ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ರಾಯಭಾರಿ ಸ್ಥಾನಕ್ಕೆ ನಿಕ್ಕಿ ಹಾಲೆ ರಾಜೀನಾಮೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 09: ವಿಶ್ವಸಂಸ್ಥೆಗೆ ಯುಎಸ್ ರಾಯಭಾರಿ ನಿಕ್ಕಿ ಹಾಲೆ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ನೇರವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಳಿಸಿದ್ದಾರೆ.

ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿಕ್ಕಿ ಅವರ ರಾಜೀನಾಮೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಆದರೆ, ಟ್ರಂಪ್ ಅವರು ನಿಕ್ಕಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.

ನನ್ನ ತಂದೆ-ತಾಯಿ ಭಾರತೀಯರು ಎನ್ನಲು ಹೆಮ್ಮೆಯಾಗುತ್ತದೆ: ಹಾಲೆನನ್ನ ತಂದೆ-ತಾಯಿ ಭಾರತೀಯರು ಎನ್ನಲು ಹೆಮ್ಮೆಯಾಗುತ್ತದೆ: ಹಾಲೆ

ದಕ್ಷಿಣ ಕರೋಲಿನಾದ ರಾಜ್ಯಪಾಲರಾಗಿದ್ದ ನಿಕ್ಕಿ ಹಾಲೆ ಅವರು ಟ್ರಂಪ್ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ, ವಿಶ್ವಸಂಸ್ಥೆಗೆ ರಾಯಭಾರಿಯಾಗಿ ನೇಮಕಗೊಂಡಿದ್ದ ನಿಕ್ಕಿ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿ ರಷ್ಯಾ ಮೇಲಿನ ನಿರ್ಬಂಧ ಹೇರುವ ಬಗ್ಗೆ ತೆಗೆದುಕೊಂಡ ನಿರ್ಧಾರದಿಂದ ಟ್ರಂಪ್ ಜತೆ ಮೈಮನಸ್ಯ ಉಂಟಾಗಿತ್ತು.

UN Ambassador Nikki Haley resigns

ಟ್ರಂಪ್ ಭವಿ‍ಷ್ಯ: ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆಟ್ರಂಪ್ ಭವಿ‍ಷ್ಯ: ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆ

ದಕ್ಷಿಣ ಕರೋಲಿನಾದ 116ನೇ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದ್ದ ನಿಕ್ಕಿ ಅವರು, ಈ ಹುದ್ದೆಗೇರಿದ ಎರಡನೇ ಇಂಡೋ ಅಮೆರಿಕನ್ ಎನಿಸಿದ್ದಾರೆ. ಬಾಬ್ಬಿ ಜಿಂದಾಲ್ ನಂತರ ಭಾರತೀಯ ಮೂಲದ ಅಮೆರಿಕನ್ ಆಗಿ ನಿಕ್ಕಿ ಅವರು ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಟ್ರಂಪ್- ನಿಕ್ಕಿ ಹಾಲೆ ಸಂಬಂಧದ ಬಗ್ಗೆ ಕಲರ್ ಕಥೆ ಹೇಳಿದ ವುಲ್ಫ್ಟ್ರಂಪ್- ನಿಕ್ಕಿ ಹಾಲೆ ಸಂಬಂಧದ ಬಗ್ಗೆ ಕಲರ್ ಕಥೆ ಹೇಳಿದ ವುಲ್ಫ್

ನಿಕ್ಕಿ ಅವರನ್ನು ವಿಶ್ವಸಂಸ್ಥೆ ರಾಯಭಾರಿಯಾಗಿ ನೇಮಿಸುವ ಸಂಬಂಧ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ನವೆಂಬರ್ 23, 2016ರಂದು ನಿರ್ಧಾರ ಪ್ರಕಟಿಸಿದರು. ಜನವರಿ 20, 2017ರಂದು ಈ ಹುದ್ದೆಗೇರಿದ ನಿಕ್ಕಿಗೆ ಮೊದಲಿಗೆ ಸೆಕ್ರೆಟರಿ ಆಫ್ ದಿ ಸ್ಟೇಟ್ ಹುದ್ದೆಯ ಆಫರ್ ನೀಡಲಾಗಿತ್ತು.

English summary
US Ambassador to the United Nations Nikki Haley resigned Tuesday directly to President Donald Trump, according to multiple sources familiar with her decision. A senior State Department official said Haley told her staff this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X