ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ದುರಂತದಲ್ಲಿ ಸಾವು

|
Google Oneindia Kannada News

ನ್ಯೂಜರ್ಸಿ, ನವೆಂಬರ್ 13: ಕಳೆದ ಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿ ವಾಪಸ್ ಆಗಿದ್ದ ಗಗನಯಾತ್ರಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಳೆದ ತಿಂಗಳು ಗಗನಯಾತ್ರಿ ವಿಲಿಯಂ ಶಾಟ್ನರ್​ (William Shatner) ಅವರೊಂದಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ವ್ಯಕ್ತಿಯೊಬ್ಬರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.

Space

ಡಿ ವ್ರೈಸ್ ಅವರು ಖಾಸಗಿ ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆಗೆ ಫಿಶರ್, ವಿಮಾನ ಶಾಲೆಯೊಂದರ ಮಾಲೀಕರಾಗಿದ್ದರು. ಈ ಇಬ್ಬರೂ ಪ್ರಯಾಣಿಸುತ್ತಿದ್ದ ಲಘು ವಿಮಾನ ಉತ್ತರ ನ್ಯೂಜೆರ್ಸಿಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.

ಭಾರತೀಯನ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯಾತ್ರೆಭಾರತೀಯನ ನೇತೃತ್ವದಲ್ಲಿ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯಾತ್ರೆ

ಒಂದು ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ನ್ಯೂಯಾರ್ಕ್ ನಗರದ ಗ್ಲೆನ್ ಎಂ. ಡಿ ವ್ರೈಸ್ (Glen M. de Vries) (49) ಮತ್ತು ಹೊಪಾಟ್‌ಕಾಂಗ್‌ನ ಥಾಮಸ್ ಪಿ. ಫಿಶರ್ (Thomas P. Fischer) (54) ಲಘು ವಿಮಾನ (small plane) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ಹಾರಿದ ನಾಲ್ವರು ಗಗನಯಾತ್ರಿಗಳು:ಭಾರತ ಮೂಲದ ಗಗನಯಾತ್ರಿ ರಾಜ ಚಾರಿ ನೇತೃತ್ವದ ಕ್ರ್ಯೂ 3 ಮಿಷನ್‌ ಅಲ್ಲಿ ಪೈಲಟ್‌ಗಳಾದ ಟಾಮ್ ಮಾಷ್ಬರ್,ಕೈಲಾ ಬ್ಯಾರನ್, ಮಥಿಯಾಸ್ ಮೌರರ್ ಇದ್ದಾರೆ.

ಬಾಹ್ಯಾಕಾಶದಲ್ಲಿ 6 ತಿಂಗಳ ಕಾರ್ಯಾಚರಣೆಗೆ ಈ ನಾಲ್ವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ.

2022ರ ಏಪ್ರಿಲ್ ಕೊನೆಯವರೆಗೂ ಈ ಗಗನಯಾತ್ರಿಗಳು ಅಲ್ಲೇ ಅಧ್ಯಯನ ನಡೆಸಲಿದ್ದಾರೆ.ನಾಸಾ ಹಾಗೂ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಈ ನಾಲ್ವರು ಗಗನಯಾತ್ರಿಗಳ ಬಾಹ್ಯಾಕಾಶಯಾತ್ರೆ ಮಾಡಿಸುತ್ತಿದೆ.

ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ರಾತ್ರಿ ಉಡಾವಣೆಯಾಗಿದೆ. ಈ ಯೋಜನೆಯು ಕೊರೊನಾ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು.

ಅಮೆರಿಕದ ಕಾಲಮಾನ ಸಂಜೆ 6.32ರ ಹೊತ್ತಿಗೆ ರಾಜ ಚಾರಿ ನೇತೃತ್ವದ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಬಂದು ತಲುಪಿದ್ದಾರೆ. ಬುಧವಾರ ರಾತ್ರಿ 9 ಗಂಟೆ 3 ನಿಮಿಷಕ್ಕೆ ರಾಕೆಟ್ ಉಡಾವಣೆಯಾಗಿದೆ.

ಸ್ಪೇಸ್‌ಎಕ್ಸ್‌ನ ರಾಕೆಟ್‌ನಲ್ಲಿ ಬಾಹ್ಯಾಕಾಶ ಸಿಬ್ಬಂದಿಯ ಜತೆಗೆ ಸುಮಾರು 180 ಕೆಜಿಯಷ್ಟು ವಸ್ತುಗಳು, ಹಾರ್ಡ್‌ವೇರ್ ಅನ್ನೂ ಕೊಂಡೊಯ್ಯಲಾಗಿದೆ.

