• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರ್‌ಗೆ 5 ಸಾವಿರ ಕೋಟಿ ನಷ್ಟ, ಟ್ರಂಪ್ ಬ್ಯಾನ್ ಮಾಡಿದ್ದಕ್ಕೆ ಸೇಡು?

|

ಯಾವುದೇ ಕಾರ್ಪೊರೇಟ್ ಕಂಪನಿಯೂ ಕೈಗೊಳ್ಳದ ದಿಟ್ಟ ನಿರ್ಧಾರವನ್ನ ಸೋಷಿಯಲ್ ಮೀಡಿಯಾ ದೈತ್ಯ ಟ್ವಿಟ್ಟರ್ ಕೈಗೊಂಡಿದೆ. ಟ್ರಂಪ್‌ಗೆ ಟ್ವಿಟ್ಟರ್‌ನಿಂದ ಗೇಟ್ ಪಾಸ್ ಸಿಕ್ಕಿದೆ. ಆದರೆ ಈ ನಿರ್ಧಾರದಿಂದ ಟ್ವಿಟ್ಟರ್ ನಲುಗಿ ಹೋಗಿದೆ. ಒಂದೇ ದಿನದಲ್ಲಿ ಅಮೆರಿಕದ ಮಾರುಕಟ್ಟೆಯಲ್ಲಿ ಟ್ವಿಟ್ಟರ್ ಸುಮಾರು 5 ಸಾವಿರ ಕೋಟಿ ರೂಪಾಯಿ ಕಳೆದುಕೊಂಡಿದೆ. ಕ್ಯಾಪಿಟಲ್ ಹಿಲ್ ಮೇಲಿನ ಅಟ್ಯಾಕ್ ಬಳಿಕ ಟ್ರಂಪ್ ವಿರುದ್ಧ ಕಠಿಣ ಕ್ರಮಕ್ಕೆ ಟ್ವಿಟ್ಟರ್ ಮುಂದಾಗಿತ್ತು.

ಮೊದಲಿಗೆ ಟ್ರಂಪ್ ಮಾಡಿದ್ದ ಪ್ರಚೋದನಕಾರಿ ಟ್ವೀಟ್‌ಗಳನ್ನ ಡಿಲಿಟ್ ಮಾಡಿದ್ದರು. ಆದರೆ ಟ್ರಂಪ್ ಬುದ್ಧಿ ಕಲಿಯಲಿಲ್ಲ, ತಮ್ಮ ಪ್ರಚೋದನಕಾರಿ ಪೋಸ್ಟ್‌ಗಳನ್ನ ಮುಂದುವರಿಸಿದ್ದರು. ಹೀಗಾಗಿ ಅನಿವಾರ್ಯವಾಗಿ ಟ್ರಂಪ್ ಟ್ವಿಟ್ಟರ್ ಅಕೌಂಟ್‌ನ್ನು ಪರ್ಮನೆಂಟ್ ಆಗಿ ಬ್ಯಾನ್ ಮಾಡಿತ್ತು ಟ್ವಿಟ್ಟರ್. ಇದೇ ರೀತಿಯ ಕ್ರಮವನ್ನ ಫೇಸ್‌ಬುಕ್ ಕೂಡ ಕೈಗೊಂಡಿತ್ತು.

ಟ್ರಂಪ್ ಮೇಲೆ ನಿಷೇಧ ಹೇರಿ ಕೈಸುಟ್ಟುಕೊಂಡ ಟ್ವಿಟ್ಟರ್, ಫೇಸ್‌ಬುಕ್

ಟ್ರಂಪ್ ಮಾತ್ರವಲ್ಲದೆ ಅವರ ಬೆಂಬಲಿಗರನ್ನ ಕೂಡ ಹುಡುಕಿ, ಹುಡುಕಿ ಬ್ಲಾಕ್ ಮಾಡಲಾಗಿದೆ. ಆದರೆ ಇದೇ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಟ್ರಂಪ್ ಬೆಂಬಲಿಗ ಪಡೆ ಟ್ವಿಟ್ಟರ್ ವಿರುದ್ಧ ಯುದ್ಧವನ್ನೇ ಸಾರಿದೆ. ಪರಿಣಾಮ ಟ್ವಿಟ್ಟರ್ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದೆ.

ಟ್ವಿಟ್ಟರ್ ಕಚೇರಿ ಎದುರು ಪ್ರತಿಭಟನೆ

ಟ್ವಿಟ್ಟರ್ ಕಚೇರಿ ಎದುರು ಪ್ರತಿಭಟನೆ

ಟ್ರಂಪ್ ಬೆಂಬಲಿಗರು ಅದೆಷ್ಟು ರೊಚ್ಚಿಗೆದ್ದಿದ್ದಾರೆ ಎಂದರೆ, ತಮ್ಮ ನಾಯಕನ ವಿರುದ್ಧ ಕ್ರಮ ಕೈಗೊಂಡಿರುವ ಟ್ವಿಟ್ಟರ್ ವಿರುದ್ಧ ಯುದ್ಧವನ್ನೇ ಘೋಷಿಸಿದ್ದಾರೆ. ಅಮೆರಿಕದ ಟ್ವಿಟ್ಟರ್ ಮುಖ್ಯ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮೊದಲೇ ಪ್ಲಾನ್ ಮಾಡಿದ ಪ್ರತಿಭಟನೆ ಇದಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಆದರೂ ಟ್ವಿಟ್ಟರ್ ನಿರ್ವಾಹಕರಿಗೆ ಭಯ ಕಾಡುತ್ತಿದೆ. ಏಕೆಂದರೆ ಕ್ಯಾಪಿಟಲ್ ಹಿಲ್ ಮಾದರಿ ದಾಳಿ ನಮ್ಮ ಮೇಲೂ ನಡೆಯಬಹುದು ಎಂಬ ಅನುಮಾನ ಟ್ವಿಟ್ಟರ್‌ಗೆ ಕಾಡ್ತಿದೆ.

