ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನಿಯರ್ ಟ್ರಂಪ್ ಖಾತೆ ನಿರ್ಬಂಧಿಸಿದ ಟ್ವಿಟ್ಟರ್!

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹಿರಿಯ ಮಗನ ವಿರುದ್ಧ ಟ್ವಿಟ್ಟರ್ ಕ್ರಮ ಕೈಗೊಂಡಿದೆ. ಜೂನಿಯರ್ ಟ್ರಂಪ್ ಕೊರೊನಾ ಸೋಂಕಿನ ಬಗ್ಗೆ ವೀಡಿಯೋ ಒಂದನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕು ಗುಣಪಡಿಸುವ ಬಗ್ಗೆ ತಪ್ಪು ತಪ್ಪಾದ ಮಾಹಿತಿ ನೀಡಿದ್ದ ಎನ್ನಲಾಗಿದೆ.

Recommended Video

Rafael ಯುದ್ಧ ವಿಮಾನ ಓಡಿಸುವವರು ನಮ್ಮ ಕನ್ನಡಿಗ | Oneindia Kannada

ಹಾಗೇ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಹಾಕುವ ಅಗತ್ಯವಿಲ್ಲ ಅಂತಲೂ ವೀಡಿಯೋದಲ್ಲಿ ವೈದ್ಯ ಸಲಹೆ ನೀಡಿದ್ದ. ಆದರೆ ಈ ವಿವಾದಾತ್ಮಕ ವೀಡಿಯೋವನ್ನ ಜೂನಿಯರ್ ಟ್ರಂಪ್ ಪೋಸ್ಟ್ ಮಾಡಿದ್ದರು. ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ವಿಟ್ಟರ್ ಅಧಿಕಾರಿಗಳು ಕೂಡಲೇ ವೀಡಿಯೋ ಪ್ರೈವೆಸಿಯನ್ನ ಬದಲಾಯಿಸಿದ್ದರು.

ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!ಯುಎಸ್ ಆರ್ಥಿಕ ಪುನಶ್ಚೇತನಕ್ಕಾಗಿ ಮತ್ತೆ 1 ಟ್ರಿಲಿಯನ್ ಡಾಲರ್!

ಅಲ್ಲದೆ 12 ಗಂಟೆಗಳ ಕಾಲ ಟ್ರಂಪ್ ಮಗನ ಅಕೌಂಟ್‌ನಿಂದ ಪೋಸ್ಟಿಂಗ್ ಫೀಚರ್ ರದ್ದುಗೊಳಿಸಿದ್ದಾರೆ. ಇನ್ನು ಅಧ್ಯಕ್ಷ ಟ್ರಂಪ್ ಮಗನ ಅಕೌಂಟ್ ವಿರುದ್ಧ ಕ್ರಮ ಕೈಗೊಂಡ ಸುದ್ದಿ ಸದ್ದು ಮಾಡುತ್ತಿದ್ದಂತೆ ಟ್ವಿಟ್ಟರ್ ವಕ್ತಾರರು ಸ್ಪಷ್ಟನೆ ನೀಡಿದ್ದು, ಈ ವೀಡಿಯೋ ಟ್ವಿಟ್ಟರ್‌ನ ನಿಯಮ ಮೀರಿದೆ ಎಂದಿದ್ದಾರೆ. ಇದೇ ಕಾರಣಕ್ಕಾಗಿ ಜೂನಿಯರ್ ಟ್ರಂಪ್ ಅಕೌಂಟ್ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಇದು ಶಾಶ್ವತ ಕ್ರಮ ಅಲ್ಲ ಎಂಬುದನ್ನೂ ತಿಳಿಸಿದ್ದಾರೆ.

