ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮೇಲೆ ನಿಷೇಧ ಹೇರಿ ಕೈಸುಟ್ಟುಕೊಂಡ ಟ್ವಿಟ್ಟರ್, ಫೇಸ್‌ಬುಕ್

|
Google Oneindia Kannada News

ವಾಷಿಂಗ್ಟನ್, ಜನವರಿ 12: ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ಕಳೆದ ವಾರ ನಡೆದ ಗಲಭೆಯನ್ನು ಸಮರ್ಥಿಸಿಕೊಂಡು ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತಮ್ಮ ವೇದಿಕೆಗಳಿಂದ ನಿಷೇಧಿಸಿದ ಬಳಿಕ ಅಮೆಜಾನ್, ಟ್ವಿಟ್ಟರ್, ಫೇಸ್‌ಬುಕ್ ಮತ್ತಿತರ ತಾಂತ್ರಿಕ ಕಂಪೆನಿಗಳ ಷೇರು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಟ್ರಂಪ್ ಅವರ ಟ್ವೀಟ್‌ಗಳು ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ ನೀಡಿತ್ತು. ಭವಿಷ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮುಗಿಯುವ ಮುನ್ನ ಟ್ರಂಪ್ ಇಂತಹ ಕೃತ್ಯಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡುವ ಅಪಾಯವಿದೆ ಎಂದು ಟ್ವಿಟ್ಟರ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಟ್ರಂಪ್ ಅವರ ಪ್ರಚಾರ ತಂಡದ ಖಾತೆಯನ್ನು ಕೂಡ ಅಮಾನತುಗೊಳಿಸಿದ್ದು, ಅವರ ಬೆಂಬಲಿಗರ ಖಾತೆಗೂ ಬೀಗ ಹಾಕಲಾಗಿದೆ. ಇದರಿಂದ ಸೋಮವಾರ ಟ್ವಿಟ್ಟರ್‌ನ ಷೇರು ಶೇ 6ರಷ್ಟು ಕುಸಿತ ಕಂಡಿದೆ.

ಟ್ವಿಟ್ಟರ್ ಎಡಪಂಥೀಯರ ಪರ, ನನ್ನದೇ ಸೋಷಿಯಲ್ ಮೀಡಿಯಾ ಮಾಡ್ತೀನಿ: ಟ್ರಂಪ್ ಸೆಡ್ಡುಟ್ವಿಟ್ಟರ್ ಎಡಪಂಥೀಯರ ಪರ, ನನ್ನದೇ ಸೋಷಿಯಲ್ ಮೀಡಿಯಾ ಮಾಡ್ತೀನಿ: ಟ್ರಂಪ್ ಸೆಡ್ಡು

ಟ್ರಂಪ್ ಪರ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಟ್ವಿಟ್ಟರ್ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಟ್ರಂಪ್ ಬೆಂಬಲಿಗರು ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲೆ ವಿವಿಧ ರೀತಿಯಲ್ಲಿ ದಾಳಿ ನಡೆಸುವ ಆತಂಕ ಎದುರಾಗಿದೆ. ಮುಂದೆ ಓದಿ.

ಜಾಲತಾಣ ಉದ್ಯೋಗಿಗಳಿಗೆ ಬೆದರಿಕೆ

ಜಾಲತಾಣ ಉದ್ಯೋಗಿಗಳಿಗೆ ಬೆದರಿಕೆ

ಈ ನಡುವೆ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿನ ತಮ್ಮ ಖಾತೆಗಳಲ್ಲಿನ ವಿವರಗಳನ್ನು ಅಡಗಿಸಿಕೊಳ್ಳುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಅನೇಕ ಉದ್ಯೋಗಿಗಳಿಗೆ ಭದ್ರತೆ ಹಾಗೂ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರ ರಕ್ಷಣೆಗಾಗಿ ಈ ಸಲಹೆ ನೀಡಲಾಗಿದೆ.

