ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ನಮ್ಮ ಸೇನೆ ಸಂಘರ್ಷಕ್ಕೆ ಇಳಿಯಲ್ಲ: ಜೋ ಬೈಡೆನ್‌

|
Google Oneindia Kannada News

ವಾಷಿಂಗ್ಟನ್‌, ಫೆಬ್ರವರಿ 24: ರಷ್ಯಾ ಹಾಗೂ ಉಕ್ರೇನ್‌ ನಡುವೆ ಪ್ರಸ್ತುತ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಖಂಡನೆ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಷ್ಯಾ ವಿರುದ್ಧ ನಿರ್ಬಂಧ, ರಫ್ತು ನಿಯಂತ್ರಣ ಘೋಷಿಸಿದ್ದಾರೆ. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಲಿದೆ ಎಂದು ಹೇಳಿದ್ದಾರೆ.

ನಮ್ಮ ಪಡೆಗಳು ಉಕ್ರೇನ್‌ನಲ್ಲಿ ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ಮತ್ತು ತೊಡಗಲ್ಲ ಎಂದು ಕೂಡಾ ಈ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದ್ದಾರೆ. "ನಾನು ಅದನ್ನು ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಪಡೆಗಳು ಉಕ್ರೇನ್‌ನಲ್ಲಿ ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ರಷ್ಯಾದೊಂದಿಗೆ ಸಂಘರ್ಷದಲ್ಲಿ ನಮ್ಮ ಪಡೆ ತೊಡಗಲ್ಲ," ಎಂದು ಕೂಡಾ ತಿಳಿಸಿದ್ದಾರೆ.

ಉ‌ಕ್ರೇನ್‌ ಮೇಲಿನ ರಷ್ಯಾ ದಾಳಿಯು "ಪ್ರಚೋದಿತವಲ್ಲದ ಮತ್ತು ನ್ಯಾಯಸಮ್ಮತವಲ್ಲದ" ದಾಳಿ ಎಂದ ಜೋ ಬೈಡೆನ್‌ ಮಾಸ್ಕೋ ತನ್ನ ನೆರೆಹೊರೆಯ ಮೇಲೆ ದೀರ್ಘ-ನಿರೀಕ್ಷಿತ ಆಕ್ರಮಣವನ್ನು ಪ್ರಾರಂಭಿಸಿದಾಗ ಅದನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

Ukraine-Russia War: Biden Announces Sanctions and Export Controls Against Russia

ರಫ್ತು ನಿಯಂತ್ರಣಗಳು ರಷ್ಯಾದ ಹೈಟೆಕ್ ಆಮದುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಕಡಿತಗೊಳಿಸುತ್ತವೆ. ರಷ್ಯಾದ ಸೈಬರ್ ದಾಳಿಗೆ ಪ್ರತಿಕ್ರಿಯಿಸಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆಯನ್ನು ಕೂಡಾ ಜೋ ಬೈಡೆನ್‌ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರಮಣಕಾರಿ. ಪುಟಿನ್ ಈ ಯುದ್ಧವನ್ನು ಆರಿಸಿಕೊಂಡಿದ್ದರಿಂದ ಅವರು, ಅವರ ದೇಶ ಎರಡೂ ಪರಿಣಾಮವನ್ನು ಎದುರಿಸುತ್ತದೆ. ವಿಟಿಬಿ ಸೇರಿದಂತೆ ಇನ್ನೂ 4 ರಷ್ಯಾದ ಬ್ಯಾಂಕ್‌ಗಳ ಮೇಲೆ ನಿರ್ಬಂಧವನ್ನು ಹೇರಲಾಗುತ್ತದೆ ಎಂದು ಜೋ ಬೈಡೆನ್‌ ತಿಳಿಸಿದ್ದಾರೆ.

ನ್ಯಾಟೋ ಸದಸ್ಯ ಲಿಥುವೇನಿಯಾ ಅರ್ಟಕಲ್ 4 ಅನ್ನು ಬಳಸುವುದಾಗಿ ಘೋಷಿಸಿದೆ. ಈ ದೇಶವು ಬೆಲಾರಸ್‌ನ ಗಡಿಯನ್ನು ಹೊಂದಿದೆ, ಅಲ್ಲಿ ರಷ್ಯಾದ ಪಡೆಗಳು ನೆಲೆಗೊಂಡಿವೆ. ಎಸ್ಟೋನಿಯಾ, ಲಾಟ್ವಿಯಾ, ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ ಮತ್ತು ರೊಮೇನಿಯಾದಂತೆಯೇ, ಬಾಲ್ಟಿಕ್ ರಾಜ್ಯವು ನ್ಯಾಟೋ ದ ಭಾಗವಾಗಿದೆ. ಸದಸ್ಯ ರಾಷ್ಟ್ರಗಳಲ್ಲಿ ಒಂದನ್ನು ಆಕ್ರಮಣ ಮಾಡಿದರೆ ಸಂಪೂರ್ಣ ಮೈತ್ರಿಯಿಂದ ಮಿಲಿಟರಿ ಸಹಾಯವನ್ನು ನೀಡುತ್ತದೆ. ರಷ್ಯಾದ ವಿರುದ್ಧ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಜಿ7 ರಾಷ್ಟಗಳು ಒಗ್ಗಟ್ಟಾಗಿ ನಿಂತಿವೆ.

English summary
Ukraine-Russia War: America President Joe Biden condemned Russia’s attack on Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X