ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಶ್ರೇಷ್ಠ ಡಿಜಿಟಲ್ ಕಂಪನಿಯ ಸಿಇಓ ಗೂಗಲ್‌ನಿಂದ ದೂರ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 30: ಗೂಗಲ್ ಇಲ್ಲದೆ ಬದುಕಿಲ್ಲ, ಗೂಗಲ್‌ನಲ್ಲಿ ಸರ್ಚ್ ಮಾಡದೆ ದಿನಕಳೆಯಲೇ ಸಾಧ್ಯವಿಲ್ಲ ಎನ್ನುವ ಮಾತುಗಳಿವೆ. ಆದರೆ ಜಗತ್ತಿಗೆ 280 ಅಕ್ಷರಗಳಲ್ಲಿ ಮಾಹಿತಿ ನೀಡುತ್ತಿರುವ ಟ್ವಿಟ್ಟರ್ ಸಂಸ್ಥೆಯ ಸಿಇಓ ಗೂಗಲ್ ಸರ್ಚ್ ಎಂಜಿನ್‌ನನ್ನೇ ಬಳಸುತ್ತಿಲ್ಲವಂತೆ.

ಸಮೀಕ್ಷೆಯೊಂದರ ಪ್ರಕಾರ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸೆ ಗೂಗಲ್‌ನ್ನು ಬಳಸುತ್ತಿಲ್ಲ. ಅವರ ಡಿಫಾಲ್ಟ್ ಬ್ರೌಸರ್ ಬೇರೆಯದ್ದೇ ಆಗಿದೆ. ಈ ಮೂಲಕ ಡಿಜಿಟಲ್ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಎನಿಸಿಕೊಂಡಿರುವ ಕಂಪನಿಯ ಸರ್ಚ್ ಎಂಜಿನ್‌ನನ್ನೂ ಬಳಸದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

''ನಾನು ಗೂಗಲ್ ಸರ್ಚ್ ಎಂಜಿನ್‌ನನ್ನು ಬಳಸುವುದಿಲ್ಲ, ಡಕ್‌ ಡಕ್‌ ಗೋ ಎನ್ನುವ ಬ್ರೌಸರ್ ನನಗೆ ಅತ್ಯಂತ ಇಷ್ಟವಾದದ್ದು'' ಎಂದು ಜಾಕ್ ತಿಳಿಸಿದ್ದಾರೆ.

ಇದಕ್ಕೆ ಅವರು ಸ್ಪಷ್ಟ ಕಾರಣವನ್ನೂ ನೀಡಿದ್ದಾರೆ.ಡಕ್ ಡಕ್ ಗೋ ಸಂಸ್ಥೆಯು ಯಾವುದೇ ಖಾತೆದಾರರ ವೈಯಕ್ತಿಕ ಮಾಹಿತಿ ಅಥವಾ ಅಂಕಿ ಅಂಶಗಳನ್ನು ಸಂಗ್ರಹಿಸುವುದಿಲ್ಲ.

ಆದರೆ ಗೂಗಲ್ ಸರ್ಚ್ ಎಂಜಿನ್ ಹಾಗೂ ಮೊಬೈಲ್ ಆಪರೇಟಿಂಗ್ ಸಿಸ್ಟಂ ಮೂಲಕ ಖಾತೆದಾರರ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಗೂಗಲ್‌ ಮೇಲಿದೆ.

ಹೀಗಾಗಿ ಜಾಕ್ ಪ್ರತಿಸ್ಪರ್ಧಿ ಕಂಪನಿಗಿಂತ ಡಕ್ ಡಕ್ ಗೋ ನೇ ಉತ್ತಮ ಎಂದು ಅವರು ಭಾವಿಸಿದ್ದಾರೆ. ಇದು ಗೂಗಲ್‌ಗಿಂತಲೂ ಉತ್ತಮವಾಗಿದೆ ಎನ್ನುವುದು ಕೂಡ ಅವರ ಭಾವನೆಯಾಗಿದೆ.

jack

ಸದ್ಯಕ್ಕೆ ಡಕ್‌ ಡಕ್‌ಗೋ ಸದ್ಯಕ್ಕೆ ಅತ್ಯಂತ ಕಡಿಮೆ ಸರ್ಚ್ ಪುಟಗಳನ್ನು ಹೊಂದಿದ್ದರೂ ಪ್ರೈವಸಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎನ್ನಲಾಗಿದೆ.

ಗೂಗಲ್ 300 ಕೋಟಿ ಸರ್ಚ್ ಪುಟಗಳನ್ನು ಹೊಂದಿದ್ದರೆ, ಡಕ್ ಡಕ್ ಗೋ ಕೇವಲ 3 ಕೋಟಿ ಸರ್ಚ್ ಪುಟಗಳನ್ನು ಹೊಂದಿದೆ.

English summary
While someone ‘Googling’ stuff is not surprising, it’s quite unusual when a big company’s CEO says they prefer some other search engine. In a big endorsement, Twitter CEO Jack Dorsey tweeted he loves DuckDuckGo and it’s his default search engine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X