ಡೊನಾಲ್ಡ್ ಟ್ರಂಪ್‌ಗೆ ಮನೆ ದಾರಿ ತೋರಿಸಲು ಸಿದ್ಧರಾದ ಸಂಸದರು..!

ಎಡವಟ್ಟುಗಳ ಸರದಾರ ಟ್ರಂಪ್..!

ಎಡವಟ್ಟುಗಳ ಸರದಾರ ಟ್ರಂಪ್..!

ಟ್ರಂಪ್‌ಗೆ ಜಗತ್ತಿನಾದ್ಯಂತ ಬೆಂಬಲಿಗರು ಹಾಗೂ ವಿರೋಧಿಗಳು ಇದ್ದಾರೆ. ಆದರೆ ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಬಳಿಕ ಎಲ್ಲರೂ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ಸ್ವತಃ ಅವರ ಸಹೋದ್ಯೋಗಿ ಹಾಗೂ ಅತ್ಯಾಪ್ತ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಟ್ರಂಪ್ ನೀವು ಸರಿಯಿಲ್ಲ ಎಂದಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಮೊದಲೇ ಟ್ರಂಪ್‌ಗೆ ಟ್ವಿಟ್ಟರ್ ಕೂಡ ಶಾಕ್ ಕೊಟ್ಟಿತ್ತು. ಆದರೆ ಇಷ್ಟು ಆದ ಬಳಿಕ ಸುಮ್ಮನಾಗದೆ ಮತ್ತೆ ಮೊಂಡಾಟ ಮುಂದುವರಿಸಿದ್ದ ಟ್ರಂಪ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿಯೇ ಅಮೆರಿಕನ್ನರನ್ನ ರೊಚ್ಚಿಗೆಬ್ಬಿಸಿದೆ.

ಟ್ರಂಪ್ ಟ್ವಿಟ್ಟರ್ ಖಾತೆ ಬಂದ್ ಮಾಡಿಸಿದ್ದು ವಕೀಲೆ ವಿಜಯ ಗದ್ದೆ

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಎಲೆಕ್ಟೊರಲ್ ಕಾಲೇಜ್ ಮತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಗುಂಪು, ಅಮೆರಿಕದ ಸಂಸತ್ ಇರುವ ‘ಕ್ಯಾಪಿಟಲ್ ಹಿಲ್' ಕಟ್ಟಡಕ್ಕೆ ನುಗ್ಗಿ ಹಿಂಸಾಚಾರವನ್ನ ನಡೆಸಿತ್ತು. ಟ್ರಂಪ್ ಕುಮ್ಮಕ್ಕಿನಂತೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಸುಗಮ ಅಧಿಕಾರ ಹಸ್ತಾಂತರ ನಡೆಸಲು ಒಪ್ಪಿಕೊಂಡಿದ್ದರೂ, ಗಲಭೆ ಘಟನೆಯಿಂದ ಅಸಮಾಧಾನಗೊಂಡಿರುವ ಸಂಸದರು ಟ್ರಂಪ್ ನಡೆ ಬಗ್ಗೆ ಅನುಮಾನ ಇರುವುದರಿಂದ ಟ್ರಂಪ್ ಪದಚ್ಯುತಿ ಮಾರ್ಗ ಸೂಕ್ತವಾಗಿದೆ ಎನ್ನುತ್ತಿದ್ದಾರೆ. ಹೀಗಾಗಿಯೇ ನಿನ್ನೆ ಟ್ರಂಪ್ ವಿರುದ್ಧ ವಾಗ್ದಂಡನೆಗೆ ಚಾಲನೆ ಕೂಡ ದೊರೆತಿದೆ.

180 ಸಂಸದರ ಬಲ ಸಿಕ್ಕಿದೆ..!

180 ಸಂಸದರ ಬಲ ಸಿಕ್ಕಿದೆ..!

ಅಂದಹಾಗೆ ಡೆಮಾಕ್ರಟಿಕ್‌ ಸಂಸದ ಟೆಡ್ ಲಿಯು ತಿಳಿಸುವಂತೆ ಅಮೆರಿಕ ಕಾಂಗ್ರೆಸ್‌ನ ಕನಿಷ್ಠ 180 ಸದಸ್ಯರು ಟ್ರಂಪ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ರಂಪ್ ವಿರುದ್ಧ ಆರೋಪ ಹೊರಿಸಿ ಈಗಾಗಲೇ ಅಮೆರಿಕ ಕಾಂಗ್ರೆಸ್‌ನ 180 ಸದಸ್ಯರು ವಾಗ್ದಂಡನೆ ಪ್ರಸ್ತಾವಕ್ಕೂ ಸಹಿ ಹಾಕಿದ್ದಾರೆ. ಇದು ಡೆಮಾಕ್ರಟಿಕ್ ಹುರಿಯಾಳುಗಳಿಗೆ ಬಲವನ್ನ ನೀಡಿದೆ. ಟ್ರಂಪ್ ವಿರುದ್ಧ ತೊಡೆತಟ್ಟಿರುವ ಸಂಸದರು, ಅಮೆರಿಕದ ಅತ್ಯಂತ ವಿವಾದಾತ್ಮಕ ಅಧ್ಯಕ್ಷನನ್ನ ಮನೆಗೆ ಕಳುಹಿಸುವ ತಯಾರಿಯಲ್ಲಿದ್ದಾರೆ.

ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?

English summary
Twitter loses 5 billion dollars after banning Trump permanently from Twitter. Trump supporters protesting outside the Twitter head office after banning the Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X