Twitter Temporarily Restricts Trump’s Eldest Son Account

ಅಪ್ಪನಿಂದಲೂ ವೀಡಿಯೋ ಶೇರ್..!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕೆಲ ರೀಟ್ವೀಟ್‌ಗಳನ್ನ ಮಾಡಿದ್ದರು. ಈ ರೀಟ್ವೀಟ್‌ಗಳಲ್ಲಿ ಇದ್ದ ಮಾಹಿತಿ ಕೂಡ ಟ್ರಂಪ್ ಮಗ ಪೋಸ್ಟ್ ಮಾಡಿದ್ದ ವೀಡಿಯೋದಲ್ಲಿದ್ದ ಅಂಶಗಳನ್ನೇ ಹೋಲುತ್ತಿತ್ತು. ಆದರೆ ಅದನ್ನ ಅಧ್ಯಕ್ಷ ಟ್ರಂಪ್ ನೇರವಾಗಿ ಪೋಸ್ಟ್ ಮಾಡಿರಲಿಲ್ಲ. ಬದಲಾಗಿ ಬೇರೆಯವರು ಮಾಡಿದ್ದ ಪೋಸ್ಟ್‌ ಅನ್ನ ರೀಟ್ವೀಟ್ ಮಾಡಿದ್ದರು. ಹೀಗಾಗಿ ಅಧ್ಯಕ್ಷ ಟ್ರಂಪ್ ವಿರುದ್ಧ ಟ್ವಿಟ್ಟರ್ ಕ್ರಮ ಕೈಗೊಂಡಿಲ್ಲ. ಬದಲಾಗಿ ಜೂನಿಯರ್ ಟ್ರಂಪ್ ಅಕೌಂಟ್ ವಿರುದ್ಧ ಟ್ವಿಟ್ಟರ್ ಕ್ರಮ ಕೈಗೊಂಡಿದೆ. ಈ ಮೂಲಕ ಸಣ್ಣ ವಾರ್ನಿಂಗ್ ಒಂದನ್ನ ಟ್ವಿಟ್ಟರ್ ರವಾನಿಸಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

ಟ್ವಿಟ್ಟರ್ v/s ಟ್ರಂಪ್ ಫ್ಯಾಮಿಲಿ..!

ಟ್ರಂಪ್ ಕುಟುಂಬ ಟ್ವಿಟ್ ವಿಚಾರದಲ್ಲಿ ವಿವಾದ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಧ್ಯಕ್ಷ ಟ್ರಂಪ್ ಮಾಡಿರುವ ಅನೇಕ ಪೋಸ್ಟ್‌ಗಳು ಕೂಡ ಭಾರಿ ವಿವಾದ ಹುಟ್ಟುಹಾಕಿದ್ದವು. ಕಳೆದ ತಿಂಗಳು ಟ್ರಂಪ್ ವೀಡಿಯೋ ಒಂದನ್ನ ರೀಟ್ವೀಟ್ ಮಾಡಿದ್ದರು. ಆಗ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದಿತ್ತು. ಆದರೆ ವಾಸ್ತವ ಮರೆತವರಂತೆ ಟ್ರಂಪ್ ವಿವಾದಾತ್ಮಕ ವೀಡಿಯೋ ರೀಟ್ವೀಟ್ ಮಾಡಿದ್ದರು. ಟ್ರಂಪ್ ರೀಟ್ವೀಟ್ ಮಾಡಿದ್ದ ವೀಡಿಯೋ ಸಂಘರ್ಷಕ್ಕೆ ತುಪ್ಪ ಸುರಿಯುವಂತಿತ್ತು.

ಆದರೆ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುವುದಕ್ಕೂ ಮೊದಲೇ ಎಚ್ಚೆತ್ತುಕೊಂಡ ಟ್ರಂಪ್ ಅದನ್ನು ಡಿಲೀಟ್‌ ಮಾಡಿದ್ದರು. ನಂತರ ಈ ಕುರಿತು ಚರ್ಚೆ ನಡೆದಾಗ ಸ್ವಪಕ್ಷೀಯರೇ ಟ್ರಂಪ್ ವಿರುದ್ಧ ಮಾತನಾಡಿದ್ದರು. ಇದಲ್ಲದೆ ಅನೇಕ ಸಂದರ್ಭದಲ್ಲಿ ಟ್ರಂಪ್‌ರ ಟ್ವೀಟ್ ಹಾಗೂ ರೀಟ್ವೀಟ್‌ಗಳು ಸಾಕಷ್ಟು ವಿವಾದ ಎಬ್ಬಿಸಿವೆ. ಈಗ ಟ್ರಂಪ್‌ರ ಹಿರಿಯ ಮಗ ಕೂಡ ಅಪ್ಪನ ಸಾಲಿಗೆ ಬಂದು ಸೇರಿದ್ದಾರೆ. ಈಗಾಗಲೇ ಟ್ವಿಟ್ಟರ್ ವಿರುದ್ಧ ಹಲವು ಸಲ ಬಹಿರಂಗವಾಗಿ ಮುನಿಸು ಹೊರ ಹಾಕಿರುವ ಟ್ರಂಪ್, ಈಗ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಷ್ಟೆ.

English summary
Twitter Restricted On Donald John Trump Jr.'s Account. After Posting A Video That Featuring A Doctor Making False Claims About Coronavirus And Using Of Mask. Twitter Taken Action Against President Trump’s Eldest Son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X