ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಸೋಲೊಪ್ಪಿಕೊಳ್ಳದಿದ್ದರೂ ಬೈಡನ್‌ಗೆ 'ಟ್ವಿಟ್ಟರ್' ಅಧಿಕಾರ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 21: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದು ಮೂರು ವಾರಗಳಾಗುತ್ತಾ ಬಂದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲು ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ. ಚುನಾವಣೆಯಲ್ಲಿ ವಂಚನೆ ನಡೆದಿದ್ದು, ವಾಸ್ತವವಾಗಿ ತಾವೇ ಗೆದ್ದಿರುವುದು ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಜನವರಿ 20ರಂದು ಟ್ರಂಪ್ ಅವರು ಯಾವುದೆ ತಕರಾರು ಮಾಡದೆ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿದು ಶ್ವೇತಭವನದಿಂದ ನಿರ್ಗಮಿಸಲಿದ್ದಾರೆ ಎಂಬ ಬಗ್ಗೆ ಅನುಮಾನ ಉಂಟಾಗಿದೆ.

ಟ್ರಂಪ್ ಅಧಿಕಾರ ತ್ಯಜಿಸಲಿ, ತ್ಯಜಿಸದೆ ಇರಲಿ, ಜೋ ಬೈಡನ್ ಅವರು ಉದ್ಘಾಟನಾ ದಿನದಂದು ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಅಮೆರಿಕ ಅಧ್ಯಕ್ಷರ ಅಧಿಕೃತ ಟ್ವಿಟ್ಟರ್ ಖಾತೆ ಮಾಲೀಕತ್ವವನ್ನು ಬೈಡನ್ ಅವರಿಗೆ ಹಸ್ತಾಂತರಿಸುವುದಾಗಿ ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

ಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕಜಿಲ್ ಬೈಡನ್ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ ನೇಮಕ

'2021ರ ಜನವರಿ 20ರಂದು ಶ್ವೇತ ಭವನ ಸಾಂಸ್ಥಿಕ ಟ್ವಿಟ್ಟರ್ ಖಾತೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಬೆಂಬಲಿಸಲು ಟ್ವಿಟ್ಟರ್ ಸಕ್ರಿಯವಾಗಿ ಸಿದ್ಧತೆ ನಡೆಸಿದೆ. 2017ರಲ್ಲಿ ಅಧ್ಯಕ್ಷೀಯ ಅಧಿಕಾರ ಹಸ್ತಾಂತರದಲ್ಲಿ ನಾವು ಮಾಡಿದ್ದಂತೆಯೇ ನ್ಯಾಷನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್ ಜತೆಗೆ ಸಮಾಲೋಚನೆಯೊಂದಿಗೆ ಈ ಪ್ರಕ್ರಿಯೆ ನಡೆಸಲಾಗುವುದು' ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.

Twitter Will Move Owenership Of US President Account To Biden Even Trump Doesnt Concede

ಇತರೆ ಅಧ್ಯಕ್ಷೀಯ ಖಾತೆಗಳಾದ @ವೈಟ್ ಹೌಸ್, @ವಿಪಿ ಮತ್ತು @ಫ್ಲೋಟಸ್ ಕೂಡ ತಮ್ಮ ಮಾಲೀಕತ್ವ ಬದಲಿಸಿಕೊಳ್ಳಲಿದ್ದು, ಬೈಡನ್ ಅವರ ಹೊಸ ಆಡಳಿತದ ಪದಾಧಿಕಾರಿಗಳಿಗೆ ಲಭ್ಯವಾಗಲಿವೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳದೆ ಹೋದರೂ ಅಮೆರಿಕ ಅಧ್ಯಕ್ಷ ಖಾತೆಯನ್ನು ಬೈಡನ್ ಅವರಿಗೆ ನೀಡಲಾಗುವುದು.

ಜಾರ್ಜಿಯಾ ಮರು ಎಣಿಕೆಯಲ್ಲಿಯೂ ಬೈಡನ್‌ಗೆ ಜಯಜಾರ್ಜಿಯಾ ಮರು ಎಣಿಕೆಯಲ್ಲಿಯೂ ಬೈಡನ್‌ಗೆ ಜಯ

Recommended Video

ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

ಅಮೆರಿಕ ಅಧ್ಯಕ್ಷರಿಗಾಗಿ ಇರುವ @POTUS ಖಾತೆಯನ್ನು ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರ ಹೆಸರಿನಲ್ಲಿ ಬಳಸಲಾಗುತ್ತಿದೆ. ಇದರ ಜತೆಗೆ ಡೊನಾಲ್ಡ್ ಟ್ರಂಪ್ ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆ ಹೊಂದಿದ್ದಾರೆ.

English summary
Twitter said, it will move the ownership of the US President account to Joe Biden on January 20, even if Trump doesn't concede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X