ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾ ಅಧ್ಯಕ್ಷರ ಡೊನಾಲ್ಡ್ ಟ್ರಂಪ್ ಗೆ 'ವಾರ್ನಿಂಗ್' ಕೊಟ್ಟ ಟ್ವಿಟ್ಟರ್.!

|
Google Oneindia Kannada News

ವಾಷಿಂಗ್ಟನ್, ಮೇ 29: ''ಜಾರ್ಜ್ ಫ್ಲಾಯ್ಡ್ ಸ್ಮರಣೆಗೆ ಅವಮಾನ ಆಗುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಗವರ್ನರ್ ಟಿಮ್ ವಾಲ್ಜ್ ಜೊತೆಗೆ ನಾನು ಮಾತನಾಡಿದ್ದೇನೆ. ಅವರ ಸಹಾಯಕ್ಕೆ ಮಿಲಿಟರಿ ಇದೆ. ಪರಿಸ್ಥಿತಿ ಕೈ ಮೀರಿದರೆ ಮಿಲಿಟರಿ ನಿಯಂತ್ರಿಸುತ್ತದೆ. ಲೂಟಿಂಗ್ ಸ್ಟಾರ್ಟ್ ಆದಾಗ, ಶೂಟಿಂಗ್ ಸ್ಟಾರ್ಟ್ ಆಗುತ್ತದೆ'' - ಹೀಗೆಂದು ಕೆಲವೇ ಗಂಟೆಗಳ ಹಿಂದೆಯಷ್ಟೇ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಡೊನಾಲ್ಡ್ ಟ್ರಂಪ್ ರವರ ಈ ಟ್ವೀಟ್ 'ಹಿಂಸಾಚಾರ'ವನ್ನು ವೈಭವೀಕರಿಸಿದ್ದು, ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಮಿನ್ನಿಯಾಪೊಲಿಸ್ ಪ್ರತಿಭಟನಾಕಾರರನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕುವ ಒಕ್ಕಣೆ ಹೊಂದಿರುವ ಡೊನಾಲ್ಡ್ ಟ್ರಂಪ್ ರವರ ಟ್ವೀಟ್ ಮೇಲೆ ಟ್ವಿಟ್ಟರ್ ಕಂಪನಿ 'ವಾರ್ನಿಂಗ್' ನೋಟೀಸ್ ಹಾಕಿದೆ.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

'ಅಧ್ಯಕ್ಷ'ರ ಟ್ವೀಟ್ ಗೆ ಟ್ವಿಟ್ಟರ್ 'ವಾರ್ನಿಂಗ್' ಹಾಕಿರುವುದು ಇದೇ ಮೊದಲು.! ''ಡೊನಾಲ್ಡ್ ಟ್ರಂಪ್ ರವರ ಟ್ವೀಟ್ ಗೆ ನಾವು 'ಪಬ್ಲಿಕ್ ಇಂಟ್ರೆಸ್ಟ್ ನೋಟೀಸ್' ಹಾಕಿದ್ದೇವೆ'' ಎಂದು ಟ್ವಿಟ್ಟರ್ ತನ್ನ ಅಧಿಕೃತ ಫೀಡ್ ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದೆ.

ಮಿಲಿಟರಿ ಸುಪರ್ದಿಗೆ ಹೋಗಲಿದೆಯಾ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರ?ಮಿಲಿಟರಿ ಸುಪರ್ದಿಗೆ ಹೋಗಲಿದೆಯಾ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರ?

''ಡೊನಾಲ್ಡ್ ಟ್ರಂಪ್ ರವರ ಟ್ವೀಟ್ ನಲ್ಲಿನ ಕೊನೆಯ ಸಾಲಿನಲ್ಲಿ 'ಹಿಂಸಾಚಾರ' ವೈಭವೀಕರಣ ಎದ್ದು ಕಾಣುತ್ತಿದ್ದು, ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸುತ್ತದೆ. ಹಿಂಸಾತ್ಮಕ ಕೃತ್ಯಗಳಿಗೆ ಇತರರು ಪ್ರೇರಿತರಾಗುವುದನ್ನು ತಡೆಯಲು ನಾವು ಈ ಕ್ರಮ ಕೈಗೊಂಡಿದ್ದೇವೆ. ಆದರೆ ಸಾರ್ವಜನಿಕರಿಗೆ ಟ್ವೀಟ್ ಇನ್ನೂ ಲಭ್ಯವಿದೆ'' ಎಂದು ಟ್ವಿಟ್ಟರ್ ಹೇಳಿದೆ.

ಡೊನಾಲ್ಡ್ ಟ್ರಂಪ್ ಟ್ವೀಟ್

''ಮಿನ್ನಿಯಾಪೊಲಿಸ್ ನಗರದಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ನಾನು ನೋಡಲಾರೆ. ಅಲ್ಲಿ ನಾಯಕತ್ವದ ಕೊರತೆ ಎದುರಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಮೇಯರ್ ಜೇಕಬ್ ಫ್ರೇ ನಿಯಂತ್ರಣಕ್ಕೆ ತರಬೇಕು. ಇಲ್ಲಾಂದ್ರೆ ನಾನು ಮಿಲಿಟರಿ ನಿಯೋಜಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತೇನೆ'' ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಪರಿಸ್ಥಿತಿ ಕೈ ಮೀರಿದರೆ...

