ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಮಾಜಿ ಆಪ್ತನಿಗೆ 3 ವರ್ಷಗಳ ಜೈಲು ಶಿಕ್ಷೆ ಆರಂಭ

|
Google Oneindia Kannada News

ವಾಷಿಂಗ್ಟನ್, ಮೇ.7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ವಕೀಲ ಅಟಾರ್ನಿ ಮೈಕಲ್ ಕೋಹಿನ್ ಜೈಲು ಶಿಕ್ಷೆ ಇಂದಿನಿಂದ ಆರಂಭವಾಗಿದೆ.

ತೆರಿಗೆ ವಂಚನೆ, ಪ್ರಚಾರದ ಹಣ ದುರ್ಬಳಕೆ ಸೇರಿ ಇತರೆ ಆರೋಪಗಳಿಗೆ ಸಂಬಂಧಿಸಿ ಅವರ ಮೂರು ವರ್ಷ ಜೈಲು ಶಿಕ್ಷೆ ಶುರುವಾಗಿದೆ.

2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಗೆ ಸವಾಲೆಸೆಯಲು ಬಿಡೆನ್ ಸಜ್ಜು2020ರ ಅಧ್ಯಕ್ಷೀಯ ಚುನಾವಣೆ ಟ್ರಂಪ್ ಗೆ ಸವಾಲೆಸೆಯಲು ಬಿಡೆನ್ ಸಜ್ಜು

ನ್ಯೂಯಾರ್ಕ್ ನಗರದ 70 ಮೈಲಿ ದೂರವಿರುವ ಜೈಲಿಗೆ ಅವರನ್ನು ಭಾನುವಾರ ಸಂಜೆ (ಅಮೆರಿಕದ ಸಮಯ) ಕರೆತರಲಾಗಿದೆ.

Trumps ex aide michael cohein begins 3 year jail term

ಕಳೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮೈಕಲ್ ಕೋಹಿನ್ ಟ್ರಂಪ್ ಅವರ ಅತ್ಯಾಪ್ತ ವಲಯದಲ್ಲಿ ಇದ್ದರು. ಪ್ರಚಾರ ತಂಡದ ಪ್ರಮುಖರಲ್ಲಿ ಒಬ್ಬರಾಗಿದ್ದರು.

ಜೈಲಿಗೆ ಹೋಗುವ ಮುನನ್ ಮಾಧ್ಯಮದೊಂದಿಗೆ ಮಾತನಾಡಿರುವ ಕೋಹಿನ್ 'ನಾನು ಹೇಳುವುದು ಸಾಕಷ್ಟಿದೆ, ಭವಿಷ್ಯದಲ್ಲಿ ಎಲ್ಲಾ ಸತ್ಯವನ್ನು ತಿಳಿಸುತ್ತೇನೆ '' ಎಂದು ಹೇಳಿದ್ದಾರೆ.

ಈ ಹಿಂದೆ ಚುನಾವಣಾ ಗೆಲುವಿನ ಬಳಿಕ ಅಧ್ಯಕ್ಷ ಟ್ರಂಪ್‌ಗಾಗಿ ಬುಲೆಟ್ ಸ್ವೀಕರಿಸಲು ತಯಾರಿದ್ದೇನೆ ಎಂದು ಹೇಳಿಕೆ ನೀಡಿದ್ದ ಕೋಹಿನ್ ಈಗ ತಿರುಗಿ ಬಿದ್ದಿದ್ದಾರೆ.

ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್

ನಾನು ಜೈಲುಶಿಕ್ಷೆ ಮುಗಿಸಿ ಹೊರಗೆ ಬರುವಷ್ಟರಲ್ಲಿ ಅಮೆರಿಕವು ಅನ್ಯಾಯ, ಸುಳ್ಳು ಹಾಗೂ ಭಯದಿಂದ ಮುಕ್ತವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.

52 ವರ್ಷದ ಕೋಹಿನ್ ಟ್ರಂಪ್ ಅವರ ಉದ್ಯಮ ಹಾಗೂ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದರು.

2016ರಲ್ಲಿ ಮಾಸ್ಕೋದಲ್ಲಿ ಟ್ರಂಪ್ ಟವರ್ ನಿರ್ಮಿಸಲು ಹಾಗೂ ಅಮೆರಿಕ ಅಧ್ಯಕ್ಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಮಹಿಳೆಯರಿಗೆ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಅಮೆರಿಕ ಕಾಂಗ್ರೆಸ್ ಗೆ ಸುಳ್ಳು ಹೇಳಿರುವ ಆರೋಪ ಕೋಹಿನ್ ವಿರುದ್ಧ ಸಾಭೀತಾಗಿತ್ತು.

ಕಳೆದ ಜೂನ್‌ನಲ್ಲಿ ತೆರಿಗೆ ವಂಚನೆ ಪ್ರಕರಣದಲ್ಲಿಯೂ ಈತ ಅಪರಾಧಿ ಎನ್ನುವುದು ಸಾಭೀತಾಗಿತ್ತು.ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ 1.94 ಮಿಲಿಯನ್ ಯುಎಸ್ ಡಾಲರ್ ದಂಡವನ್ನೂ ಕೊಹಿನ್‌ಗೆ ಹಾಕಲಾಗಿತ್ತು.

English summary
Michael Cohen, the former lawyer of US president Donald Trump, began serving the 3-year prison term for Federal crimes including charges of tax evasion and campaign finance violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X