ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃಗಾಲಯದ ಎರಡು ಗೊರಿಲ್ಲಾಗಳಿಗೂ ಕೋವಿಡ್-19 ಸೋಂಕು

|
Google Oneindia Kannada News

ವಾಷಿಂಗ್ಟನ್, ಜನವರಿ 12: ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಮೃಗಾಲಯದಲ್ಲಿನ ಕನಿಷ್ಠ ಎರಡು ಗೊರಿಲ್ಲಾಗಳಲ್ಲಿ ಕೂಡ ಕೋವಿಡ್ 19 ಇರುವುದು ದೃಢಪಟ್ಟಿದೆ.

ಮೃಗಾಲಯದಲ್ಲಿನ ಮೂರು ಪ್ರಾಣಿಗಳಲ್ಲಿ ವೈರಸ್ ತಗುಲಿರುವ ಲಕ್ಷಣಗಳು ಕಾಣಿಸುತ್ತಿವೆ. ಲಕ್ಷಣರಹಿತ ಸಿಬ್ಬಂದಿಯ ಮೂಲಕ ಈ ಪ್ರಾಣಿಗಳಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಗವರ್ನರ್ ಗ್ಯಾವಿನ್ ನ್ಯೂಸಮ್ ತಿಳಿಸಿದ್ದಾರೆ.

ಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಗೊರಿಲ್ಲಾಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಇದು ಮೊದಲ ನಿದರ್ಶನ ಎನ್ನಲಾಗಿದೆ. ಹುಲಿ ಸೇರಿದಂತೆ ಇತರೆ ಪ್ರಾಣಿಗಳಿಗೆ ಸೋಂಕು ಹರಡಿರುವುದು ಹಿಂದಿನ ಸಂಶೋಧನೆಗಳಲ್ಲಿ ದೃಢಪಟ್ಟಿತ್ತು. ಗೊರಿಲ್ಲಾಗಳು ಒಂದು ಕುಟುಂಬದಂತೆ ವಾಸಿಸುತ್ತವೆ. ಹೀಗಾಗಿ ಅವುಗಳ ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

 Two Gorillas At US Zoo Test Positive For Covid-19 At San Diego

ಕಳೆದ ಬುಧವಾರ ಮೃಗಾಲಯದ ಎರಡು ಗೊರಿಲ್ಲಾಗಳಲ್ಲಿ ಕೆಮ್ಮು ಕಾಣಿಸಿಕೊಂಡಿತ್ತು. ಶುಕ್ರವಾರ ಈ ಗುಂಪಿನ ಗೊರಿಲ್ಲಾಗಳಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯ ಬಳಿಕ ವೈರಸ್ ಇರುವುದು ಪತ್ತೆಯಾಗಿತ್ತು. ಅಮೆರಿಕದ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಲ್ಯಾಬೊರೇಟರಿ ಸೋಮವಾರ ಪಾಸಿಟಿವ್ ಫಲಿತಾಂಶವನ್ನು ದೃಢಪಡಿಸಿದೆ.

ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!

ಗೊರಿಲ್ಲಾಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮನುಷ್ಯರಂತೆಯೇ ಇವುಗಳಲ್ಲಿಯೂ ಯಾವುದೇ ಗಂಭೀರ ಲಕ್ಷಣಗಳು ಉಂಟಾಗುತ್ತದೆಯೇ ಎನ್ನುವುದು ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
At least two Gorillas test positive for Covid-19 at San Diego's Safari Park on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X