ಪರಿಸ್ಥಿತಿ ಕೈ ಮೀರಿದರೆ...

''ಜಾರ್ಜ್ ಫ್ಲಾಯ್ಡ್ ಸ್ಮರಣೆಗೆ ಅವಮಾನ ಆಗುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಗವರ್ನರ್ ಟಿಮ್ ವಾಲ್ಜ್ ಜೊತೆಗೆ ನಾನು ಮಾತನಾಡಿದ್ದೇನೆ. ಅವರ ಸಹಾಯಕ್ಕೆ ಮಿಲಿಟರಿ ಇದೆ. ಪರಿಸ್ಥಿತಿ ಕೈ ಮೀರಿದರೆ ಮಿಲಿಟರಿ ನಿಯಂತ್ರಿಸುತ್ತದೆ. ಲೂಟಿಂಗ್ ಸ್ಟಾರ್ಟ್ ಆದಾಗ, ಶೂಟಿಂಗ್ ಸ್ಟಾರ್ಟ್ ಆಗುತ್ತದೆ'' ಎಂದು ಡೊನಾಲ್ಡ್ ಟ್ರಂಪ್ ಮಾಡಿದ್ದ ಟ್ವೀಟ್ ಗೆ ಟ್ವಿಟ್ಟರ್ ಕಡೆಯಿಂದ 'ವಾರ್ನಿಂಗ್' ನೋಟೀಸ್ ಬಿದ್ದಿದೆ.

ಮಿನ್ನಿಯಾಪೊಲಿಸ್ ನಗರದಲ್ಲಿ ಪ್ರತಿಭಟನೆ ಯಾಕೆ.?

ಮಿನ್ನಿಯಾಪೊಲಿಸ್ ನಗರದಲ್ಲಿ ಪ್ರತಿಭಟನೆ ಯಾಕೆ.?

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಮಿನ್ನಿಯಾಪೊಲಿಸ್ ನಗರದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನೂರಾರು ಪ್ರತಿಭಟನಾಕಾರರು ವಾಣಿಜ್ಯ ಮಳಿಗೆಗಳಿಗೆ ಬೆಂಕಿ ಹೆಚ್ಚಿದ್ದಾರೆ. ಇದರಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ.

ಮಿನ್ನಿಯಾಪೊಲಿಸ್ ನಗರದಲ್ಲಿ ಹದಗೆಟ್ಟ ಶಾಂತಿ ಸುವ್ಯವಸ್ಥೆ

ಮಿನ್ನಿಯಾಪೊಲಿಸ್ ನಗರದಲ್ಲಿ ಹದಗೆಟ್ಟ ಶಾಂತಿ ಸುವ್ಯವಸ್ಥೆ

'ಬ್ಲಾಕ್' ಮ್ಯಾನ್ ಜಾರ್ಜ್ ಫ್ಲಾಯ್ಡ್ ಮರಣದ ಬಳಿಕ 'ವೈಟ್' ಪೊಲೀಸರ ವಿರುದ್ಧ ಮಿನೆಸೋಟಾದ ಮಿನ್ನಿಯಾಪೊಲಿಸ್ ನಗರದಲ್ಲಿ ನಡೆದ ಪ್ರತಿಭೆ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ.

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಪೊಲೀಸರ ಅಟ್ಟಹಾಸ

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಪೊಲೀಸರ ಅಟ್ಟಹಾಸ

ಕಳೆದ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು.

ಟ್ವಿಟ್ಟರ್ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್

''ಚೀನಾ, ಲೆಫ್ಟ್ ಡೆಮೋಕ್ರಾಟಿಕ್ ಪಾರ್ಟಿ ರವರ ಸುಳ್ಳು ಮತ್ತು ಪ್ರಚಾರಗಳ ಬಗ್ಗೆ ಟ್ವಿಟ್ಟರ್ ಏನ್ನನ್ನೂ ಮಾಡುವುದಿಲ್ಲ. ರಿಪಬ್ಲಿಕನ್, ಕನ್ಸರ್ವೇಟಿವ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರನ್ನು ಮಾತ್ರ ಟ್ವಿಟ್ಟರ್ ಟಾರ್ಗೆಟ್ ಮಾಡುತ್ತಿವೆ. ಸೆಕ್ಷನ್ 230 ಅನ್ನು ಕಾಂಗ್ರೆಸ್ ಹಿಂತೆಗೆದುಕೊಳ್ಳಬೇಕು'' ಅಂತ ಟ್ವೀಟ್ ಮಾಡಿ ಟ್ವಿಟ್ಟರ್ ವಿರುದ್ಧ ಡೊನಾಲ್ಡ್ ಟ್ರಂಪ್ ಗುಟುರು ಹಾಕಿದ್ದಾರೆ.

English summary
Twitter has added an unprecedented warning to Donald Trump tweet, as the post glorifies violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X