ಅಮೆಜಾನ್ ಷೇರು ಕುಸಿತ

ಅಮೆಜಾನ್ ಷೇರು ಕುಸಿತ

ಟ್ರಂಪ್ ಮತ್ತು ಅವರ ಬೆಂಬಲಿಗರಿಗೆ ಈಗ ಪರ್ಯಾಯ ತಾಣವಾಗಿರುವ 'ಪಾರ್ಲರ್' ಸಾಮಾಜಿಕ ಜಾಲತಾಣವು ಅಮೆಜಾನ್ ವಿರುದ್ಧ ಹೊಸ ದಾವೆ ಹೂಡಿದೆ. ಪಾರ್ಲರ್ ಸಹಭಾಗಿತ್ವದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಒದಗಿಸುತ್ತಿದ್ದ ಅಮೆಜಾನ್ ವೆಬ್ ಸರ್ವಿಸಸ್, ಸೋಮವಾರ ತನ್ನ ಪಾಲುದಾರಿಕೆಯನ್ನು ಕಡಿದುಕೊಂಡಿದೆ. ಅಮೆಜಾನ್ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಪಾರ್ಲರ್ ಆರೋಪಿಸಿದ್ದು, ಸೋಮವಾರ ಮಧ್ಯಾಹ್ನದ ಬಳಿಕ ಅಮೆಜಾನ್ ಷೇರುಗಳಲ್ಲಿ ಅಲ್ಪ ಇಳಿಕೆಯಾಗಿದೆ.

ಟ್ರಂಪ್ ಖಾತೆ ಸ್ಥಗಿತ: ಟ್ವಿಟ್ಟರ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿಟ್ರಂಪ್ ಖಾತೆ ಸ್ಥಗಿತ: ಟ್ವಿಟ್ಟರ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಫೇಸ್‌ಬುಕ್ ಮತ್ತಷ್ಟು ಕಠಿಣ ನಿಯಮ

ಫೇಸ್‌ಬುಕ್ ಮತ್ತಷ್ಟು ಕಠಿಣ ನಿಯಮ

ಟ್ರಂಪ್ ಬೆಂಬಲಿಗರು ಆರಂಭಿಸಿದ 'ಸ್ಟಾಪ್ ದಿ ಸ್ಟೀಲ್' ಅಭಿಯಾನದಲ್ಲಿನ ಪೋಸ್ಟ್‌ಗಳನ್ನು ನಿಯಂತ್ರಿಸಲು ಫೇಸ್‌ಬುಕ್ ಸೋಮವಾರ ಹೆಚ್ಚುವರಿ ನೀತಿಗಳ ಸರಣಿಯನ್ನು ಪ್ರಕಟಿಸಿದೆ. ಬೈಡನ್ ಅವರ ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ತನ್ನಲ್ಲಿನ ರಾಜಕೀಯ ಜಾಹೀರಾತುಗಳ ನಿರ್ಬಂಧವನ್ನು ಮುಂದುವರಿಸಲಾಗುವುದು ಮತ್ತು ಹಾನಿಕಾರ ವಿಷಯಗಳ ಮೇಲೆ ತೀವ್ರ ನಿಗಾ ಇರಿಸಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ.

ಪಾರ್ಲರ್ ಆಪ್ ಹೊರಕ್ಕೆ

ಪಾರ್ಲರ್ ಆಪ್ ಹೊರಕ್ಕೆ

ಟ್ವಿಟ್ಟರ್ ಮತ್ತು ಫೇಸ್‌ಬುಕ್ ಅಲ್ಲದೆ ಇತರೆ ತಾಂತ್ರಿಕ ದಿಗ್ಗಜ ಕಂಪೆನಿಗಳು ಕೂಡ ಡೊನಾಲ್ಡ್ ಟ್ರಂಪ್ ಹಾಗೂ ಅವರ ಬೆಂಬಲಿಗರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕ್ರಮ ತೆಗೆದುಕೊಂಡಿವೆ. ಒಂದು ಹಿಂಸಾಚಾರದ ಘಟನೆ ನಡೆದಿರುವುದರಿಂದ ಮತ್ತಷ್ಟು ಮಾರಕ ಗಲಭೆಗಳು ನಡೆಯುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳು ಕಠಿಣ ಹೆಜ್ಜೆ ಇರಿಸಿವೆ. ಟ್ರಂಪ್‌ಗೆ ಬೆಂಬಲವಾಗಿರುವ ಪಾರ್ಲರ್ ಆಪ್‌ಅನ್ನು ಆಪಲ್ ಮತ್ತು ಗೂಗಲ್ ತಮ್ಮ ಪ್ಲೇಸ್ಟೋರ್‌ಗಳಿಂದ ತೆಗೆದುಹಾಕಿವೆ.

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

English summary
Twitter, Amazon, Facebook and other tech companies faces fallout on Monday for banning Donald Trump and his supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X