ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಹಿಂಬಾಲಕರಿಲ್ಲದೆ ಜೋ ಬೈಡನ್ ತೆಕ್ಕೆಗೆ @POTUS ಖಾತೆ

|
Google Oneindia Kannada News

ವಾಷಿಂಗ್ಟನ್, ಜನವರಿ 21: ಅಮೆರಿಕದಲ್ಲಿ ಹೊಸ ಅಧ್ಯಕ್ಷ ಜೋಸೆಫ್ ಬೈಡನ್ ಅವರ ಆಡಳಿತ ಅವಧಿ ಆರಂಭವಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಟ್ರಂಪ್ ಹಿಂಬಾಲಕರನ್ನು ಬದಲಾಯಿಸಿ ಹೊಸಬರ ನೇಮಕವಾಗುತ್ತಿದೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಧ್ಯಕ್ಷರು ಬಳಸುವ ಸಾಮಾಜಿಕ ಜಾಲ ತಾಣಗಳು ಬದಲಾಗಿವೆ.

ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್

President of the United States(@POTUS) ಖಾತೆಯಲ್ಲಿ ಹಿಂಬಾಲಕರ ಸಂಖ್ಯೆ ಸೊನ್ನೆಗೆ ಇಳಿಸಿ ನಂತರ ನೂತನ ಅಧ್ಯಕ್ಷ ಬೈಡನ್ ಅವರಿಗೆ ಟ್ವಿಟ್ಟರ್ ನೀಡಿದೆ. ಇದಕ್ಕೂ ಮುನ್ನ ಶ್ವೇತಭವನದ ಖಾತೆ ಕೂಡಾ ಇದೇ ರೀತಿ ಮಾಡಲಾಗಿತ್ತು. ಅಂದರೆ, ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರ ಖಾತೆ (@POTUS) ಬಳಸುವಾಗ ಇದ್ದ ಸುಮಾರು 33.3 ಮಿಲಿಯನ್ ಹಿಂಬಾಲಕರನ್ನು ಹೊಸ ಅಧ್ಯಕ್ಷ ಬೈಡನ್ ಪಡೆದುಕೊಂಡಿಲ್ಲ. ಹೊಸದಾಗಿ ಎಲ್ಲರನ್ನು ಹಿಂಬಾಲಿಸುತ್ತಿದ್ದು, ಹೊಸದಾಗಿ ಹಿಂಬಾಲಕರನ್ನು ಪಡೆದುಕೊಳ್ಳುತ್ತಿದ್ದಾರೆ.

'ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ವಿಚಾರ ಬಂದಾಗ ವ್ಯರ್ಥ ಮಾಡಲು ಸಮಯವೇ ನಮ್ಮ ಬಳಿ ಇಲ್ಲ..... ಎಂದು ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ ಜೋ ಬೈಡನ್ ಮೊದಲ ಟ್ವೀಟ್ ಮಾಡಿದ್ದಾರೆ. ನಂತರ ಪ್ಯಾರೀಸ್ ಹವಾಮಾನ ಒಪ್ಪಂದದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Twitter transfers @POTUS account to US President Joe Biden

ಅಮೆರಿಕವನ್ನು ಮತ್ತೆ ಸಮಸ್ಥಿತಿಗೆ ತರಲು ಎಲ್ಲರ ನೆರವು ಅಗತ್ಯ, ಮಾಸ್ಕ್ ಧರಿಸುವುದು ಕಾನೂನಲ್ಲ, ನಿಮ್ಮ ದೇಶಭಕ್ತಿಯ ಪ್ರತೀಕ ಈ ರೀತಿ, ಜನರನ್ನು ಪ್ರೇರೇಪಿಸುವ ವಿಡಿಯೋ ಕೂಡಾ ಹಾಕಲಾಗಿದೆ. ಸೆನೆಟ್ ನಿರ್ಣಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಮೆರಿಕದ ಸುರಕ್ಷತೆಗಾಗಿ ಆವ್ರಿಲ್ ಹೈನೆಸ್ ಅವರನ್ನು ರಾಷ್ಟ್ರೀಯ ಗುಪ್ತಚರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
Twitter on Wednesday transferred the official President of the United States Twitter account, @POTUS, to Joe Biden after he was sworn in as the 46th President of US. The account was reset to zero, which means that President Biden did not inherit Donald Trump's 33.3 million followers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X