ನಾಸಾದ ಚಂದ್ರ ಹಾಗೂ ಮಂಗಳನ ಸಂಶೋಧನೆಗೆ ಪೂರಕವಾಗಿ ಆರು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ನಾಲ್ವರು ಗಗನಯಾತ್ರಿಗಳು ಅಧ್ಯಯನ ನಡೆಸಿ ಪೂರಕ ಸಂಶೋಧನಾ ದಾಖಲೆಗಳನ್ನು ನಾಸಾಗೆ ರವಾನಿಸಲಿದ್ದಾರೆ.

ಸ್ಪೇಸ್‌ಎಕ್ಸ್ ತನ್ನ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಕೆಟ್ಟ ಹವಾಮಾನ ಸೇರಿದಂತೆ ವಿವಿಧ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿದ್ದ ಕಾರ್ಯಾಚರಣೆ ಬುಧವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಗಗನಯಾನ:ಉದ್ಯಮಿ ರಿಚರ್ಡ್‌ ಬ್ರಾನ್ಸನ್‌ ತಮ್ಮ ವರ್ಜಿನ್‌ ಗ್ಯಾಲಾಕ್ಟಿಕ್‌ ನೌಕೆಯ ಮೂಲಕ ಬಾಹ್ಯಾಕಾಶ ಯಾನ ಮಾಡಿ ಬಂದ ಬೆನ್ನಲ್ಲೇ, ವಿಶ್ವದ ಶ್ರೀಮಂತ ವ್ಯಕ್ತಿ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಮೊಟ್ಟಮೊದಲ ಬಾಹ್ಯಾಕಾಶ ಯಾನಕ್ಕೆ ಮುನ್ನುಡಿ ಬರೆದಿದ್ದರು. ಇದು ರಾಕೆಟ್‌ ಮೂಲಕ ವಾಣಿಜ್ಯ ಉದ್ದೇಶದಿಂದ ಬಾಹ್ಯಾಕಾಶಕ್ಕೆ ಕೈಗೊಳ್ಳುತ್ತಿರುವ ಮೊದಲ ಉಡ್ಡಯನವಾಗಿತ್ತು.

ಅತಿ ಹಿರಿಯ, ಕಿರಿಯ, ಶ್ರೀಮಂತರ ಪ್ರಯಾಣ: ಈ ಬಾಹ್ಯಾಕಾಶ ಯಾನದಲ್ಲಿ ಜೆಫ್‌ ಜೆಜೋಸ್‌ ಜೊತೆ 82 ವರ್ಷದ ಮಾಜಿ ಪೈಲಟ್‌ ವ್ಯಾಲಿ ಫಂಕ್‌ ಹಾಗೂ 18 ವರ್ಷದ ಡಚ್‌ ಎಂಜಿನೀಯರ್‌ವೊಬ್ಬ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ಮೂಲಕ ಅತಿ ಹಿರಿಯ ವ್ಯಕ್ತಿ ಮತ್ತು ಅತಿ ಕಿರಿಯ ವ್ಯಕ್ತಿ ಏಕಕಾಲದಲ್ಲಿ ಬ್ಯಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ದಾಖಲೆಗೆ ಪಾತ್ರರಾಗಿದ್ದರು.

ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾವೊಂದರ ಚಿತ್ರೀಕರಣಕ್ಕೆ ರೋಸ್ಕೋಸ್ಮೀಸ್ ಅನುಮತಿ ನೀಡಿದೆ. ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ.

ಮುಖ್ಯ ಮತ್ತು ಬ್ಯಾಕಪ್ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ರೋಸ್ಕೋಸ್ಮೋಸ್ ಮತ್ತು ರಷ್ಯಾದ ಚಾನೆಲ್ ಒನ್ ಕಳೆದ ನವೆಂಬರ್‌ನಲ್ಲಿ ಬಾಹ್ಯಾಕಾಶದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತು.

ನಟಿ ಯೂಲಿಯಾ ಪೆರೆಸಿಲ್ಡ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ನಾಳೆ ಅ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು. ಅಕ್ಟೋಬರ್ 17ಕ್ಕೆ ವಾಪಸಾಗಿದ್ದರು.

English summary
Medical research software mogul Glen de Vries, who flew to space last month with actor William Shatner aboard a rocketship operated by Jeff Bezos' Blue Origin, died in a small plane crash in New Jersey, state police said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X