ್ತು ಉಗ್ರರ ಸೀಕ್ರೆಟ್ ಕೋಡ್ಸ್ ಭೇದಿಸಿದ ಭಾರತ

ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗ ಸಭೆಯಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ.

UN chief Says India Pakistan To Resolve Through Dialogue

ಗುಟೆರೆಸ್ ಅವರ ಸಂದೇಶ ಎಲ್ಲರಿಗೂ ಒಂದೇ ಆಗಿದೆ. ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕಾಶ್ಮೀರ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಉಲ್ಭಣಗೊಳ್ಳಬಹುದಾದ ಪರಿಸ್ಥಿತಿಗಳ ಬಗ್ಗೆ ಅವರಿಗೆ ಆತಂಕವಿದೆ. ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದರು.

ಭಾರತ-ಪಾಕ್ ಗಡಿಗೆ ಇಮ್ರಾನ್ ಖಾನ್ ಭೇಟಿ ಹಿಂದಿರುವ ಕಾರಣವೇನು?ಭಾರತ-ಪಾಕ್ ಗಡಿಗೆ ಇಮ್ರಾನ್ ಖಾನ್ ಭೇಟಿ ಹಿಂದಿರುವ ಕಾರಣವೇನು?

ಸೆಪ್ಟೆಂಬರ್ ಅಂತ್ಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು ಅದರಲ್ಲಿ ಕಾಶ್ಮೀರ ವಿಚಾರವಾಗಿ ಎರಡು ದೇಶಗಳ ಮಧ್ಯೆ ಗುಟೆರೆಸ್ ಮಧ್ಯ ಪ್ರವೇಶಿಸುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಗೆ ವಕ್ತಾರರು ಈ ರೀತಿ ಉತ್ತರಿಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಲಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಎಂದು ಮನವಿ ಮಾಡಿ ಕಳೆದ ಸೋಮವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಲೊಧಿ ಗುಟೆರೆಸ್ ಅವರನ್ನು ಭೇಟಿ ಮಾಡಿದ್ದರು.

English summary
UN chief Says India Pakistan To Resolve Through Dialogue,remains very concerned about any potential escalation between the two countries over Kashmir and appeals to both sides to deal with the issue through dialogue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X