• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!

By ಅನಿಕೇತ್
|

ವಾಷಿಂಗ್ಟನ್, ಆ.6: ಚೀನಾ ನೆರೆ ರಾಷ್ಟ್ರಗಳ ಜೊತೆ ಗಡಿ ಕಿರಿಕ್ ಮಾಡುತ್ತಿರುವಾಗಲೇ, ಅಮೆರಿಕ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾಗಿದೆ. ಭಾರತದ ಜೊತೆ ಗಡಿ ಕ್ಯಾತೆ ತೆಗೆದಂತೆ ತೈವಾನ್ ಜೊತೆಗೂ ಚೀನಾ ಕಿರಿಕಿರಿ ಮಾಡಿಕೊಂಡಿದೆ‌. ಈ ಹಂತದಲ್ಲೇ ಅಮೆರಿಕದ ಆರೋಗ್ಯ ಕಾರ್ಯದರ್ಶಿ ಅಲೆಕ್ಸ್ ಆಝರ್ ನೇತೃತ್ವದ ನಿಯೋಗವೊಂದು ತೈವಾನ್ ಭೇಟಿಗೆ ಸಿದ್ಧವಾಗಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಇಲ್ಲಿ ಗಮನಿಸಲೇಬೇಕಾದ ಅಂಶವೊಂದಿದೆ. ಅದೇನೆಂದರೆ ತೈವಾನ್ ನಮ್ಮದು ಎಂದು ಚೀನಾ ಹಲವು ಬಾರಿ ಪ್ರತಿಪಾದಿಸುತ್ತಾ ಬಂದಿದೆ. ಹೀಗಾಗಿ ದ್ವೀಪರಾಷ್ಟ್ರ ತೈವಾನ್‌ನ ಮುಂದೆ ಎಂದಾದರೂ ವಶಕ್ಕೆ ಪಡೆಯುವುದಾಗಿ ಚೀನಾ ಬಾಯಿ ಬಡಿದುಕೊಳ್ಳುತ್ತಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿರುವ ಈ ಸಂದರ್ಭದಲ್ಲೇ ಅಮೆರಿಕದ ಸಚಿವ ಸಂಪುಟದ ಸದಸ್ಯರ ನೇತೃತ್ವದಲ್ಲಿ ನಿಯೋಗವೊಂದು ತೈವಾನ್‌ಗೆ ತೆರಳುತ್ತಿದೆ.

ಚೀನಾ ಅಯೋಮಯ: ಹಾಂಗ್ ಕಾಂಗ್ ತೊರೆದವರಿಗೆ ತೈವಾನ್ ನಲ್ಲಿ ಆಶ್ರಯ!

ಇದನ್ನು ಕೇಳಿಯೇ ಕೆರಳಿ ಕೆಂಡವಾಗಿರುವ ನರಿಬುದ್ಧಿ ಚೀನಾ, ಅಮೆರಿಕದ ನಾಯಕರಿಗೆ ವಾರ್ನಿಂಗ್ ಕೊಟ್ಟಿದೆ. ಅಮೆರಿಕ-ಚೀನಾ ಸಂಬಂಧ ಹಿಂದೆಂದೂ ಕಾಣದಷ್ಟು ಹಳಸಿದೆ. ಈ ಸಮಯದಲ್ಲೇ ಇಂತಹ ಘಟನೆ ನಡೆಯುತ್ತಿರುವುದು ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ ಅಂತಾ 'ವಿಶ್ವದ ದೊಡ್ಡಣ್ಣ'ನಿಗೆ ಬೀಜಿಂಗ್ ವಾರ್ನಿಂಗ್ ಕೊಟ್ಟಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

 ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಇದು ಕೆಲ ವಾರಗಳ ಹಿಂದಿನ ಘಟನೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಸಮರಾಭ್ಯಾಸದ ಬಗ್ಗೆ ಹೇಳಿಕೆ ನೀಡಿದ್ದ ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್, ನಾವು ನಮ್ಮ ದೇಶವನ್ನು ರಕ್ಷಿಸುವಲ್ಲಿ ಸಮರ್ಥರಾಗಿದ್ದೇವೆ ಎಂದಿದ್ದರು. ಚೀನಾ ನಮ್ಮನ್ನು ಏನೂ ಮಾಡೋಕೆ ಆಗಲ್ಲ ಅಂತಾ ಪರೋಕ್ಷವಾಗಿ ಸಂದೇಶ ಕೊಟ್ಟಿದ್ದರು.

ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!

 ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ. ಕೇವಲ 160 ಕಿ.ಮೀ. ಭೂಪ್ರದೇಶ ಹೊಂದಿರುವ ತೈವಾನ್'ನ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್'ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಆದರೆ ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. ಕೇವಲ 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು.

 ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ, ಚಿಯಾಂಗ್ ಪಡೆಯನ್ನು ಹೊರದಬ್ಬಿತು. ಬೆಂಬಲಿಗರೊಂದಿಗೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾದ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ ‘ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಹಾಗೂ ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!

 ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಸಾಮ್ರಾಜ್ಯಶಾಹಿ ಚೀನಾ ಕೈಕೆಳಗೆ ನರಳಿ, ನರಳಿ ಬದುಕಬೇಕಾಗಿತ್ತು. ಆದರೆ ತೈವಾನ್‌ನ ‘ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. ಹಾಗೂ 1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಟೆಂಗ್ ಹೂಯಿ ಗೆದ್ದು ಬೀಗಿದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು. ಇದಾದ ಬಳಿಕ ಚೀನಾ ಸರ್ಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್' ಲೀ ಸಾವಿನ ಬಗ್ಗೆ ಅಹಿತಕರವಾದ ವರದಿ ಪ್ರಕಟ ಮಾಡಿತ್ತು. ಇಷ್ಟೆಲ್ಲಾ ಘಟನೆಗಳು ನಡೆದು 1 ತಿಂಗಳು ಕಳೆಯುವ ಹೊತ್ತಿಗೆ ತೈವಾನ್‌ಗೆ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡುತ್ತಿರುವುದು ಸಹಜವಾಗಿಯೇ ತೀವ್ರ ಕುತೂಹಲ ಕೆರಳಿಸಿದೆ.

ಮೋದಿ ಕನಸಿನ ಸ್ಮಾರ್ಟ್ ಸಿಟಿ ಯೋಜನೆ ನಿಟ್ಟಿನಲ್ಲಿ 'ಸ್ಮಾರ್ಟ್ ಏಷ್ಯಾ'

English summary
U.S. Health and Human Services Secretary Alex Azar will travel this month to Taiwan. The trip marks the highest-level visit to Taiwan by a Cabinet secretary since 1979.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X